Saturday, June 10, 2023
spot_img
- Advertisement -spot_img

ನಮಗೆ ಒಂದು ಬಾರಿ ಅಧಿಕಾರಕ್ಕೆ ಬರಲು ಅವಕಾಶ ನೀಡಿ:ಹೆಚ್.ಡಿ. ಕುಮಾರಸ್ವಾಮಿ

ಬೆಂಗಳೂರು: ಜೆಡಿಎಸ್ ಅಧಿಕಾರಕ್ಕೆ ಬಂದರೆ ವಿದ್ಯಾರ್ಥಿನಿಯರಿಗೆ ಉಚಿತ ಎಲೆಕ್ಟ್ರಿಕಲ್ ಮೊಪೆಡ್ ದ್ವಿಚಕ್ರವಾಹನ ನೀಡುವುದಾಗಿ ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಘೋಷಿಸಿದ್ದಾರೆ.

ಪಂಚರತ್ನ ರಥಯಾತ್ರೆ ವೇಳೆ ಮಾತನಾಡಿ, ನಮಗೆ ಒಂದು ಬಾರಿ ಅಧಿಕಾರಕ್ಕೆ ಬರಲು ಅವಕಾಶ ನೀಡಿ ನಾವು ಅಧಿಕಾರಕ್ಕೆ ಬಂದರೆ ವರ್ಷಕ್ಕೆ ಐದು ಸಿಲಿಂಡರ್ ಉಚಿತವಾಗಿ ನೀಡುತ್ತೇವೆ ಎಂದು ತಿಳಿಸಿದರು.

ಮೇ 10 ಕ್ಕೆ ಚುನಾವಣೆ ದಿನಾಂಕ ನಿಗದಿಯಾಗಿದೆ. ಜವರಾಯಿಗೌಡರಿಗೆ ನಿಮ್ಮ ಆಶೀರ್ವಾದ ಕೇಳಲು ಬಂದಿದ್ದೇನೆ. ನಿಮ್ಮ ಬಡತನ ಹೋಗಲಾಡಿಸುವ ಕಾರ್ಯಕ್ರಮ ನಾವು ನೀಡಲಿದ್ದೇವೆ. ಇದೇ ವೇಳೆ ಅಭಿಮಾನ್ ಸ್ಟುಡಿಯೋದಲ್ಲಿ ವಿಷ್ಣು ಸ್ಮಾರಕ ಮಾಡಿಕೊಡಬೇಕು. ವಿಷ್ಣು ಸ್ಮಾರಕ ಗೊಂದಲದಲ್ಲಿದೆ . ಅದನ್ನು ರಿಪಡಿಸಿಕೊಡುವಂತೆ ಅಭಿಮಾನಿಗಳು ಮನವಿ ಮಾಡಿದರು. ಇದಕ್ಕೆ ಕಾನೂನಾತ್ಮಕವಾಗಿ ಹೇಗೆ ಸರಿಪಡಿಸಬಹುದು ಎನ್ನುವುದನ್ನು ತಿಳಿದು ಸರಿಪಡಿಸಲಾಗುವುದು ಎಂದರು.

ರಾಜ್ಯದಲ್ಲಿ ಒಂದು ಸವಾಲನ್ನು ಸ್ವೀಕಾರ ಮಾಡಿದ್ದೇವೆ. ಮುಂದಿನ ಚುನಾವಣೆ ನಂತರ ಐದು ವರ್ಷಗಳ ಕಾರ್ಯಕ್ರಮದಲ್ಲಿ ನಾವು ಹೇಳಿರುವ ಎಲ್ಲಾ ಯೋಜನೆಗಳನ್ನು ಪೂರ್ಣ ಮಾಡಲಿಲ್ಲ ಎಂದರೆ ಜಾತ್ಯಾತೀತ ಜನತಾದಳವನ್ನೇ ವಿಸರ್ಜನೆ ಮಾಡ್ತೀವಿ ಎಂದು ಹಲವು ಸಭೆ ಸಮಾರಂಭಗಳಲ್ಲಿ ಹೇಳಿದ್ದರು.

Related Articles

- Advertisement -spot_img

Latest Articles