ಬೆಂಗಳೂರು: ‘ಪೇಶ್ವೆಗಳ ಬಗ್ಗೆ, ಓಡಿ ಬಂದವರ ಬಗ್ಗೆ ನಾನು ಯಾವುದೇ ತಪ್ಪು ಮಾತಾಡಿಲ್ಲ. ಕ್ಷಮೆ ಕೇಳುವ ಪ್ರಶ್ನೆಯೇ ಇಲ್ಲ. ನಾನು ಮತ್ತು ನನ್ನ ಕುಟುಂಬ ಬ್ರಾಹ್ಮಣರ ಪರವಾಗಿ ಹಲವು ಕೆಲಸ ಮಾಡಿದ್ದೇನೆ ಎಂದು ಜೆಡಿಎಸ್ ನಾಯಕ ಎಚ್.ಡಿ.ಕುಮಾರಸ್ವಾಮಿ ಹೇಳಿದರು.
ಮಾಧ್ಯಮದವರೊಂದಿಗೆ ಮಾತನಾಡಿ, ‘ಕ್ಷಮೆ ಕೇಳುವ ತಪ್ಪನ್ನು ನಾನು ಮಾಡಿಲ್ಲ. ನನ್ನಿಂದ ಬ್ರಾಹ್ಮಣರಿಗೆ ಅವಮಾನವಾಗಿಲ್ಲ. ನಾನು ಯಾವುದೇ ಸಮುದಾಯಕ್ಕೆ ಅಗೌರವ ತೋರಿಲ್ಲ. ಹೀಗಾಗಿ ಯಾರ ಕ್ಷಮೆಯನ್ನೂ ಕೇಳಬೇಕಿಲ್ಲ’ ಎಂದು ಸಮರ್ಥಿಸಿದರು.
ಶೃಂಗೇರಿ ಮಠ ಒಡೆದವರು, ಶಂಕರಾಚಾರ್ಯರ ವಂಶಸ್ಥರನ್ನು ಓಡಿಸಿದವರು’ ಎಂದು ಸಮುದಾಯದ ಬಗ್ಗೆ ಹಗುರವಾಗಿ ಮಾತನಾಡಿದ್ದರು. ನಂತರ ಚರ್ಚೆಯನ್ನು ಪೇಶ್ವೆಗಳ ಕಡೆಗೆ ತಿರುಗಿಸಿ, ಡಿಎನ್ಎ ಕುರಿತು ಪ್ರಸ್ತಾಪಿಸಿದ್ದರು. ಕುಮಾರಸ್ವಾಮಿ ಹೇಳಿಕೆಯನ್ನು ಬ್ರಾಹ್ಮಣ ಸಮುದಾಯ ತೀವ್ರವಾಗಿ ಖಂಡಿಸಿ, ಕ್ಷಮೆಯಾಚಿಸಬೇಕು ಎಂದು ಆಗ್ರಹಿಸಿತ್ತು.
ಬ್ರಾಹ್ಮಣ ಸಮಾಜದ ಬಂಧುಗಳ ಬಗ್ಗೆ ನಾನು ಎಂದೂ ಅಗೌರವವಾಗಿ ನಡೆದುಕೊಂಡಿಲ್ಲ. ಕಷ್ಟಗಳನ್ನು ಹೇಳಿಕೊಳ್ಳಲು ನನ್ನ ಮನೆಗೆ ಬರುವ ಯಾರನ್ನೂ ನಾನು ಯಾವ ಜಾತಿ ಎಂದು ಕೇಳದೆ ಸಹಾಯ ಮಾಡಿದ್ದೇನೆ’ ಎಂದರು.