ಹಾಸನ: ‘ರಾಜಕೀಯ ಲಾಭಕ್ಕಾಗಿ ತಮ್ಮ ಮತ್ತು ಪಕ್ಷದ ವಿರುದ್ಧ ಎಟಿ ರಾಮಸ್ವಾಮಿ ಮತ್ತು ಶಿವಲಿಂಗೇಗೌಡ ಸುಳ್ಳು ಆರೋಪ ಮಾಡಿದ್ದಾರೆ ಎಂದು ಜೆಡಿಎಸ್ ನಾಯಕ ಹೆಚ್ ಡಿ ರೇವಣ್ಣ ಹೇಳಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ‘ಇಬ್ಬರೂ ನಾಯಕರು ದಶಕಗಳಿಂದ ಅಧಿಕಾರವನ್ನು ಅನುಭವಿಸಿದ್ದಾರೆ.. ಆಗ ಪಕ್ಷದ ಹಿರಿಯ ನಾಯಕರ ವಿರುದ್ಧ ಯಾವುದೇ ವಿವಾದವನ್ನು ಎತ್ತಲಿಲ್ಲ. ಈಗ ರಾಜಕೀಯ ಪ್ರೇರಿತ ಆರೋಪಗಳನ್ನು ಮಾಡುತ್ತಿದ್ದಾರೆ, ಪಕ್ಷ ತೊರೆದಿರುವ AT ರಾಮಸ್ವಾಮಿ ಮತ್ತು ಶಿವಲಿಂಗೇಗೌಡರ ಆರೋಪಗಳು ರಾಜಕೀಯ ಪ್ರೇರಿತವಾದದ್ದು ಎಂದು ಕಿಡಿಕಾರಿದ್ದಾರೆ.
ದೇವರಾಣೆ ಪಕ್ಷ ಬಿಡಲ್ಲ ಎಂದು ಕೆ.ಎಂ ಶಿವಲಿಂಗೇಗೌಡ ಅಂದಿದ್ರು, ಆದರೂ ಪಕ್ಷ ತೊರೆದಿದ್ದಾರೆ. ಕುಮಾರಸ್ವಾಮಿಯವರ ಮನೆಯಲ್ಲಿ ಈ ಮಾತು ಹೇಳಿಲ್ಲ ಎಂದರೆ ಅವರು ಧರ್ಮಸ್ಥಳದ ಮಂಜುನಾಥಸ್ವಾಮಿಯ ಮೇಲೆ ಆಣೆಮಾಡಲಿ. ಶಿವಲಿಂಗೇಗೌಡರು ಹೇಳಿದ ಕೆಲಸಗಳನ್ನೆಲ್ಲ ಮಾಡಿಕೊಟ್ಟಿದ್ದೇವೆ. ಜೆಡಿಎಸ್ ಗೆ ದುಡ್ಡು ಕೊಟ್ಟು ವೋಟು ತೆಗೆದುಕೊಳ್ಳುವ ಶಕ್ತಿ ಇಲ್ಲ ಎಂದು ಅಭಿಪ್ರಾಯಪಟ್ಟರು.
ಕೆಪಿಸಿಸಿ ಅಧ್ಯಕ್ಷರ ಬಳಿ ಖಜಾನೆಯಿದೆ. ಅರಸಿಕೆರೆಯಲ್ಲಿ ಬಿಜೆಪಿಯವನು ನಿಂತರೆ ಸೋಲುತ್ತೇನೆ. ಲಿಂಗಾಯತರೆಲ್ಲ ಒಂದೇ ಕಡೆ ಓಟು ಹಾಕುತ್ತಾರೆ ಎಂದು ಶಿವಲಿಂಗೇಗೌಡರು ಹೇಳಿದ್ದರು. ಕಳೆದ ಬಾರಿ ಐದು ಶಾಸಕರು ಕಾಂಗ್ರೆಸ್ ತೊರೆದಿದ್ದರು. ಅರಸೀಕೆರೆ ಜನ ದುಡ್ಡಿಗೆ ಮತ ಹಾಕುತ್ತಾರಾ ಎಂದು ಪ್ರಶ್ನಿಸಿದ್ದಾರೆ.