ರಾಮನಗರ: ಅಧಿಕಾರ ಇಲ್ಲ ಎಂದು ನಾನು ಕುಗ್ಗಿಲ್ಲ, ನಾನು ಸಿಎಂ ಆಗಿದ್ದಾಗ ಅಧಿಕಾರ ದುರುಪಯೋಗ ಪಡಿಸಿಕೊಂಡಿಲ್ಲ ಎಂದು ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಹೇಳಿದರು.
ಜಿಲ್ಲೆಯ ಚನ್ನಪಟ್ಟಣದ ಬಮೂಲ್ ಉತ್ಸವದಲ್ಲಿ ಮಾತನಾಡಿ, ಚನ್ನಪಟ್ಟಣ ಬಿಟ್ಟು ಬೇರೆ ಕ್ಷೇತ್ರದಲ್ಲಿ ಅರ್ಜಿ ಹಾಕಲ್ಲ, ಇದೇ ನನ್ನ ಕೊನೆಯ ಚುನಾವಣೆ ಎಂದು ತಿಳಿಸಿದರು. ನಮ್ಮ ಸರ್ಕಾರ ಬಂದರೇ ಜಾನುವಾರುಗಳ ಮೇವಿಗೆ 50 ಪರ್ಸೆಂಟ್ ಸಬ್ಸಿಡಿ ಕೊಡುತ್ತೇವೆ. ಹಸುಗಳ ಫುಡ್ಗೆ ಸಬ್ಸಿಡಿ ನೀಡುತ್ತೇವೆ ಎಂದರು.
ರೈತರಿಗೆ ಬಿತ್ತನೆ ಮಾಡಲು ಹತ್ತು ಸಾವಿರ ರೂ. ಒಂದು ಎಕರೆಗೆ ಹತ್ತು ಸಾವಿರ ರೂ, ಹತ್ತು ಎಕರೆಗೆ ಒಂದು ಲಕ್ಷ ರೂ. ಉಚಿತ ಹಣ ನೀಡಲಾಗುವುದು ಮತ್ತು ಹಾಲಿಗೆ ಪ್ರೋತ್ಸಾಹ ಧನ ಎಂಟು ರೂಪಾಯಿಗೆ ಹೇರಿಕೆ ಮಾಡುತ್ತೇವೆ. ಕ್ಷೇತ್ರಕ್ಕೆ ನಾನು ಪದೇ ಪದೇ ಬರಲು ಆಗಲ್ಲ. ನನಗೆ ಹಾಲು ಕೊಡುತ್ತೀರಾ, ಏನು ಕೊಡುತ್ತೀರಿ ಗೊತ್ತಿಲ್ಲ ಎಂದು ಜನರಿಗೆ ಪ್ರಶ್ನೆ ಮಾಡಿದರು.
ಎಂಎಲ್ಸಿ ಸಿ.ಪಿ.ಯೋಗೇಶ್ವರ್ ಸ್ವಾಭಿಮಾನಿ ನಡಿಗೆ ಮಾಡುತ್ತಿದ್ದಾರೆ. ಪೊಳ್ಳು ಮಾತಿಗೆ ಚನ್ನಪಟ್ಟಣ ಕ್ಷೇತ್ರದ ಜನರು ಸೊಪ್ಪು ಹಾಕುವುದಿಲ್ಲ. ನಮಗೆ BJP ಎಂಎಲ್ಸಿ ಸಿ.ಪಿ.ಯೋಗೇಶ್ವರ್ ಸರ್ಟಿಫಿಕೇಟ್ ಬೇಡ. ಬಿ.ಎಸ್.ಯಡಿಯೂರಪ್ಪ ವಿಧಾನಸೌಧದಲ್ಲೇ ಸರ್ಟಿಫಿಕೇಟ್ ಕೊಟ್ಟಿದ್ದಾರೆ ಎಂದು ಹೇಳಿದರು.