ಬೆಂಗಳೂರು: ಭವಾನಿ ರೇವಣ್ಣ ಅವರಿಗೆ ಹಾಸನ ಟಿಕೆಟ್ ಸಾಧ್ಯವೇ ಇಲ್ಲ , ಹಾಸನ ಕ್ಷೇತ್ರದ ಜೆಡಿಎಸ್ ಟಿಕೆಟ್ ನಿಷ್ಠಾವಂತ ಕಾರ್ಯಕರ್ತರಿಗೆ ಅಂತಾ ಹೇಳಿದ್ದೇನೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಸ್ಪಷ್ಟಪಡಿಸಿದರು.
ಮಾಧ್ಯಮಗಳ ಜತೆ ಮಾತನಾಡಿ,ನನ್ನ ಹತ್ತಿರ ಯಾವ ಬ್ಲಾಕ್ ಮೇಲ್ ನಡೆಯಲ್ಲ.ದೇವೆಗೌಡರ ಬಳಿ ಹೋಗಿ ಬ್ಲಾಕ್ ಮೇಲ್ ಮಾಡಬಹುದು.ನಾನು ಪಕ್ಷದ ಜವಾಬ್ದಾರಿ ತಗೆದುಕೊಂಡ ಮೇಲೆ ಕಾರ್ಯಕರ್ತರನ್ನು ಉಳಿಸಿಕೊಂಡಿದ್ದೇನೆ.ಕುಟುಂಬದಲ್ಲಿ ಏನೇ ಭಿನ್ನಾಭಿಪ್ರಾಯಗಳಿದ್ದರೂ ಈವರೆಗೂ ಕಾಪಾಡಿಕೊಂಡು ಬಂದಿದ್ದೇನೆ ಎಂದು ಖಡಕ್ ಆಗಿ ಹೇಳಿದರು. ಕಾರ್ಯಕರ್ತ ಯಾರು ಸಮರ್ಥವಾಗಿದ್ದರೆ ಅಂತ ನನಗೂ ಗೊತ್ತು, ನಿಮಗೂ ಗೊತ್ತು ಕಾರ್ಯಕರ್ತರೆ ಯಾರಿಗೆ ಟಿಕೆಟ್ ಅಂತ ಕೂಗ್ತಿದ್ದಾರೆ.
ಈಗಾಗಲೇ ತೀರ್ಮಾನವಾಗಿದೆ. ಸದ್ಯದಲ್ಲೆ ಘೋಷಣೆ ಕೂಡ ಆಗಲಿದೆ ಎಂದು ತಿಳಿಸಿದರು. ಮತ್ತೊಂದು ಮೈತ್ರಿ ಸರ್ಕಾರ ಮಾಡೋದಕ್ಕೆ ನನ್ನ ಹೋರಾಟವಿರುವುದು. ಈ ಸಲ ಬರೆದಿಟ್ಟುಕೊಳ್ಳಿ 120 ಸೀಟು ಗೆದ್ದೆ ಗೆಲ್ಲುತ್ತೇವೆ.ಪಕ್ಷ ಬಿಟ್ಟು ಹೋದವರ ಅವಶ್ಯಕತೆ ಇಲ್ಲ ಎಂದ ಹೆಚ್ಡಿಕೆ, ವರುಣಾ ಕ್ಷೇತ್ರದಲ್ಲಿ ಸಮರ್ಥ ಅಭ್ಯರ್ಥಿ ಹಾಕುತ್ತೇವೆ ಎಂದು ತಿಳಿಸಿದರು.