ಬೆಂಗಳೂರು : ಮೋದಿ ಎದುರು ಬೊಮ್ಮಾಯಿ ನಾಯಿ ಮರಿ ಎಂಬುದು ಸಿದ್ದರಾಮಯ್ಯರಿಗೆ ಈಗ ಗೊತ್ತಾಗಿದೆ, ನಾನು ಯಾವತ್ತೋ ಈ ಮಾತನ್ನು ಹೇಳಿದ್ದೇನೆ ಎಂದು ಮಾಜಿ ಸಿಎಂ ಎಚ್ ಡಿ ಕುಮಾರಸ್ವಾಮಿ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಸಿಎಂ ಬೊಮ್ಮಾಯಿಯವರು ಹಾಗೇ ಅಂತ ನನಗೆ ಮೊದಲೇ ಗೊತ್ತಿತ್ತು ಎಂದರು. ಮೊದಲ ಹಂತದ ಪಂಚರತ್ನ ಕಾರ್ಯಕ್ರಮ ಮುಗಿದು, ನಾಳೆಯಿಂದ ಎರಡನೇ ಹಂತದ ಪಂಚರತ್ನ ಯಾತ್ರೆ ಕಾರ್ಯಕ್ರಮ ಆರಂಭವಾಗಲಿದೆ, ಬೀದರ್, ಕಲಬುರಗಿ ಕ್ಷೇತ್ರಗಳಲ್ಲಿ ನಾಳೆಯಿಂದ ಪಂಚರತ್ನ ಯಾತ್ರೆ ನಡೆಯಲಿದೆ ಎಂದು ಮಾಹಿತಿ ಕೊಟ್ಟರು.
ಉ ಕರ್ನಾಟಕ ಭಾಗದಲ್ಲಿ ಹೆಚ್ಚು ಸ್ಥಾನ ಗೆಲ್ತೀವಿ, ಕೇವಲ ಮೂವತ್ತು ಸ್ಥಾನಗಳು ಮಾತ್ರಾ ಜೆಡಿಎಸ್ ಗೆಲ್ಲುತ್ತೆ ಅಂತಾ ಶಾ ಹೇಳಿದ್ದಾರೆ, ಅಷ್ಟು ಸ್ಥಾನದಲ್ಲಿ ಜೆಡಿಎಸ್ ಇದೆ ಅಂತಾ ಒಪ್ಪಿಕೊಂಡಿದ್ದಾರಲ್ಲಾ, ಅದಕ್ಕೆ ಅಭಾರಿ ಯಾಗಿ ಇದ್ದೇನೆ.ಅಮಿತ್ ಶಾ ಹೇಳಿಕೆಗಳಿಗೆ ತಲೆ ಕೆಡಿಸಿಕೊಳ್ಳಲ್ಲ.ಅವರು ಏನೇ ಮಾತಾಡಿಕೊಳ್ಳಲಿ ಎಂದರು.
ದಶಪಥ ರಸ್ತೆ ಕಾಮಗಾರಿಗೆ ಚಾಲನೆ ಕೊಟ್ಟಿದ್ದು ನಾನು, ಒಂಭತ್ತು ಸಭೆ ಮಾಡಿ ಕೆಲಸಕ್ಕೆ ಚಾಲನೆ ಕೊಟ್ಟೆ, ದಶಪಥ ರಸ್ತೆಯ ಭೂಸ್ವಾಧೀನ ಪ್ರಕ್ರಿಯೆಯಲ್ಲಿ ನೂರಾರು ಕೋಟಿ ಅವ್ಯವಹಾರ ಆಗಿದೆ, ಈ ಅವ್ಯವಹಾರ ಬಗ್ಗೆ ಜೆಡಿಎಸ್ ಸರ್ಕಾರ ಬಂದ್ರೆ ತನಿಖೆ ಮಾಡ್ತೀವಿ , ದಶಪಥ ರಸ್ತೆಯ ನಿರ್ಮಾಣದಲ್ಲಿ ಕುಮಾರಸ್ವಾಮಿ, ರೇವಣ್ಣ ಪಾತ್ರವೂ ಜಾಸ್ತಿ ಇದೆ,ಈಗ ಬಂದು ವೈಮಾನಿಕ ಸಮೀಕ್ಷೆ ಮಾಡೋದು ದೊಡ್ಡದಲ್ಲ ದಶಪಥ ರಸ್ತೆಗೆ ಯಾವ ಹೆಸರಾದರೂ ಇಟ್ಟುಕೊಳ್ಳಲಿ ಎಂದು ಬಿಜೆಪಿಗೆ ಎಚ್ಡಿಕೆ ತಿರುಗೇಟು ಕೊಟ್ಟರು.