ಹಾಸನ : ಅಭ್ಯರ್ಥಿ ವಿಚಾರದಲ್ಲಿ ನಾನೇ ಅಂತಿಮ ತೀರ್ಮಾನ ತೆಗೆದುಕೊಳ್ಳೋದು, ಅಕಸ್ಮಾತ್ ಸಿ ಎಂ ಇಬ್ರಾಹಿಂ ಹೇಳಿಕೆ ಕೊಟ್ಟಿದ್ದರೆ ಅದು ತಪ್ಪು ಎಂದು ಮಾಜಿ ಮುಖ್ಯಮಂತ್ರಿ ಹೆಚ್. ಡಿ. ಕುಮಾರಸ್ವಾಮಿ ಹೇಳಿದ್ದಾರೆ.
ಮಾಧ್ಯಮದವರೊಂದಿಗೆ ಮಾತನಾಡಿ, ಎಸ್ ಶ್ರೀನಿವಾಸ್ ರನ್ನು ಮರಳಿ ಒಳಗೆ ಬಾ ಯಾತ್ರಿಕನೇ ಎಂದು ಹೇಳುವ ಮೂಲಕ ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ. ಇಬ್ರಾಹಿಂ ಪಕ್ಷಕ್ಕೆ ಆಹ್ವಾನಿಸಿದ್ದರು. ತುಮಕೂರಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ್ದ ಅವರು, ನಮಗೆ ಯಾರ ಬಗ್ಗೆಯೂ ದ್ವೇಷವಿಲ್ಲ. ಒಂದು ಹಂತದಲ್ಲಿ ಅವರು ನಮ್ಮೊಂದಿಗೆ ಚೆನ್ನಾಗಿದ್ದರೂ ಕೆಟ್ಟ ಕಾಲದಿಂದಾಗಿ ದೂರವಾದರು. ಒಂದು ರೀತಿ ಚೌತಿಯಲ್ಲಿ ಚಂದ್ರನನ್ನು ನೋಡಿದ್ದಕ್ಕೆ ಕೃಷ್ಣನಿಗೂ ಕೆಟ್ಟ ಕಾಲ ಬಂದಿತ್ತು ಎಂದರು. ಈ ವಿಚಾರವಾಗಿ ಹೆಚ್ ಡಿಕೆ ಪ್ರತಿಕ್ರಿಯಿಸಿದ್ದಾರೆ.
ಕಾರ್ಯಕರ್ತರ ಪರವಾಗಿ ಈಗಾಗಲೇ ನಾಗರಾಜ್ ಕೆಲಸ ಕೆಲಸ ಮಾಡುತ್ತಿದ್ದಾರೆ. ಗುಬ್ಬಿ ಕ್ಷೇತ್ರದಲ್ಲಿ ಜೆಡಿಎಸ್ ಅಭ್ಯರ್ಥಿಯನ್ನು ಘೋಷಣೆ ಮಾಡಲಾಗಿದೆ. ಕಾರ್ಯಕರ್ತರ ಪರವಾಗಿ ಈಗಾಗಲೇ ನಾಗರಾಜ್ ಕೆಲಸ ಕೆಲಸ ಮಾಡುತ್ತಿದ್ದಾರೆ. ಗುಬ್ಬಿ ಕ್ಷೇತ್ರದಲ್ಲಿ ಜೆಡಿಎಸ್ ಅಭ್ಯರ್ಥಿಯನ್ನು ಘೋಷಣೆ ಮಾಡಲಾಗಿದೆ.
ಹೀಗಿರುವಾಗ ಯೋಚಿಸಿ ಹೇಳಿಕೆ ಕೊಡಬೇಕು ಇಂತಹ ವಿಚಾರದಲ್ಲಿ ಹುಡುಗಾಟ ಆಡಬಾರದು, ಇನ್ಮುಂದೆ ಹೇಳಿಕೆ ನೀಡುವಾಗ ಯೋಚಿಸಿ ನೀಡುವಂತೆ ಪಕ್ಷದ ಎಲ್ಲಾ ಮುಖಂಡರಿಗೆ ಸೂಚಿಸಿದ್ದಾರೆ.