Thursday, June 8, 2023
spot_img
- Advertisement -spot_img

ಜೆಡಿಎಸ್ ಅಧಿಕಾರಕ್ಕೆ ತರಲು ದೇವೇಗೌಡರು ಶ್ರಮಿಸ್ತಿದ್ದಾರೆ :ಹೆಚ್.ಡಿ.ಕೆ

ರಾಮನಗರ: ದೇವೇಗೌಡರು ಪ್ರತಿದಿನ ಮೂರು ಕಡೆ ಪ್ರಚಾರ ಮಾಡುತ್ತಿದ್ದು, ಪಕ್ಷವನ್ನು ಅಧಿಕಾರಕ್ಕೆ ತರಬೇಕೆಂಬುದು ದೇವೇಗೌಡರ ಕನಸು ಎಂದು ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಹೇಳಿದರು.

ಮಾಗಡಿ ಕ್ಷೇತ್ರದಲ್ಲಿ ಮಾಜಿ ಸಿಎಂ ಹೆಚ್​ಡಿ ಕುಮಾರಸ್ವಾಮಿ ಜೆಡಿಎಸ್ ಅಭ್ಯರ್ಥಿ ಎ.ಮಂಜುನಾಥ್ ಪರ ಮತಯಾಚನೆ ಮಾಡಿದರು. ರಾಮನಗರ, ಮಾಗಡಿ ಕ್ಷೇತ್ರ ನನ್ನನ್ನ ರಾಜಕೀಯವಾಗಿ ಬೆಳೆಸಿದ ಕ್ಷೇತ್ರ. ಕುಮಾರಸ್ವಾಮಿ ಮುಖ್ಯಮಂತ್ರಿ ಆಗಬೇಕಾದರೆ ನಾನೇ ಕಾರಣ ಅಂತಾರೆ. ನಾನೂ 38 ಸೀಟ್‌ಗಳನ್ನ ಇಟ್ಟುಕೊಂಡು ಸರ್ಕಾರ ರಚನೆ ಮಾಡಿದ್ವಿ. ನಾನೂ ಇವರಿಂದ ಮಂತ್ರಿ ಆಗಿಲ್ಲ, ನನ್ನ ಕರ್ನಾಟಕ ಜನತೆ ಆಶೀರ್ವಾದದಿಂದ ಮಂತ್ರಿ ಆದೆ ಎಂದರು.

ನಾನೂ ಸಾಯೋದರೊಳಗೆ ನಾನು ಕಟ್ಟಿ ಬೆಳೆಸಿದ ಪಕ್ಷ ಅಧಿಕಾರಕ್ಕೆ ಬರಬೇಕು. ಅದರಿಂದ ಕರ್ನಾಟಕದ ಬಡ ಜನರ ಕಷ್ಟ ಪರಿಹಾರ ಆಗಬೇಕು ಅನ್ನೋದು ದೇವೇಗೌಡರ ಕನಸಿದೆ. ಈ ಬಾರಿ ಎ.ಮಂಜುನಾಥ್ ರನ್ನ ಗೆಲ್ಲಿಸಿ ಎಂದು ಹೇಳಿದರು.

ಜೆಡಿಎಸ್ ಅಭ್ಯರ್ಥಿ ಎ.ಮಂಜುನಾಥ್ ಮಾತನಾಡಿ, ನಾನೂ ಜೆಡಿಎಸ್ ಪಕ್ಷದ ನಿಯತ್ತಿನ ನಾಯಿ. ದೇವೇಗೌಡ, ಕುಮಾರಸ್ವಾಮಿ ಅವರ ನಿಯತ್ತಿನ ನಾಯಿ ಆಗಿ ಕೆಲಸ ಮಾಡುತ್ತೇನೆ. ಮೋಸ ಮಾಡಿದವರಿಗೆ ತಕ್ಕ ಪಾಠ ಕಲಿಸಬೇಕಾದರೆ ನನ್ನನ್ನು ಗೆಲ್ಲಿಸಿ ಎಂದು ಮನವಿ ಮಾಡಿದರು.

ಇನ್ನೂ ಸಾಮಾಜಿಕ ಜಾಲತಾಣವಾದ ಫೇಸ್ಬುಕ್ ನಲ್ಲಿ ಇಂದು ಮಾಗಡಿ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಶ್ರೀ ಎ.ಮಂಜುನಾಥ್ ಪರವಾಗಿ ಚುನಾವಣಾ ಪ್ರಚಾರವನ್ನು ಕೈಗೊಂಡೆ. ಈ ವೇಳೆಯಲ್ಲಿ ಜಾತ್ಯತೀತ ಜನತಾದಳದ ಕಾರ್ಯಕರ್ತರು ಮತ್ತು ಸಾರ್ವಜನಿಕ ಬಂಧುಗಳು ಸಾವಿರ ಸಂಖ್ಯೆಯಲ್ಲಿ ಪಾಲ್ಗೊಂಡು ನಮ್ಮನ್ನು ಬರಮಾಡಿಕೊಂಡರು. ಈ ಸಂದರ್ಭದಲ್ಲಿ ನನ್ನೊಂದಿಗೆ ಜೆಡಿಎಸ್ ಪಕ್ಷದ ಮುಖಂಡರು, ಮಹಿಳೆಯರು, ಯುವಕರು, ಮತ್ತು ಸಾರ್ವಜನಿಕ ಮತದಾರ ಬಂಧುಗಳು ಅಪಾರ ಸಂಖ್ಯೆಯಲ್ಲಿ ನೆರೆದು ಆಶೀರ್ವದಿಸಿದ ಕ್ಷಣಕ್ಕೆ ನಾನು ಧನ್ಯೋಸ್ಮಿ ಎಂದು ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಬರೆದುಕೊಂಡಿದ್ದಾರೆ. ಜೊತೆಗೆ ಪ್ರಚಾರದ ಫೋಟೋಗಳನ್ನು ಹಂಚಿಕೊಂಡಿದ್ದಾರೆ.

Related Articles

- Advertisement -spot_img

Latest Articles