ವಿಜಯಪುರ : ಕರ್ನಾಟಕ ರಾಜ್ಯವನ್ನು ರಾಮ ರಾಜ್ಯ ಮಾಡ್ತೀನಿ , ಆಗದಿದ್ರೆ ನಾನು ಜೆಡಿಎಸ್ ವಿಸರ್ಜನೆ ಮಾಡ್ತೇನೆ ಎಂದು ಹೆಚ್ ಡಿ ಕುಮಾರಸ್ವಾಮಿ ಹೇಳಿದ್ದಾರೆ.
ಸುದ್ದಿಗೋಷ್ಠಿ ನಡೆಸಿ ಮಾತನಾಡಿ, ಪಂಚರತ್ನ ರಥಯಾತ್ರೆಗೆ ಅಭೂತಪೂರ್ವ ಬೆಂಬಲ ಸಿಕ್ಕಿದೆ, ಕುಮಾರಸ್ವಾಮಿ ಆರೋಗ್ಯ ಸರಿಯಿಲ್ಲ ಪಂಚರತ್ನ ರಥಯಾತ್ರೆ ನಡೆಯಲಿದೆ, ಒಂದು ಬಾರಿ ರಾಜ್ಯದ ಜನತೆಗೆ ಅಧಿಕಾರ ಕೊಡಿ ಎಂದಿದ್ದೇನೆ, ರಾಜ್ಯ ರಾಮ ರಾಜ್ಯ ಮಾಡದಿದ್ರೆ ಜೆಡಿಎಸ್ ವಿಸರ್ಜನೆ ಮಾಡ್ತೇವೆ ಎಂದು ಹೇಳಿದ್ದಾರೆ. ಇತ್ತಿಚೆಗೆ ಸಿದ್ದರಾಮಯ್ಯ ಹೇಳಿಕೆ ಗಮನಿಸಿದ್ದೇನೆ, ಜೆಡಿಎಸ್ ಬಿಜೆಪಿ ಬಿ ಟೀಂ ಅನ್ನೋದನ್ನು ಬಿಟ್ಟು ಅವರ ಬಳಿ ಯಾವುದೇ ಸರಕು ಇಲ್ಲ ಎಂದರು.
ವಿಜಯಪುರದಲ್ಲಿ ನೀರಿದೆ, ಒಣ ಭೂಮಿ ಪ್ರದೇಶವಿದೆ. ಕೆಲಸ ಮಾಡುವ ಕೈಗಳಿಗೆ ಉದ್ಯೋಗ ಇಲ್ಲ. ಕರ್ನಾಟಕ ಜನತೆ ಬಹಳ ಬುದ್ಧಿವಂತರಿದ್ದಾರೆ. ಜನ ಎರಡು ರಾಷ್ಟ್ರೀಯ ಪಕ್ಷಗಳ ವಿರುದ್ಧ ಜನರು ಬೇಸತ್ತು ಹೋಗಿದ್ದಾರೆ ಎಂದರು.
ಜನತೆಯ ಆಶೀರ್ವಾದದಿಂದ ರಾಜ್ಯದಲ್ಲಿ ಜೆಡಿಎಸ್ ಪಕ್ಷ ಅಧಿಕಾರಕ್ಕೆ ಬಂದರೆ 24 ಗಂಟೆಗಳಲ್ಲಿ ಸಾಲಮನ್ನಾ ಸೌಲಭ್ಯ ಪಡೆಯದ 2 ಲಕ್ಷ ರೈತರಿಗೆ ಹಣ ಬಿಡುಗಡೆ ಮಾಡಿ ಪಂಚರತ್ನ ಯೋಜನೆಗಳು ಜಾರಿ ತರುವ ಮೂಲಕ ರೈತರ, ದೀನದಲಿತರ, ಅಲ್ಪಸಂಖ್ಯಾತರ ಕಲ್ಯಾಣಕ್ಕಾಗಿ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ಭರವಸೆ ನೀಡಿದರು.