Monday, March 27, 2023
spot_img
- Advertisement -spot_img

ಮಾಜಿ ಪ್ರಧಾನಿ ದೇವೇಗೌಡರ ಹೆಸರನ್ನು ಅನಾವಶ್ಯಕವಾಗಿ ತರಬೇಡಿ : ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ

ರಾಯಚೂರು: ನನಗೆ ನನ್ನ ತಂದೆ ಮುಖ್ಯ, ಅವರು ಕಟ್ಟಿ ಬೆಳೆಸಿದ ಪಕ್ಷವನ್ನು ಈ ಬಾರಿ 120 ಸೀಟು ಗೆಲ್ಲಿಸಿ ಅವರ ಜೀವನದ ಕೊನೆಯ ಹೊತ್ತಿಗೆ ಅಧಿಕಾರಕ್ಕೆ ತರುವುದು ನನ್ನ ಗುರಿ ಎಂದು ಭಾವುಕರಾಗಿ ಹೆಚ್ ಡಿ ಕುಮಾರಸ್ವಾಮಿ ಮಾತನಾಡಿದ್ದಾರೆ.

ಹಾಸನ ಜಿಲ್ಲೆಯ ಜೆಡಿಎಸ್ ನಲ್ಲಿ ಟಿಕೆಟ್ ವಿಚಾರವಾಗಿ ಅಪಸ್ವರ, ಭಿನ್ನಮತ ಮೂಡಿದ್ದು ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಮಾಧ್ಯಮದವರೊಂದಿಗೆ ಮಾತನಾಡಿದ್ದಾರೆ. ದೇವೇಗೌಡರು ಈಗ ಇರುವ ಸ್ಥಿತಿಯಲ್ಲಿ ಅವರ ಹೆಸರನ್ನು ರಾಜಕೀಯ ಭಿನ್ನಾಭಿಪ್ರಾಯಗಳಿಗೆ, ಹಾಸನ ವಿಚಾರಗಳಿಗೆ ತರಬೇಡಿ, ಅವರ ಜೀವ ಉಳಿಸುವುದು ನನಗೆ ಮುಖ್ಯವಾಗಿದೆ ಎಂದರು.

ಹಾಸನ ಟಿಕೆಟ್‌ ವಿಚಾರದಲ್ಲಿ ಹೆಚ್​ಡಿ ದೇವೇಗೌಡರ ಹೆಸರು ತರಬೇಡಿ. ನಾನು ಭಾವನಾತ್ಮಕ ಜೀವಿ. ಅವರು ಎಂತಹ ಪರಿಸ್ಥಿತಿಯಲ್ಲಿದ್ದಾರೆಂದು ನಮಗೆ ಮಾತ್ರ ಗೊತ್ತಿದೆ. ದೇವೇಗೌಡರ ಆಯುಷ್ಯ ಕಡಿಮೆ ಮಾಡುವುದು ನನಗೆ ಇಷ್ಟವಿಲ್ಲ, ಅವರು ಸಾಯುವುದಕ್ಕೆ ಮೊದಲು ಅವರ ಪಕ್ಷ ಉಳಿಯಬೇಕು ಎಂದು ಸಾಬೀತುಪಡಿಸಲು ನಾನು ಹೊರಟಿದ್ದೇನೆ ಎಂದು ತಂದೆಯ ಆರೋಗ್ಯದ ಬಗ್ಗೆ ಕೂಡ ಕುಮಾರಸ್ವಾಮಿ ಭಾವನಾತ್ಮಕವಾಗಿ ಮಾತನಾಡಿದರು.

ಹಾಸನ ಟಿಕೆಟ್‌ ವಿಚಾರವನ್ನು ಸರಿಪಡಿಸುವುದು ಹೇಗೆಂದು ಗೊತ್ತಿದೆ. ಆದರೆ ಯಾವುದೇ ಕಾರಣಕ್ಕೂ ದೇವೇಗೌಡರ ಹೆಸರು ತರಬೇಡಿ. ನಾನು ಸಾಮಾನ್ಯ ಪ್ರಜೆ. ಎಂಎಲ್‌ಸಿ ಸೂರಜ್, ಸಂಸದ ಪ್ರಜ್ವಲ್ ಹೇಳಿದ್ದರಲ್ಲಿ ತಪ್ಪೇನಿಲ್ಲ. ನಾನು ರಾಜ್ಯದ ಬಗ್ಗೆ ಗಮನಹರಿಸುತ್ತಿದ್ದೇನೆ ಎಂದರು.

Related Articles

- Advertisement -

Latest Articles