ಕೋಲಾರ : ಶ್ರೀನಿವಾಸಪುರದಲ್ಲಿ ರಮೇಶ್ ಕುಮಾರ್ ಅವರನ್ನು ಸೂ. ಮಗ ಎಂದು ಜೆಡಿಎಸ್ ನಾಯಕ, ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಸಂಬೋಧಿಸಿದ ವಿಡಿಯೋ ವೈರಲ್ ಆಗಿದೆ.
ರಮೇಶ್ ಕುಮಾರ್ ಅಷ್ಟುದ್ದ ಭಾಷಣ ಮಾಡ್ತಾನೆ, ಸೂ. ಮಗ ಎಂದು ಬೈದಿರುವ ವಿಡಿಯೋ ಇದಾಗಿದೆ. ಈ ವೇಳೆ ಕುಮಾರಸ್ವಾಮಿ ಅವರ ಪುತ್ರ ನಿಖಿಲ್ ಕುಮಾರಸ್ವಾಮಿ ಹಾಗೂ ಇತರರು ಕಾರಿನಲ್ಲಿ ಹಿಂದಿನ ಸೀಟಿನಲ್ಲಿರುವುದು ಕಂಡುಬಂದಿದೆ.ಮಕ್ಕಳೊಂದಿಗೆ ತೆರಳಿ ಶಾಲಾ ಕಟ್ಟಡ ವೀಕ್ಷಿಸಿದ್ದ ಹೆಚ್. ಡಿ. ಕುಮಾರಸ್ವಾಮಿ ಕೋಪದಿಂದ ಕಾರ್ ಹತ್ತುವ ವೇಳೆ ಈ ರೀತಿ ಮಾತಾಡಿದ್ದಾರೆ.
ಕುಮಾರಸ್ವಾಮಿ ಪ್ರವಾಸ ವೇಳೆ ಮಾಸ್ತೇನಹಳ್ಳಿ ಸರ್ಕಾರಿ ಶಾಲೆಯ ವಿದ್ಯಾರ್ಥಿಗಳು ಶಾಲಾ ಕಟ್ಟಡವನ್ನು ಸರಿಪಡಿಸುವಂತೆ ಕುಮಾರಸ್ವಾಮಿ ಅವರ ಎದುರು ಪ್ರತಿಭಟನೆ ಮಾಡಿ, ಮನವಿ ಮಾಡಿದ್ದರು.
ಶ್ರೀನಿವಾಸಪುರ ತಾಲ್ಲೂಕು ಮಾಸ್ತೇನಹಳ್ಳಿ ಗ್ರಾಮದಲ್ಲಿ ಶಿಥಿಲವಾದ ಸರ್ಕಾರಿ ಶಾಲೆಯ ಕಟ್ಟಡ ವೀಕ್ಷಣೆ ಬಳಿಕ ತಮ್ಮ ಕಾರು ಹತ್ತುವ ವೇಳೆ ರಮೇಶ್ ಕುಮಾರ್ ಅವರ ವಿರುದ್ಧ ಕುಮಾರಸ್ವಾಮಿ ಆಡಿರುವ ಮಾತು ಇದೀಗ ವೈರಲ್ ಆಗಿದೆ.