ಬೆಂಗಳೂರು : ನಮ್ಮ ಸರ್ಕಾರ ರಾಜ್ಯದ ಪರವಾದ ಕೆಲವು ತೀರ್ಮಾನ ತೆಗೆದುಕೊಂಡಿತ್ತು. ಮತ್ತೆ ನೀರು ಬಿಡಲು ಸೂಚಿಸಿರುವ ಬೆಳವಣಿಗೆಯ ನಂತರ ಸಿಎಂ, ಡಿಸಿಎಂ ಕುಳಿತು ಒಂದು ನಿರ್ಧಾರ ತೆಗೆದುಕೊಳ್ಳಬೇಕು. ರಾಜ್ಯದ ಪರವಾಗಿ ಏನೇನು ತೀರ್ಮಾನ ತೆಗೆದುಕೊಳ್ಳಬೇಕು, ಅದನ್ನು ನಮ್ಮ ಸರ್ಕಾರ ಕೈಗೊಳ್ಳಲಿದೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ.
ನಗರದಲ್ಲಿಂದು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ರಾಜ್ಯದ ಹಿತ ಕಾಯುವ ವಿಚಾರದಲ್ಲಿ ಯಾವುದೇ ಅನುಮಾನವಿಲ್ಲ. ಒಂದೊಂದು ಸನ್ನಿವೇಶದಲ್ಲಿ ಒಂದೊಂದು ರೀತಿಯ ಬೇಡಿಕೆಗಳು ಬರುತ್ತಿರುತ್ತವೆ. ಮಳೆ ಕಡಿಮೆಯಾದಾಗ ಬೇಡಿಕೆಗಳು ಹೆಚ್ಚಾಗುತ್ತವೆ, ಅವುಗಳು ಹೆಚ್ಚಾದಾಗ ಒತ್ತಡಗಳು ಬರುತ್ತವೆ. ಎಸ್.ಎಂ ಕೃಷ್ಣ ಅವರ ಅವಧಿಯಲ್ಲಿ ಪಾದಯಾತ್ರೆ ಮಾಡಿದ್ವಿ, ನೀರು ಕೊಡಲು ಆಗಲ್ಲ ಎಂದು ಹೇಳಬೇಕಾಗಿತ್ತು ಎಂದು ತಿಳಿಸಿದರು.
ಇದನ್ನೂ ಓದಿ : BREAKING NEWS :ಹಳೆಯ ಸಂಸತ್ ಭವನ ಇನ್ಮುಂದೆ ‘ಸಂವಿಧಾನ್ ಸದನ್’: ಪ್ರಧಾನಿ ಮೋದಿ ಘೋಷಣೆ
ತಮಿಳುನಾಡು – ಕರ್ನಾಟಕ ನಡುವೆ ಸಾಕಷ್ಟು ವ್ಯಾಜ್ಯಗಳು ನಡೆದಿವೆ. ಈಗ ಪ್ರಾಧಿಕಾರ ರಚನೆ ಆಗಿದೆ, ಒಂದೆಡೆ ಕಾನೂನಾತ್ಮಕ ಹೋರಾಟ ಮಾಡುತ್ತೇವೆ. ಪ್ರಾಧಿಕಾರ ರಚನೆ ಬಳಿಕ ಸಂಪೂರ್ಣ ನಿಯಂತ್ರಣ ಅದಕ್ಕೆನೇ ನೀಡಲಾಗಿದೆ. ಹಿಂದೆ ಏನಾಯಿತು ಎಂಬುದು ಮುಖ್ಯ ಅಲ್ಲ, ಇವತ್ತು ಏನಾಯಿತು ಎಂಬುದು ಮುಖ್ಯ, ನೀರಿನ ವಿಚಾರ ಬಂದಾಗ ಎಲ್ಲಾ ರಾಜಕೀಯ ಪಕ್ಷಗಳು ಒಗ್ಗಟ್ಟಾಗಿ ಕೆಲಸ ಮಾಡಿದ್ದೇವೆ ಈಗಲೂ ಒಗ್ಗಟ್ಟಾಗಿ ಇರಬೇಕು ಎಂದು ಆರೋಗ್ಯ ಸಚಿವರು ಹೇಳಿದರು.
ಹುಕ್ಕಾಬಾರ್‌ನಿಂದ ಯುವಕರ ಆರೋಗ್ಯದ ಮೇಲೆ ದುಷ್ಪರಿಣಾಮ..
ಇಂದು ಯುವಜನ ಕ್ರೀಡಾ ಇಲಾಖೆಯ ಸಚಿವರು ಅಧಿಕಾರಿಗಳ ಜೊತೆ ಚರ್ಚೆ ನಡೆಸಿದ್ದೆನೆ. ಆರೋಗ್ಯ ವಿಚಾರದಲ್ಲಿ ತಂಬಾಕು ಸೇವನೆಯಿಂದ ದುಷ್ಪರಿಣಾಮ ಬೀರುತ್ತದೆ. ಸಿದ್ದರಾಮಯ್ಯ ಹಿಂದಿನ ಅವದಿಯಲ್ಲಿ ಗುಟ್ಕಾ ಬ್ಯಾನ್ ಆಗಿತ್ತು. ಆಗ ಸ್ಮೋಕ್ ಪ್ರಿ ಸಿಟಿ ಅನ್ನೊ ಕಾರ್ಯಕ್ರಮ ಮಾಡಿತ್ತು. ಈಗ ಹುಕ್ಕಾ ಬಾರ್ ವ್ಯತಿರಿಕ್ತ ಪರಿಣಾಮ ಯುವಕರ ಮೇಲೆ ಆಗುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು.
12 ರಿಂದ 25 ವರ್ಷಗಳ ಯುವಕರ ಮೇಲೆ ಹೆಚ್ಚಾಗಿ ಪರಿಣಾಮ ಬೀರುತ್ತಿದೆ. ತಂಬಾಕು ನಿಯಂತ್ರಣ ಕಾಯ್ದೆ (ಟೋಬ್ಯಾಕೋ ಪ್ರಿವೆನ್ಸನ್ ಆ್ಯಕ್ಟ್) ತಿದ್ದುಪಡಿ ಮಾಡುತ್ತಿದ್ದೆವೆ. ಸಾರ್ವಜನಿಕ ಸ್ಥಳದಲ್ಲಿ ಮಾತ್ರ ಅಲ್ಲ, ಮೆಡಿಕಲ್ ಕಾಲೇಜು, ಧಾರ್ಮಿಕ ಸಂಸ್ಥೆ, ಕೋರ್ಟ್, ಸಾರ್ವಜನಿಕ ಸಂಸ್ಥೆಗಳ ಸಮೀಪ 100 ಮೀಟರ್ ವ್ಯಾಪ್ತಿಯ ಒಳಗೆ ಮಾರಾಟ ಮಾಡಬಾರದು. ಇದಕ್ಕೆ ಅನುಮತಿ ನೀಡದಂತೆ ಸ್ಥಳೀಯ ಸಂಸ್ಥೆಗೆ ಹೇಳುತ್ತೆವೆ. ಸಿಗರೇಟ್, ಟೊಬ್ಯಾಕೋ ದಿಂದ ಕ್ಯಾನ್ಸರ್ ಹೆಚ್ಚಾಗ್ತಿದೆ. ಇದು ಗಂಭೀರವಾಗಿರುವ ವಿಚಾರ, ಕಾನೂನಾತ್ಮಕವಾಗಿ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಅವರು ಹೇಳಿದರು.
ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ Twitter, Facebook , Youtube, Instagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.