ತುಮಕೂರು: ಕೊಂಡವಾಡಿ ಚಂದ್ರಶೇಖರ್ ಇಂದು ಜೆಡಿಎಸ್ ಸೇರಿದ್ದು, ಈ ವೇಳೆ ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ತಮ್ಮ ಕಾರ್ಯಕರ್ತರಿಗೆ ಹಣ ನೀಡಲು ಮುಂದಾಗಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
ಜಿಲ್ಲೆಯ ಮಧುಗಿರಿ ತಾಲೂಕಿನ ಕೈಮರ ಗ್ರಾಮ ನಡೆದ ಕಾಂಗ್ರೆಸ್ ಮುಖಂಡರ ಜೆಡಿಎಸ್ ಸೇರ್ಪಡೆ ಕಾರ್ಯಕ್ರಮದಲ್ಲಿ ಕುಮಾರಸ್ವಾಮಿ ಕೈಯಲ್ಲಿ ನೋಟುಗಳ ಕಂತೆ ಪತ್ತೆಯಾಗಿದೆ. ಅಲ್ಲದೆ, ಕಾರ್ಯಕರ್ತನಿಗೆ ಹಣ ನೀಡಲು ಕರೆದು 500 ರೂಪಾಯಿ ಮುಖಬೆಲೆಯ ನೋಟು ಹೊರತೆಗೆದಿದ್ದಾರೆ. ಈ ವೇಳೆ ಕ್ಯಾಮರಾ ನೋಡಿದ ಕುಮಾರಸ್ವಾಮಿ, ಕಾರ್ಯಕರ್ತನನ್ನು ವಾಪಸ್ ಹಿಂದೆ ಕಳುಹಿಸಿದ್ದಾರೆ.
ಕುಕ್ಕರ್ ಪಾಲಿಟಿಕ್ಸ್, ತವಾ ಪಾಲಿಟಿಕ್ಸ್, ಸೀರೆ ಹಂಚಿಕೆ ಪಾಲಿಟಿಕ್ಸ್ ಜೊತೆಗೆ ಇದೀಗ ಹಣ ಹಂಚಿಕೆ ಪಾಲಿಟಿಕ್ಸ್ ಆರಂಭವಾಗಿದೆ. ಮೊನ್ನೆಯಷ್ಟೇ ಡಿಕೆಶಿವಕುಮಾರ್ ದುಡ್ಡು ಎಸೆದು ಸುದ್ದಿಯಾಗಿದ್ದರು. ಈಗ ಕುಮಾರಸ್ವಾಮಿ ಅವರು ಕಾರ್ಯಕರ್ತರಿಗೆ ಹಣ ನೀಡಲು ಮುಂದಾದ ಪ್ರಸಂಗವೂ ನಡೆದಿದೆ.