ಬೆಂಗಳೂರು : ರಾಜ್ಯದಲ್ಲಿ ಜೆಡಿಎಸ್ ಸರ್ಕಾರ ಸ್ಥಾಪನೆ ಆಗುವುದು ಖಚಿತ. ಈ ಬಗ್ಗೆ ಯಾವುದೇ ಅನುಮಾನ ಇಲ್ಲ ಎಂದು ಮಾಜಿ ಸಿಎಂ ಹೆಚ್. ಡಿ. ಕುಮಾರಸ್ವಾಮಿ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ನಮ್ಮ ಭಾಗದಲ್ಲಿ ಜೆಡಿಎಸ್ ವೋಟ್‌ಗಳನ್ನು ಕುಂಠಿತಗೊಳಿಸುವ ಪ್ರಯತ್ನ ಯಶಸ್ವಿಯಾಗೋದಿಲ್ಲ ಜನರಿಗೆ ಯಾವ ರೀತಿ ಕಾರ್ಯಕ್ರಮ ನೀಡ ಬೇಕೆಂಬುದರ ಬಗ್ಗೆ ಬ್ಲೂ ಪ್ರಿಂಟ್ ಸಿದ್ಧಪಡಿಸುತ್ತಿದ್ದೇನೆ ಎಂದು ಹೇಳಿದರು.
ನನ್ನ ಭದ್ರ ಕೋಟೆಯ ಮೇಲೆ ಬ್ರಹ್ಮಾಸ್ತ್ರ ಬಿಡುವುದಿರಲಿ, ತಮ್ಮ ಕೋಟೆಯ ಫೌಂಡೇಷನ್ ಭದ್ರ ಪಡಿಸಿಕೊಳ್ಳಲಿ ಎಂದು ಬಿಜೆಪಿ ವಿರುದ್ಧ ಕಿಡಿಕಾರಿದರು. ಕಾಂಗ್ರೆಸ್‌ನವರು ಕೈಯಲ್ಲಿ ಖಜಾನೆ ಕೆರೆಯುತ್ತಿದ್ದರು. ಬಿಜೆಪಿಯವರು ಜೆಸಿಬಿ, ಹಿಟಾಚಿಯಿಂದ ಖಜಾನೆ ಕೆರೆಯುತ್ತಿದ್ದಾರೆ ಎಂದು ಕಿಡಿಕಾರಿದರು.
ಇತ್ತೀಚೆಗೆ ನಡೆಸಿರುವ ಸರ್ವೆ ಪ್ರಕಾರ 40 ರಿಂದ 60 ಸ್ಥಾನಗಳಲ್ಲಿ ಜೆಡಿಎಸ್ ಗೆಲ್ಲಲಿದೆ. ಮುಂದಿನ ಎರಡು ತಿಂಗಳು ಜನರ ಸಮೀಪಕ್ಕೆ ಹೋಗಿ ಜನರ ವಿಶ್ವಾಸ ಪಡೆದು ರಾಜ್ಯದಲ್ಲಿ ಅಧಿಕಾರಕ್ಕೆ ಬರುವಷ್ಟುಸ್ಥಾನಗಳಲ್ಲಿ ಗೆಲುವು ಸಾಧಿಸುತ್ತೇವೆ ಎಂದರು.
ಚಿಕ್ಕಮಗಳೂರಲ್ಲಿ ಅಭೂತಪೂರ್ವ ಪಂಚರತ್ನ ರಥಯಾತ್ರೆಗೆ ಅಪಾರ ಬೆಂಬಲ ಸಿಕ್ಕಿದೆ. ಯಾತ್ರೆ ವೇಳೆ ಜನರು ಸಾಕಷ್ಟುಸಂಕಷ್ಟಹೇಳಿದ್ದಾರೆ ಎಂದು ಹೇಳಿದರು. ಬಿಜೆಪಿಯವರಂತೆ ಜನರನ್ನು ಕರೆಸಿಕೊಂಡು ನಾವು ರೋಡ್ ಶೋ ಮಾಡ್ತಾ ಇಲ್ಲ. ಜನರು ಸ್ವಇಚ್ಛೆಯಿಂದ ಬರುತ್ತಿದ್ದಾರೆ ಎಂದರು.