Wednesday, November 29, 2023
spot_img
- Advertisement -spot_img

ಚಿಕ್ಕಮಗಳೂರು ರೆಸಾರ್ಟ್‌ನಲ್ಲಿ ಹೆಚ್‌ಡಿಕೆ: ಶಾಸಕರನ್ನು ಹೊರತುಪಡಿಸಿ ಉಳಿದವರಿಗಿಲ್ಲ ಎಂಟ್ರಿ

ಚಿಕ್ಕಮಗಳೂರು: ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ರೆಸಾರ್ಟ್‌ನತ್ತ ಮುಖ ಮಾಡಿದ್ದು ಚಿಕ್ಕಮಗಳೂರಿನ ರಿಲಾಕ್ಸ್ ಮೂಡ್‌ನಲ್ಲಿದ್ದಾರೆ. ಚಿಕ್ಕಮಗಳೂರು ತಾಲೂಕಿನ ಹೊಸಪೇಟೆ ಗ್ರಾಮದಲ್ಲಿರುವ ಖಾಸಗಿ ರೆಸಾರ್ಟ್ ಕುಮಾರಸ್ವಾಮಿ ವಾಸ್ತವ್ಯ ಹೊಡಿದ್ದಾರೆ.

ನಾಳೆ ಎಂ.ಎಲ್.ಸಿ ಭೋಜೇಗೌಡ ಅವರ ಮಗಳ ನಿಶ್ವಿತಾರ್ಥದಲ್ಲಿ ಹೆಚ್.ಡಿ.ಕುಮಾರಸ್ವಾಮಿ ಭಾಗವಹಿಸಲಿದ್ದಾರೆ. ಹೀಗಾಗಿ ರೆಸಾರ್ಟ್ ನ ರೂಂ ನತ್ತ ಯಾರಿಗೂ ಪ್ರವೇಶವಿಲ್ಲ ಎಂದು ಗೇಟ್ ಹಾಕಿ ರೆಸಾರ್ಟ್ ಸಿಬ್ಬಂದಿಗಳು ಬಂದ್ ಮಾಡಿದ್ದಾರೆ.

ಸಂಜೆಯೊಳಗೆ ಜೆಡಿಎಸ್ ಶಾಸಕರು ಬರಲಿದ್ದು, ಸಂಜೆ ಶಾಸಕರೊಂದಿಗೆ ಸಭೆ ನಡೆಸುವ ಸಾಧ್ಯತೆ ಇದೆ. ಆದರೆ ಮಾಧ್ಯಮಗಳಿಗೆ ಸಿಗೋದು ಡೌಟ್‌ ಎಂದು ಹೇಳಲಾಗ್ತಿದೆ.

ಇದನ್ನೂ ಓದಿ: ಸುದ್ದಿಗೋಷ್ಠಿ ಕರೆದ ಮಾಜಿ ಸಂಸದ ಮುದ್ದಹನುಮೇಗೌಡ: ಮತ್ತೆ ‘ಕೈ’ ಹಿಡಿಯುವ ಸಾಧ್ಯತೆ

ಅಂದಹಾಗೆ ಮಾಜಿ ಸಿಎಂ ಹೆಚ್​ಡಿ ಕುಮಾರಸ್ವಾಮಿ ಹಿಗ್ಗಾಮುಗ್ಗವಾಗಿ ಕಾಂಗ್ರೆಸ್‌ ನ್ನು ತರಾಟೆಗೆ ತೆಗೆದುಕೊಳ್ಳುತ್ತಿದ್ದಾರೆ. ತಂದೆ ಸಿದ್ದರಾಮಯ್ಯ ಜೊತೆ ದೂರವಾಣಿ ಕರೆ ಮೂಲಕ ಸಾರ್ವಜನಿಕವಾಗಿ ಲಿಸ್ಟ್ ಬಗ್ಗೆ ಮಾತನಾಡಿದ ಪುತ್ರ ಡಾ.ಯತೀಂದ್ರ ವಿಡಿಯೋ ವೈರಲ್ ಆಗಿತ್ತು. ಈ ವಿಚಾರವಾಗಿ ಮಾಜಿ ಸಿಎಂ ಹೆಚ್‌ ಡಿಕೆ ಆಕ್ರೋಶ ವ್ಯಕ್ತಪಡಿಸಿದ್ದರು.

ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ TwitterFacebook YoutubeInstagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Related Articles

- Advertisement -spot_img

Latest Articles