ರಾಮನಗರ: ಏಪ್ರಿಲ್ 19ರಂದು ನಾನು ಚನ್ನಪಟ್ಟಣದಲ್ಲಿ ನಾಮಪತ್ರ ಸಲ್ಲಿಸುತ್ತೇನೆ ಎಂದು ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಹೇಳಿದರು. ಮಾಧ್ಯಮದವರೊಂದಿಗೆ ಮಾತನಾಡಿ, ಏ.17ರಂದು ಪುತ್ರ ನಿಖಿಲ್ ರಾಮನಗರದಲ್ಲಿ ನಾಮಪತ್ರ ಸಲ್ಲಿಸಲಿದ್ದು, ಏಪ್ರಿಲ್ 20 ಹಾಗೂ 21ಎರಡು ದಿನಗಳ ಕಾಲ ಕ್ಷೇತ್ರದಲ್ಲಿ ಪ್ರಚಾರ ಮಾಡುತ್ತೇನೆ ಎಂದು ಮಾಹಿತಿ ನೀಡಿದರು.
2018ರ ರೀತಿಯಲ್ಲಿ ಈ ಚುನಾವಣೆ ನಡೆಸಿಕೊಡಿ. ನೀವೇ ಮುಂದೆ ನಿಂತು ಚುನಾವಣೆ ನಡೆಸಿ. ನನ್ನನ್ನ ನೀವು ರಕ್ಷಣೆ ಮಾಡಿದ್ರೆ, ರಾಜ್ಯದ ಬಡವರನ್ನ ನಾನು ರಕ್ಷಣೆ ಮಾಡುತ್ತೇನೆ. ಈ ಬಾರಿ ನನಗೆ ಶಕ್ತಿ ನೀಡಿ ಎಂದು ಕುಮಾರಸ್ವಾಮಿ ಕ್ಷೇತ್ರದ ಜನರಲ್ಲಿ ಮನವಿ ಮಾಡಿದರು.
ಈಗಾಗಲೇ ರಾಜ್ಯದಲ್ಲಿ ಪಂಚರತ್ನ ರಥಯಾತ್ರೆ ಯಶಸ್ವಿಯಾಗಿದ್ದು, ಉತ್ತಮ ರೆಸ್ಪಾನ್ಸ್ ಸಿಕ್ಕಿದೆ, ನನಗೆ ಸಂಪೂರ್ಣ ವಿಶ್ವಾಸ ಇದೆ. ಈ ಬಾರಿಯೂ ಗೆಲ್ಲುತ್ತೇವೆ. ಚನ್ನಪಟ್ಟಣದಲ್ಲಿ ನಮ್ಮ ಶಕ್ತಿ ದೊಡ್ಡಮಟ್ಟದಲ್ಲಿದೆ. ಚನ್ನಪಟ್ಟಣಕ್ಕೆ ಮತ್ತೆ ಮುಖ್ಯಮಂತ್ರಿ ಆಗುವ ಅವಕಾಶ ಇದೆ, ರಾಮನಗರ ಜಿಲ್ಲೆಯ 3 ವಿಧಾನಸಭಾ ಕ್ಷೇತ್ರದಲ್ಲಿ ನಾವು ಗೆಲ್ಲುತ್ತೇವೆ. ನಿಮ್ಮ ಮನೆ ಮಗನನ್ನ ಬಿಟ್ಟು ಬೇರೆ ಯಾರೂ ಸಿಎಂ ಆಗುವುದಕ್ಕೆ ಆಗಲ್ಲ ಎಂದು ಹೇಳಿದರು.