ರಾಯಚೂರು : ಬಿಜೆಪಿಯವರಿಗೆ ಮನೆ ಒಡೆಯೋ ಅಭ್ಯಾಸವಿದೆ. ಅವರು ದೇಶಾನೇ ಒಡೆದವರಿಗೆ ಮನೆ ಒಡೆಯೋದು ಸರಳ, ಆದರೆ ದೇವೇಗೌಡರ ಮನೆಯನ್ನು ಒಡೆಯೋದು ಸುಲಭ ಅಲ್ಲ. ಹೊಳೆ ನರಸೀಪುರದಲ್ಲಿ ಭವಾನಿ ಅವರಿಗೆ ಟಿಕೆಟ್ ಕೊಡಲಿ ಸಂತೋಷ ಎಂದು ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಹೇಳಿದರು.
ಮಾಧ್ಯಮದವರೊಂದಿಗೆ ಮಾತನಾಡಿ, ಸಿ.ಟಿ.ರವಿ ಭವಾನಿ ರೇವಣ್ಣ ಅವರು ಬಿಜೆಪಿಯಿಂದ ಸ್ಪರ್ಧಿಸಲು ಬಯಸಿದರೆ ಟಿಕೆಟ್ ಕೊಡಲು ಸಿದ್ಧ. ಭವಾನಿ ಅಕ್ಕ ನಮ್ಮ ಪಕ್ಷದಿಂದ ಸ್ಪರ್ಧಿಸಬೇಕೆಂದು ಬಯಸಿದರೆ ಹೊಳೆನರಸೀಪುರ ಕ್ಷೇತ್ರದ ಅಭ್ಯರ್ಥಿಯಾಗಲಿ. ಆ ಕ್ಷೇತ್ರಕ್ಕೆ ಭವಾನಿ ಅವರಿಗಿಂತ ಉತ್ತಮ ಅಭ್ಯರ್ಥಿ ಸಿಗಲ್ಲ ಎಂದು ಹೇಳಿದ್ದಾರೆ ಎಂದರು.
ಕುಟುಂಬ ರಾಜಕಾರಣದ ಟೀಕೆಯಿಂದ ಬೇಸತ್ತಿರುವ ಕುಮಾರಸ್ವಾಮಿ ಹಾಸನದಿಂದ ಭವಾನಿ ರೇವಣ್ಣ ಸ್ಪರ್ಧೆಯಿಲ್ಲ, ಅಲ್ಲಿಗೆ ಈಗಾಗಲೇ ಸಮರ್ಥ ಅಭ್ಯರ್ಥಿ ಇದ್ದಾರೆ ಎಂದು ತಿಳಿಸಿದ್ದು. ನಾನು ಸಹೋದರಿ ಭವಾನಿಯವರ ಹೇಳಿಕೆಯನ್ನು ಗಮನಿಸಿದ್ದೇನೆ. ಭವಾನಿ ರೇವಣ್ಣ ಹೊಳೆನರಸೀಪುರದಿಂದ ನಮ್ಮ ಪಾರ್ಟಿಯಿಂದ ಅಭ್ಯರ್ಥಿಯಾಗಲಿ. ಬಿಜೆಪಿಯಿಂದ ಸ್ಪರ್ಧಿಸಬೆಕೆಂಬುದು ನನ್ನ ಆಸೆಯಷ್ಟೆ ಎಂದು ತಿಳಿಸಿದ್ದರು
ಆದರೆ ಮತ್ತೆ ಸಿಟಿ ರವಿ ಇದು ಸುದ್ದಿ ಗೋಷ್ಠಿಯಲ್ಲಿ ಮಾತನಾಡಿ, ನಾನು ಶುದ್ಧ ತಮಾಷೆಗಾಗಿ ಹೇಳಿದ್ದು, ಹೇಳಿದಕ್ಕೆ ಟಿಕೇಟ್ ಕೇಳಲು ಬರಬೇಡಿ ಎಂದು ಹೇಳಿದ್ದಾರೆ.