ಬೆಂಗಳೂರು : ಸಿಸಿಬಿ ಕಸ್ಟಡಿಯಲ್ಲಿರುವ ಚೈತ್ರಾ ಕುಂದಾಪುರ, ವಿಚಾರಣೆ ಸಂದರ್ಭದಲ್ಲಿ ವಿಷ ಸೇವಿಸಿದ್ದಾರೆಂದು ನಗರದ ವಿಕ್ಟೋರಿಯಾ ಆಸ್ಪತ್ರೆಗೆ ಕರೆತರಲಾಗಿತ್ತು.
ಇಂದು ಬೆಳಗ್ಗೆ 9.15 ಕ್ಕೆ ಅರೆ ಪ್ರಜ್ಞಾವಸ್ಥೆಯಲ್ಲಿ ಇದ್ದ ಚೈತ್ರಾ ಕುಂದಾಪುರರನ್ನು ಪೊಲೀಸರು ಹತ್ತಿರದ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆಸ್ಪತ್ರೆಗೆ ಬರುವ ಮುನ್ನವೇ ಚೈತ್ರಾ ಅವರು ಪ್ರಜ್ಞೆಯನ್ನು ಕಳೆದುಕೊಂಡಿದ್ದು, ಆತ್ಮಹತ್ಯೆಗೆ ಯತ್ನಿಸಿ ವಿಷ ಸೇವಿಸಿರಬಹುದೆಂಬ ಶಂಕೆ ವ್ಯಕ್ತವಾಗಿತ್ತು. ಚೈತ್ರಾ ಅವರನ್ನು ಪರಿಶೀಲಿಸಿದ ವೈದ್ಯರು, ವಿಷ ಸೇವಿಸಿದರ ಬಗ್ಗೆ ಯಾವುದೆ ಕುರುಹುಗಳು ಪತ್ತೆ ಆಗಿಲ್ಲ ಎಂದು ತಿಳಿಸಿದ್ದಾರೆ. ಸದ್ಯ ಐಸಿಯು ನಲ್ಲಿ ಚಿಕಿತ್ಸೆ ಪಡೆಯುತ್ತಿರುವ ಚೈತ್ರಾ ಅರೋಗ್ಯ ಸುಧಾರಿಸಿದೆ ಎಂದು ಹೇಳಿದ್ದಾರೆ.
ಇದನ್ನೂ ಓದಿ : ನಮ್ಮ ಪಕ್ಷದ ಸಿದ್ಧಾಂತ ನಂಬಿ ಬಂದವರಿಗೆ ಸ್ವಾಗತಿಸ್ತೇವೆ : ಡಿ.ಕೆ. ಸುರೇಶ್
ಚೈತ್ರಾ ಕುಸಿದು ಬೀಳಲು ಕಾರಣವೇನು?
ಆರಂಭದಲ್ಲಿ ತಲೆ ಸುತ್ತು ಬಂದು ಚೈತ್ರಾ ಕುಸಿದು ಬಿದ್ದಿದ್ದರು ಎಂದು ಹೇಳಲಾಗಿತ್ತು. ಆದರೆ, ಅವರ ಬಾಯಲ್ಲಿ ನೊರೆ ಬಂದಿದ್ದರಿಂದ ಜನರಿಗೆ ಅನೇಕ ರೀತಿಯ ಅನುಮಾನಗಳು ಮೂಡಿತ್ತು. ಈ ಬಗ್ಗೆ ಪೊಲೀಸರು ಪ್ರತಿಕ್ರಿಯೆ ನೀಡಿದ್ದು, ಒತ್ತಡ ಹೆಚ್ಚಾಗಿ ಚೈತ್ರಾ ಕುಸಿದು ಬಿದ್ದಿದ್ದಾರೆ. ಈ ಹಿಂದೆಯೂ ಅವರಿಗೆ ಈ ರೀತಿ ಆಗಿದೆ. ಒಂದು ಬಾರಿ ಭಾಷಣ ಮಾಡುವಾಗ ವೇದಿಕೆ ಮೇಲೇನೆ ಕುಸಿದು ಬಿದ್ದಿದ್ದರು. ಪ್ರಸ್ತುತ ಅವರ ಬಿಪಿ, ಪಲ್ಸ್ ರೇಟ್ ನಾರ್ಮಲ್ ಇದೆ. ಚೈತ್ರಾ ಅವರಿಗೆ ಮೂರ್ಛೆ ರೋಗ ಕೂಡ ಇತ್ತು ಎಂದು ತಿಳಿಸಿದ್ದಾರೆ.
ಇದನ್ನೂ ಓದಿ : ಈದ್ಗಾ ಮೈದಾನದ ಮೇಲೆ ಅಂಜುಮನ್ ಸಂಸ್ಥೆಗೆ ಅಧಿಕಾರವಿಲ್ಲ: ಕೋರ್ಟ್ ತೀರ್ಪು
ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ Twitter, Facebook , Youtube, Instagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.