ಬೆಂಗಳೂರು : ದೀಪಾವಳಿಗೆ ಮನೆಗೆ ದೀಪಾಲಂಕಾರ ಮಾಡಲು ವಿದ್ಯುತ್ ಕಂಬದಿಂದ ಅಕ್ರಮವಾಗಿ ವಿದ್ಯುತ್ ಬಳಸಿದ ಆರೋಪ ಮಾಜಿ ಮುಖ್ಯಮಂತ್ರಿ ಹೆಚ್‌ಡಿ ಕುಮಾರಸ್ವಾಮಿ ವಿರುದ್ಧ ಕೇಳಿ ಬಂದಿದೆ. ಈ ಕುರಿತು ಸ್ವತಃ ಕುಮಾರಸ್ವಾಮಿ ಪ್ರತಿಕ್ರಿಯೆ ನೀಡಿದ್ದಾರೆ.
ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಅಪರಾಧ ಕೆಲಸ ಏನೂ ಮಾಡಿಲ್ಲ. ನಾನು ಈಗಾಗ್ಲೇ ಈ ಬಗ್ಗೆ ಟ್ವೀಟ್ ಮಾಡಿದ್ದೇನೆ. ತೋಟ ಮನೆಯಿಂದ ಬಂದು ನೋಡಿದ ತಕ್ಷಣ ತೆರವುಗೊಳಿಸಲು ಹೇಳಿದ್ದೇನೆ. ಡೆಕೋರೇಶನ್ ಮಾಡಲು ನಾವು ಹೇಳಿದ್ವಿ. ಆದರೆ, ಡೆಕೋರೇಶನ್ ಮಾಡಿದವರು ಮಿಸ್ ಆಗಿ ಕಂಬದಿಂದ ವಿದ್ಯುತ್ ಸಂಪರ್ಕ ತೆಗೆದುಕೊಂಡಿದ್ದಾರೆ. 2000 ಯೂನಿಟ್ ವಿದ್ಯುತ್ ಕದಿಯುವ ಕೆಲಸ ನಾನು ಯಾಕೆ ಮಾಡ್ಲಿ? ಕಾಂಗ್ರೆಸ್‌ನವರಿಗೆ ಮಾಡೋಕೆ ಕೆಲಸ ಇಲ್ಲ. ಹಾಗಾಗಿ, ಸುಮ್ನೆ ಈ ತರ ಕ್ಷುಲ್ಲಕ ಮನೋಸ್ಥಿತಿ ತೋರಿಸುತ್ತಿದ್ದಾರೆ ಎಂದು ಹೇಳಿದ್ದಾರೆ.
ಎಷ್ಟು ದಂಡ ಹಾಕ್ತಾರೋ ಕಟ್ತೀನಿ : ಈಗಾಗಲೇ ಅಧಿಕಾರಿಗಳು ಚೆಕ್ ಮಾಡಿದ್ದಾರೆ. ಅವರು ಎಷ್ಟು ದಂಡ ಹಾಕ್ತಾರೋ ನಾನು ಕಟ್ಟುತ್ತೇನೆ. ನಾನೇ ಅಧಿಕಾರಿಗಳಿಗೆ ನೋಟಿಸ್ ಕೊಡಲು ಹೇಳಿದ್ದು. ವಿದ್ಯುತ್ ಕಳ್ಳತನ ಮಾಡುವ ದುಸ್ಥಿತಿ ನನಗಿಲ್ಲ. ಗಾಂಧಿ, ಸತ್ಯ ಹರೀಶ್ಚಂದ್ರ ಈಗ ಇದ್ರೂ ಕಾಂಗ್ರೆಸ್‌ನವರು ಬದುಕಲು ಬಿಡುತ್ತಿರಲಿಲ್ಲ ಎಂದರು.
ಬೆಳಗಾವಿ ಅಧಿವೇಶನದಲ್ಲಿ ಮಾತನಾಡೋಣ ಬನ್ನಿ. ಗೃಹಜ್ಯೋತಿ ಹಣ ಇನ್ನೂ ಕೆಲವರ ಖಾತೆಗೆ ತಲುಪಿಲ್ಲ. ಇವರ ರೀತಿ ಲೂಟಿ ಹೊಡೆಯುವ ಕೆಲಸಕ್ಕೆ ನಾನು ಕೈ ಹಾಕಿಲ್ಲ. ಸುಳ್ಳು ಅಡ್ರೆಸ್ ಕೊಟ್ಟು ನಕಲಿ ಪತ್ರ ಕ್ರಿಯೇಟ್ ಮಾಡಿ ಭೂಮಿ ಕಬಳಿಸಿದ್ದು ನಾನಾ? ಇನ್ನೂ 10 ಅಲ್ಲ 20 ವರ್ಷ ಅಧಿಕಾರ ಮಾಡಿ ಬೇಡ ಅನ್ನಲ್ಲ, ಆದರೆ, ದೇಶ ಕೊಳ್ಳೆ ಹೊಡಿಯಬೇಡಿ ಅಷ್ಟೆ ಎಂದು ಹೇಳಿದರು.
ಮಂಜುನಾಥ್ ಗೌರಿ ಶಂಕರ್ ಕಾಂಗ್ರೆಸ್ ಸೇರುವ ಕುರಿತು ಮಾತನಾಡಿದ ಹೆಚ್‌ಡಿಕೆ, ಗೌರಿ ಶಂಕರ್ ಸುದ್ದಿ ಹಳೇದು. ನನಗೆ ಯಾವುದೇ ಶಾಕ್ ಆಗಿಲ್ಲ. ಅವರಿಗೆ ಅನುಕೂಲ ಆಗುವಂತೆ ತೀರ್ಮಾನ ಮಾಡ್ಕೊಳಿ ಅಂತ ನಾನೇ ಹೇಳಿದ್ದೇನೆ. ಅವರ ರಾಜಕೀಯ ಭವಿಷ್ಯಕ್ಕೆ ಎಲ್ಲಿ ಒಳ್ಳೆಯ ಅವಕಾಶ ಇದೆ ಅಲ್ಲಿಗೆ ಹೋಗ್ತಾರೆ ಎಂದರು.
ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ Twitter, Facebook , Youtube, Instagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.