Monday, March 27, 2023
spot_img
- Advertisement -spot_img

ಮಳೆಯ ಕಾರಣ ಪಂಚರತ್ನ ರಥಯಾತ್ರೆ 4 ದಿನ ಮುಂದೂಡಿದ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ

ಬೆಂಗಳೂರು: ಚಿಕ್ಕನಾಯಕನಹಳ್ಳಿ ವಿಧಾನಸಭೆ ಕ್ಷೇತ್ರದಿಂದ ಪುನಾರಂಭ ಆಗಬೇಕಿದ್ದ ಪಂಚರತ್ನ ರಥಯಾತ್ರೆ ನಾಲ್ಕು ದಿನಗಳ ಮಟ್ಟಿಗೆ ಮುಂದೂಡಲಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ತಿಳಿಸಿದ್ದಾರೆ.

ಬಂಗಾಳಕೊಲ್ಲಿಯಲಿ ಉಂಟಾಗಿರುವ ವಾಯುಭಾರ ಕುಸಿತದಿಂದ ತುಮಕೂರು ಜಿಲ್ಲೆ ಸೇರಿದಂತೆ ರಾಜ್ಯದ ಒಳನಾಡು ಭಾಗದಲ್ಲಿ ಭಾರೀ ಮಳೆ ಸುರಿಯುತ್ತಿದ್ದು, ಈ ಕಾರಣಕ್ಕೆ ಪಂಚರತ್ನ ರಥಯಾತ್ರೆಯನ್ನು ಅನಿವಾರ್ಯವಾಗಿ ಮುಂದಕ್ಕೆ ಹಾ ಎಂದು ಮಾಜಿ ಮುಖ್ಯಮಂತ್ರಿ ಪ್ರಕಟಣೆ ಹೊರಡಿಸಿದ್ದಾರೆ.

ತುಮಕೂರು ಜಿಲ್ಲೆಯಲ್ಲಿ ಯಲ್ಲೋ ಅಲರ್ಟ್ ಘೋಷಣೆ ಮಾಡಿರುವ ಹವಾಮಾನ ಇಲಾಖೆಯು ಭಾರೀ ಮಳೆಯ ಮುನ್ಸೂಚನೆ ನೀಡಿದೆ. ಈ ಕಾರಣಕ್ಕೆ ಪಂಚರತ್ನ ರಥಯಾತ್ರೆ ಮಾರ್ಗ, ವೇಳಾಪಟ್ಟಿಯಲ್ಲಿ ಪರಿಷ್ಕರಣೆ ಮಾಡಲಾಗಿದೆ. ಪೂರ್ವ ನಿಗದಿತ ವೇಳಾಪಟ್ಟಿಯಂತೆ ರಥಯಾತ್ರೆಯು ಚಿಕ್ಕನಾಯಕನಹಳ್ಳಿಯಿಂದ ಶುರುವಾಗಬೇಕಿತ್ತು. ತದನಂತರ ತುರುವೇಕೆರೆ, ತುಮಕೂರು ಗ್ರಾಮಾಂತರ, ಕುಣಿಗಲ್ ಕ್ಷೇತ್ರಗಳಲ್ಲಿ ರಥಯಾತ್ರೆ ನಡೆಯಬೇಕಿತ್ತು.


ಡಿಸೆಂಬರ್ 15ರಂದು ಮಾಗಡಿಯಲ್ಲಿ ರಥಯಾತ್ರೆ ನಡೆಯಲಿದ್ದು, ಡಿಸೆಂಬರ್ 27ರಂದು ಮತ್ತೆ ತುಮಕೂರು ಜಿಲ್ಲೆಗೆ ರಥಯಾತ್ರೆ ಪ್ರವೇಶ ಮಾಡಲಿದೆ ಎಂದು ತಿಳಿಸಿದ್ದಾರೆ.ಡಿಸೆಂಬರ್ 27ರಂದು ತುರುವೇಕೆರೆ, 28ರಂದು ಚಿಕ್ಕನಾಯಕನಹಳ್ಳಿ, 29ರಂದು ತುಮಕೂರು ಗ್ರಾಮಾಂತರ, 30ರಂದು ಕುಣಿಗಲ್ ಕ್ಷೇತ್ರದಲ್ಲಿ ರಥಯಾತ್ರೆ ನಡೆಯಲಿದೆ.ಡಿಸೆಂಬರ್ 15ರಂದು ಮಾಗಡಿ, 16ರಂದು ರಾಮನಗರ, 17ರಂದು ಹಾರೋಹಳ್ಳಿ, 18ರಂದು ಕನಕಪುರ, 19ರಂದು ಚನ್ನಪಟ್ಟಣ ಕ್ಷೇತ್ರದಲ್ಲಿ ಪಂಚರತ್ನ ರಥಯಾತ್ರೆ ನಡೆಯಲಿದೆ.

ಡಿಸೆಂಬರ್ 20ರಂದು ಮಂಡ್ಯ ಜಿಲ್ಲೆಗೆ ರಥಯಾತ್ರೆ ಪ್ರವೇಶ ಮಾಡಲಿದ್ದು, 20ರಂದು ಮಳವಳ್ಳಿ, 21ಕ್ಕೆ ಮದ್ದೂರು, 22ಕ್ಕೆ ಮಂಡ್ಯ, 23ಕ್ಕೆ ಶ್ರೀರಂಗಪಟ್ಟಣ, 24ಕ್ಕೆ ಪಾಂಡವಪುರ, 25ಕ್ಕೆ ಕೆ.ಆರ್.ಪೇಟೆ, 26ಕ್ಕೆ ನಾಗಮಂಗಲ ಕ್ಷೇತ್ರದಲ್ಲಿ ಪಂಚರತ್ನ ರಥಯಾತ್ರೆ ನಡೆಯಲಿದೆ ಎಂದು ಹೇಳಿದ್ದಾರೆ.

Related Articles

- Advertisement -

Latest Articles