ಕಲಬುರಗಿ: ಹೆಚ್.ಡಿ.ಕುಮಾರಸ್ವಾಮಿ ಸಿಎಂ ಆಗುವುದು ನಿಶ್ಚಿತ. ಒಂದು ವೇಳೆ ಸಿಎಂ ಆಗದಿದ್ದರೆ ರಾಜಕೀಯ ನಿವೃತ್ತಿ ಪಡೆಯುತ್ತೇನೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ.ಇಬ್ರಾಹಿಂ ಹೇಳಿದರು.
ಮಾಧ್ಯಮದವರೊಂದಿಗೆ ಮಾತನಾಡಿ, ನನ್ನ ಅನುಭವದ ಆಧಾರದ ಮೇಲೆ ಹೇಳುತ್ತಿದ್ದೇನೆ, ಮುಂದಿನ ಬಾರಿ ಹೆಚ್ ಡಿಕೆ ಅಧಿಕಾರ ಕ್ಕೆ ಬಂದೇ ಬರುತ್ತಾರೆ ಎಂದು ಅಭಿಪ್ರಾಯಪಟ್ಟರು. ಕಾಂಗ್ರೆಸ್ ಮತ್ತು ಬಿಜೆಪಿ ಒಂದೇ ಮರದ ಎರಡು ಹಕ್ಕಿಗಳು. ಕಾಂಗ್ರೆಸ್, ಬಿಜೆಪಿ ನಾಯಕರು ಜೈಲಿಗೆ ಹೋಗಿ ಬಂದಿದ್ದಾರೆ.
ನಮ್ಮ ನಾಯಕರು ಜೈಲಿನಲ್ಲಿಲ್ಲ, ಬೇಲ್ ಮೇಲೆ ಹೊರಬಂದಿಲ್ಲ. ಬಿಜೆಪಿ, ಕಾಂಗ್ರೆಸ್ ಎರಡೂ ಪಕ್ಷದವರು ಜನರನ್ನು ಕರೆಸುತ್ತಾರೆ. ಜನ ಇದ್ದಲ್ಲಿಗೆ ನಾವು ಹೋಗುತ್ತಿದ್ದೇವೆ. ಕಾಂಗ್ರೆಸ್ನವರು ಹವಾನಿಯಂತ್ರಿತ ಬಸ್ನಲ್ಲಿ ತಿರುಗುತ್ತಿದ್ದಾರೆ ಎಂದರು.
ಬಿಜೆಪಿ ನಾಯಕರು ಹೆಲಿಕಾಪ್ಟರ್ ಮೂಲಕ ತಿರುಗಾಡುತ್ತಿದ್ದಾರೆ. ಕಾಂಗ್ರೆಸ್, ಬಿಜೆಪಿಯವರಿಗೆ ಬರೀ ಸಿಡಿಗಳು ಮಾತ್ರ ಬೇಕಿದೆ ಎಂದು ಕಿಡಿಕಾರಿದರು.ಕಾಂಗ್ರೆಸ್ಗೂ ಬಿಜೆಪಿ ಮತ್ತು ಜೆಡಿಎಸ್ ಪಕ್ಷಕ್ಕೆ ವ್ಯತ್ಯಾಸ ಇದೆ. ಡಿ.ಕೆ. ಶಿವಕುಮಾರ್ ಅವರೆ ಕುಮಾರಸ್ವಾಮಿ ಸರ್ಕಾರ ಬಿಳಿಸಿದವರು ಯಾರು ಎಂದು ಪ್ರಶ್ನಿಸಿದರು. ಬಹಿರಂಗ ಚರ್ಚೆಗೆ ಬರೋದಾದ್ರೆ ಬನ್ನಿ ಎಂದು ಸವಾಲು ಹಾಕಿದರು.