Wednesday, May 31, 2023
spot_img
- Advertisement -spot_img

ಸ್ವರೂಪ್​ಗೆ ಬಿ ಫಾರಂ ನೀಡಿದ ಹೆಚ್. ಡಿಕುಮಾರಸ್ವಾಮಿ

ಬೆಂಗಳೂರು: ಸಾಮಾನ್ಯ ಕಾರ್ಯಕರ್ತನಿಗೇ ಹಾಸನದ ಟಿಕೆಟ್ ನೀಡುತ್ತೇನೆ ಎಂದು ಹೇಳುತ್ತಿದ್ದ ಮಾಜಿ ಸಿಎಂ ಹೆಚ್ ಡಿಕೆ ಇದೀಗ ಸ್ವರೂಪ್​ಗೆ ಬಿ ಫಾರಂ ನೀಡಿದ್ದಾರೆ.

ಹಾಸನದಲ್ಲಿ ರೇವಣ್ಣ ಹಾಗೂ ಕುಮಾರಸ್ವಾಮಿ ಮಧ್ಯೆ ಟಿಕೆಟ್ ವಿಚಾರವಾಗಿ ಮುಸುಕಿನ ಗುದ್ದಾಟ ನಡೆಯುತ್ತಿದ್ದು, ಇನ್ನೂ ಹಾಸನ ಕ್ಷೇತ್ರಕ್ಕೆ ಅಭ್ಯರ್ಥಿ ಘೋಷಣೆಯಾಗಿಲ್ಲ, ಈಗಾಗಲೇ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಆರಂಭವಾಗಿದ್ದು, ವಿವಿಧ ಪಕ್ಷಗಳ ಅಭ್ಯರ್ಥಿಗಳು ಬಿ ಫಾರಂ ಪಡೆದು ನಾಮಪತ್ರ ಸಲ್ಲಿಸುತ್ತಿದ್ದಾರೆ.

ಭವಾನಿ ರೇವಣ್ಣ, ಸ್ವರೂಪ್ ಪ್ರಬಲ ಆಕಾಂಕ್ಷಿಗಳಾಗಿದ್ದು, ಭವಅನಿ ರೇವಣ್ಣ ಟಿಕೆಟ್ ಗಾಗಿ ಪಟ್ಟು ಹಿಡಿದಿದ್ದಾರೆ. ಆದರೆ ಹೆಚ್​ಡಿ ಕುಮಾರಸ್ವಾಮಿ ಸೈಲೆಂಟಾಗಿ ಸ್ವರೂಪ್​ಗೆ ಬಿ ಫಾರಂ ನೀಡಿದ್ದಾರೆ. ಬೆಂಗಳೂರಿನ ಜೆಡಿಎಸ್ ಕಚೇರಿಯಲ್ಲಿ ಅಭ್ಯರ್ಥಿಗಳಿಗೆ ಬಿ ಫಾರಂ ವಿತರಣೆ ನಡೆಯುತ್ತಿದ್ದು, ಬಸವನಗುಡಿ ಕ್ಷೇತ್ರದ ಅಭ್ಯರ್ಥಿ ಅರಮನೆ ಶಂಕರ್​, ಯಾದಗಿರಿ ಜಿಲ್ಲೆ ಶಹಾಪುರ ಕ್ಷೇತ್ರದ ಅಭ್ಯರ್ಥಿ ಗುರುಪಾಟೀಲ್​ ಸೇರಿದಂತೆ ಅನೇಕ ಅಭ್ಯರ್ಥಿಗಳಿಗೆ ಬಿ ಫಾರಂ ನೀಡಲಾಗಿದೆ.

ಇದೇ ವೇಳೆ ಹಾಸನದ ಅಭ್ಯರ್ಥಿ ಘೋಷಣೆಯಾಗದಿದ್ದರೂ ಸ್ವರೂಪ್​ಗೆ ಬಿ ಫಾರಂ ನೀಡಿರುವುದು ಕುತೂಹಲಕ್ಕೆ ಕಾರಣವಾಗಿದೆ.

Related Articles

- Advertisement -

Latest Articles