ಹಾಸನ: ನನ್ನ ಧ್ವನಿ ಇನ್ನೂ ಎರಡು ತಿಂಗಳು ಇರಬೇಕು. ನನ್ನ ಆರೋಗ್ಯ ಹಾಳಾದರೆ ನೀವು ಬರುತ್ತೀರಾ? ಎಂದು ಮಾಜಿ ಸಿಎಂ ಹೆಚ್. ಡಿ. ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದರು.
ಹಾಸನದ ರಿಂಗ್ ರಸ್ತೆಯಲ್ಲಿ ಮಾತನಾಡಿ, ಅನಾರೋಗ್ಯದ ನಡುವೆ ಕೂಡ ನಿತ್ಯ 18 ಗಂಟೆ ಕೆಲಸ ಮಾಡುತ್ತಿದ್ದೇನೆ. ನೀವು ಹಾಸನದ ಟಿಕೆಟ್ ವಿಚಾರವಾಗಿ ಕೇಳಲು ನೀವು ಬಂದಿದ್ದೀರಿ. ನನಗೆ ರಾಜಕೀಯ ವಾಗಿ ಅಗ್ನಿಪರೀಕ್ಷೆ ಇದೆ ಅರ್ಥಮಾಡಿಕೊಳ್ಳಿ ಎಂದು ತಿಳಿಸಿದರು.
ಎರಡು ಬಾರಿ ಆಪರೇಷನ್ ಆಗಿರುವ ನಾನು ಯಾವನಿಗೋಸ್ಕರ ದುಡಿಯುತ್ತಿದ್ದೇನೆ? ರೈತರ ಉಳಿವಿಗಾಗಿ ಕೆಲಸ ಮಾಡುತ್ತಿದ್ದೇನೆ. ನನಗೆ ರಾಜಕೀಯ ಪರಿಜ್ಞಾನ ಇದೆ. ಹಾಸನ ಕ್ಷೇತ್ರದ ದ ಬಗ್ಗೆ ನನ್ನ ಹೃದಯದಲ್ಲಿ ವಿಶೇಷ ಗೌರವ ಇಟ್ಟು ಕೊಂಡಿದ್ದೇನೆ ಎಂದು ತಿಳಿಸಿದರು.
ನೀವು ಇಲ್ಲಿ ಸ್ವರೂಪ್ನನ್ನು ಗೆಲ್ಲಿಸಲು ಬಂದಿಲ್ಲ. ಸ್ವರೂಪ್ ಮನೆ ಹಾಳು ಮಾಡಲು ಬಂದಿದ್ದೀರಾ. ಏನು ತಮಾಷೆ ಮಾಡುತ್ತೀರಾ, ಗೌರವಯುತವಾಗಿ ಕೇಳಿ. ಇಲ್ಲಿ ರಾಜಕೀಯ ಮಾಡದಿರಬಹುದು, ನಾನು ಇಲ್ಲೇ ಹುಟ್ಟಿದವನು. ಸಮಾಧಾನವಾಗಿ ಇರದಿದ್ದರೆ ನಾನು ಮಾತನಾಡಲ್ಲ ಎಂದರು. ಕುಟುಂಬದ ಹಿತಕ್ಕಿಂತ ರಾಜ್ಯದ ಜನತೆ ಹಿತವೇ ನನಗೆ ಮುಖ್ಯ. ಯಾವುದೇ ಕಾರಣಕ್ಕೂ ಜನತೆಯ ಭಾವನೆಗೆ ತಲೆ ಬಾಗುತ್ತೇನೆ ಎಂದು ಸಂದೇಶ ರವಾನೆ ಮಾಡಿದರು.