ಮೈಸೂರು: ಮುಂದಿನ ಬಾರಿ ನಮ್ಮ ಗೆಲುವು ಶತಸಿದ್ಧ ಎಂದು ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಹೇಳಿದರು.
ಮಾಧ್ಯಮದವರೊಂದಿಗೆ ಮಾತನಾಡಿ, ಕಾಂಗ್ರೆಸ್ 130,140 ಸೀಟ್ ಗೆಲ್ತೇವೆ ಎಂದು ಅತಿಯಾದ ವಿಶ್ವಾಸದಲ್ಲಿದೆ, ಇದು ಹಾಸ್ಯಾಸ್ಪದ, ಈ ಸರ್ವೇ ರಿಪೋರ್ಟ್ ಗಳನ್ನು ಕಾಂಗ್ರೆಸ್ ಕಚೇರಿಯಲ್ಲಿ ಕಟ್ಟು ಹಾಕಿಸಿಕೊಂಡು ಇಟ್ಟುಕೊಳ್ಳಲಿ. ಕಾಂಗ್ರೆಸ್ ಚುನಾವಣೆಯಲ್ಲಿ 75 ಸೀಟ್ ಗಳನ್ನು ಸಹ ದಾಟುವುದಿಲ್ಲ ಎಂದು ಟೀಕಿಸಿದರು.
ಇನ್ನು ಬಿಜೆಪಿ ಎಲ್ಲಾ ಕ್ಷೇತ್ರದಲ್ಲೂ ಫೇಲ್ ಆಗಿದೆ. ಕೇವಲ ಪ್ರತಿನಿತ್ಯ ಜಾಹೀರಾತು ಕೊಡುವ ಮೂಲಕ ಅಭಿವೃದ್ಧಿ ಮಾಡಿದ್ದೇನೆ ಎಂದು ಹೇಳಿಕೊಳ್ಳುತ್ತಿದೆ ಎಂದು ಹೇಳಿದರು. ಸಿದ್ದರಾಮಯ್ಯ ಎರಡಲ್ಲ ಮೂರು ಕಡೆ ಸ್ಪರ್ಧೆ ಮಾಡಲಿ, ರಾಜಕೀಯದಲ್ಲಿ ದೇವೇಗೌಡರದ್ದು ಧೃತರಾಷ್ಟ್ರ ಪ್ರೇಮ ಎನ್ನುತ್ತಾರೆ. ಆದರೆ ಇವರ ಮಗನದ್ದು ಯಾವ ರೀತಿ ಪ್ರೇಮ ಎಂದು ಪ್ರಶ್ನೆ ಮಾಡಿದರು.
ನಾವು ಸುಮ್ಮನಿದ್ರೂ 50 ಸೀಟ್ ಗೆಲ್ಲುತ್ತೇವೆ. ಆದರೆ ಶ್ರಮ ಪಟ್ಟರೆ 125 ಸೀಟ್ ಗೆಲ್ಲಬಹುದು, ಅದಕ್ಕಾಗಿಯೇ ತಾಯಿ ಚಾಮುಂಡೇಶ್ವರಿಯ ಅನುಗ್ರಹಕ್ಕೆ ಕ್ಷೇತ್ರದಲ್ಲೇ ಸಮಾರೋಪ ನಡೆಸಲಾಯಿತು ಎಂದರು.
ಇನ್ನೆರೆಡು ದಿನಗಳಲ್ಲಿ ಜೆಡಿಎಸ್ ನ ಎರಡನೇ ಪಟ್ಟಿ ಬಿಡುಗಡೆ ಆಗಲಿದೆ, ಸಮಾರೋಪ ಯಶಸ್ವಿಯಾಗಿ ನಡೆಸಿದ್ದಕ್ಕೆ ಜನತೆಗೆ, ಕಾರ್ಯಕರ್ತರಿಗೆ ಹಾಗೂ ಕೆಎಸ್ ಆರ್ ಟಿಸಿ, ಬಿಎಂಟಿಸಿ, ಖಾಸಗಿ ಬಸ್ ಮಾಲೀಕರು ಹಾಗೂ ಚಾಲಕರಿಗೆ ಹಾಗೂ ಪೊಲೀಸರಿಗೆ ಧನ್ಯವಾದ ಅರ್ಪಿಸಿದರು.