Thursday, June 8, 2023
spot_img
- Advertisement -spot_img

ಜೆಡಿಎಸ್‌ನ 12 ಭರವಸೆ ಬಿಡುಗಡೆ ಮಾಡಿದ ಜೆಡಿಎಸ್ ವರಿಷ್ಠ ಹೆಚ್‌.ಡಿ.ದೇವೇಗೌಡ

ಬೆಂಗಳೂರು: ಇಂದು ಮಾಜಿ ಪ್ರಧಾನಮಂತ್ರಿಗಳು ಹಾಗೂ ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷರಾದ ಶ್ರೀ ಹೆಚ್.ಡಿ.ದೇವೇಗೌಡರ ಉಪಸ್ಥಿತಿಯಲ್ಲಿ ಜೆಡಿಎಸ್ ಪ್ರಣಾಳಿಕೆ – “ಕರುನಾಡಿನ ಜನರಿಗೆ ಜೆಡಿಎಸ್ ಪರಿಹಾರ” ಪತ್ರವನ್ನು ಜೆಡಿಎಸ್ ವರಿಷ್ಠ ಹೆಚ್ ಡಿ ದೇವೇಗೌಡರು ಬಿಡುಗಡೆಗೊಳಿಸಿದರು.

ಈ ವೇಳೆ ಜೆಡಿಎಸ್ ವರಿಷ್ಠ ಹೆಚ್ ಡಿ ದೇವೇಗೌಡರು ಮಾತನಾಡಿ, ನಾನು ಆಕ್ಸಿಡೆಂಟಲ್ ಪಿಎಂ ಅಲ್ಲ. 13 ಕ್ಕೂ ಹೆಚ್ಚು ಪಕ್ಷಗಳು ಬೆಂಬಲ ಕೊಟ್ಟು ನಾನು ಪ್ರಧಾನಿಯಾಗಿದ್ದೆ. ಮನಮೋಹನ್ ಸಿಂಗ್ ಆಕ್ಸಿಡೆಂಟಲ್ ಪಿಎಂ ಅಂತ ಪುಸ್ತಕ ಬರೆದಿದ್ದಾರೆ. ನಾನು ಆ ರೀತಿ ಅಲ್ಲ. ನಾನು ಜನರಿಂದಲೇ ಆಯ್ಕೆಯಾದವನು ಎಂದರು ಶಾಸಕರನ್ನು, ರಾಜ್ಯಾಧ್ಯಕ್ಷ ಇಬ್ರಾಹಿಂ ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಹೆಚ್ ಡಿ ಕುಮಾರಸ್ವಾಮಿ ಹೋಗ್ತಾರೆ, ಇದು ಭರವಸೆಯಲ್ಲ, ಪ್ರಣಾಳಿಕೆ, ಹೆಣ್ಣು ಮಕ್ಕಳಿಗೆ ನಾನು ಮೀಸಲಾತಿ ನೀಡಿದ್ದೆ, ಮೋದಿಯವರಿಗೆ ಕೂಡಾ ಪತ್ರ ಬರೆದಿದ್ದೇನೆ, ಹೆಣ್ಣು ಮಕ್ಕಳಿಗೆ ಮೊದಲ ಬಾರಿಗೆ ಮೀಸಲಾತಿ ನೀಡಿದ್ದು ನಾನು ಎಂದರು. ಅಂದಹಾಗೆ ಜೆಡಿಎಸ್ ಕರುನಾಡಿಗೆ ಕೊಟ್ಟ ಭರವಸೆಗಳೇನು ? ಅದರ ಪಟ್ಟಿ ಇಲ್ಲಿದೆ

1) ಮಾತೃಶ್ರೀ ಮತ್ತು ಮಹಿಳಾ ಸಬಲೀಕರಣ
2) ಕನ್ನಡವೇ ಮೊದಲು
3) ಶಿಕ್ಷಣವೇ ಆಧುನಿಕ ಶಕ್ತಿ
4) ಆರೋಗ್ಯ ಸಂಪತ್ತು
5) ರೈತ ಚೈತನ್ಯ
6)ಹಿರಿಯ ನಾಗರಿಕರಿಗೆ ಸನ್ಮಾನ
7) ಧಾರ್ಮಿಕ ಅಲ್ಪಸಂಖ್ಯಾತರ ಏಳಿಗೆ, ಪ್ರಗತಿ
8) ಯುವಜನ ಸಬಲೀಕರಣ
9) ವಿಕಲಚೇತನರಿಗೆ ಆಸರೆ
10) ಪರಿಶಿಷ್ಟ ಜಾತಿ, ಪರಿಶಿಷ್ಠ ಪಂಗಡಗಳ ಏಳಿಗೆ
11) ಆರಕ್ಷಕರಿಗೆ ಅಭಯ
12) ವೃತ್ತಿನಿರತ ವಕೀಲರ ಅಭ್ಯುದಯ

ಅಂದಹಾಗೆ ಪಂಚರತ್ನ, ಸಾಲಮನ್ನಾ, ಮಹಿಳೆಯರಿಗೆ ನೀಡಲಾಗುವ ಸವಲತ್ತು, ಆಟೋ ಡ್ರೈವರ್ ಗಳಿಗೆ ನೀಡಲಾಗುವ ಮಾಸಿಕ ಧನ ಸಹಾಯ ಸೇರಿದಂತೆ ಹಲವು ಭರವಸೆಗಳನ್ನು ಅನಾವರಣಗೊಳಿಸಲಾಗಿದೆ.

Related Articles

- Advertisement -spot_img

Latest Articles