ವಿಧಾನ ಪರಿಷತ್ ಚುನಾವಣೆಗೆ ಟಿಕೆಟ್ ನಿರೀಕ್ಷೆಯಲ್ಲಿದ್ದ ಮಾಜಿ ಎಂಎಲ್ಸಿ ಸಂದೇಶ್ ನಾಗರಾಜ್ಗೆ ಭಾರೀ ಹಿನ್ನೆಡೆಯಾಗಿದೆ. ಜೆಡಿಎಸ್ನಿಂದ ಹೊರ ನಡೆದಿದ್ದ ನಾಗರಾಜ್ ಬಿಜೆಪಿಯಿಂದ ಟಿಕೆಟ್ ನಿರೀಕ್ಷೆಯಲ್ಲಿದ್ದರು. ಆದ್ರೆ ಕೊನೆಯ ಕ್ಷಣದಲ್ಲಿ ಬಿಜೆಪಿಯಿಂದ ಟಿಕೆಟ್ ಕೈ ತಪ್ಪಿತ್ತು. ಈ ಹಿನ್ನೆಲೆಯಲ್ಲಿ ಮತ್ತೆ ಜೆಡಿಎಸ್ ಕದ ತಟ್ಟಿದ್ದರು. ಹೆಚ್.ಡಿ.ಕುಮಾರಸ್ವಾಮಿ ಅವರನ್ನೂ ಭೇಟಿಯಾಗಿ ಮಾತುಕತೆ ನಡೆಸಿದ್ದರು. ಆದ್ರೆ ಜೆಡಿಎಸ್ನಿಂದ ಸಿದ್ದರಾಮಯ್ಯರ ಆಪ್ತ ಮಂಜೇಗೌಡರನ್ನ ಕಾಂಗ್ರೆಸ್ನಿಂದ ಜೆಡಿಎಸ್ಗೆ ಕರೆತಂದು ಟಿಕೆಟ್ ನೀಡಲಾಯ್ತು ಇಂದ್ರಿಂದ ಅತಂತ್ರರಾದ ಸಂದೇಶ್ ನಾಗರಾಜ್ ಈ ಬಾರಿಯ ಚುನಾವಣೆಯಿಂದ ದೂರವೇ ಉಳಿದಿದ್ದಾರೆ. ಬಳಿಕ ಪತ್ರವೊಂದನ್ನ ಬರೆದು ಬಿಜೆಪಿಯಲ್ಲಿ ಅವರಿಗೆ ಟಿಕೆಟ್ ಕೊಡಸಲು ಒತ್ತಾಸೆಯಾಗಿ ನಿಂತವರಿಗೆ ಹಾಗೂ ಜೆಡಿಎಸ್ನ ವರಿಷ್ಠರಾ ಹೆಚ್.ಡಿ.ದೇವೇಗೌಡರಿಗೆ ಮತ್ತು ಶಾಸಕ ರೇವಣ್ಣರಿಗೆ ಧನ್ಯವಾದ ತಿಳಿಸಿದ್ದಾರೆ.
ಸದ್ಯ ಇದಕ್ಕೆ ಪ್ರತಿಕ್ರಿಯೆ ನೀಡಿರುವ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ, 12 ವರ್ಷ ಸಂದೇಶ್ ನಾಗರಾಜ್ಗೆ ಬಿಜೆಪಿಯವರೇ ಬೆಂಬಲ ನೀಡಿದ್ದಾರೆ. ಹಾಗಾಗಿ ಅವರಿಗೆ ಧನ್ಯವಾದ ತಿಳಿಸಿದ್ದಾರೆ. ಇದರ ಬಗ್ಗೆ ಹೆಚ್ಚು ಮಾತು ಬೇಡ ಅಂತಾ ಕುಮಾರಸ್ವಾಮಿ ಪ್ರಕತಿಕ್ರಿಯಿಸಲು ನಿರಾಕರಿಸಿದ್ದಾರೆ.