Tuesday, March 28, 2023
spot_img
- Advertisement -spot_img

ಪಕ್ಷದ ಚಟುವಟಿಕೆಗಳಿಂದ ದೂರ ಉಳಿದ ಜಮೀರ್ ಅಹ್ಮದ್ ಖಾನ್ : ಪಕ್ಷ ಬಿಡ್ತಾರಾ ಅಂತಾ ಗುಸುಗುಸು

ಬೆಂಗಳೂರು: ಇತ್ತೀಚಿನ ದಿನಗಳಲ್ಲಿ ಪಕ್ಷದ ಚಟುವಟಿಕೆಗಳಲ್ಲಿ ಅಂತರ ಕಾಯ್ದುಕೊಂಡ ಹಿನ್ನಲೆಯಲ್ಲಿ ಕಾಂಗ್ರೆಸ್ ಶಾಸಕ ಜಮೀರ್ ಅಹ್ಮದ್ ಖಾನ್ ಗೆ ಹೈಕಮಾಂಡ್ ಬುಲಾವ್ ನೀಡಿದೆ. ಕಾಂಗ್ರೆಸ್ ಪ್ರಭಾವಿ ಶಾಸಕರಾಗಿರುವ ಜಮೀರ್ ಅಹಮದ್ ಪಕ್ಷ ಬಿಡ್ತಾರಾ ಅನ್ನೋ ಗುಸುಗುಸು ಶುರುವಾಗಿದೆ.

ಈ ಬೆನ್ನಲ್ಲೇ ಹೈಕಮಾಂಡ್ನಿಂದ ಬುಲಾವ್ ಬಂದಿರೋದು ಹಲವು ಅನುಮಾನಗಳಿಗೆ ಕಾರಣವಾಗಿದೆ.ಇಂದು ಬೆಂಗಳೂರಿನಿಂದ ದೆಹಲಿಗೆ ಜಮೀರ್ ಅಹ್ಮದ್ ಪ್ರಯಾಣ ಬೆಳೆಸಲಿದ್ದಾರೆ ಎಂದು ತಿಳಿದು ಬಂದಿದೆ. ಬೆಳಗಾವಿ ಅಧಿವೇಶನಕ್ಕೂ ಬರದೇ ಕಾಂಗ್ರೆಸ್ ಕಾರ್ಯಕ್ರಮಗಳಿಗೂ ಹಾಜರಾಗದೇ ತೆಲಂಗಾಣದ ಬಿಆರ್​ಎಸ್​ ಕಾರ್ಯಕ್ರಮಕ್ಕೆ ಹಾಜರಾಗಿದ್ದರು. ಇದು ಬಹಳ ಕುತೂಹಲಕ್ಕೆ ಕಾರಣವಾಗಿದೆ. ಜಮೀರ್ ಅಹ್ಮದ್ ಖಾನ್, ಕಾಂಗ್ರೆಸ್ ಮೇಲೆ ಮುನಿಸಿಕೊಂಡಿದ್ದು, ಅಗತ್ಯ ಕಾರ್ಯಕ್ರಮಗಳಲ್ಲಿ ಮಾತ್ರ ಭಾಗಿಯಾಗುತ್ತಿದ್ದಾರೆ.

ಬೆಳಗಾವಿ ಅಧಿವೇಶನಕ್ಕೆ ಕಾಂಗ್ರೆಸ್ ನ ಎಲ್ಲಾ ಶಾಸಕರು ಹಾಜರಾದರೂ ಜಮೀರ್ ಮಾತ್ರ ಗೈರಾಗಿದ್ದಾರೆ. ಒಂದು ದಿನ ಕೂಡಾ ಸದನದಲ್ಲಿ‌ ಹಾಜರಾಗಿಲ್ಲ. ಅದೇ ರೀತಿ ಪಕ್ಷದ ಪ್ರಮುಖ ಸಭೆಗಳಲ್ಲೂ ಜಮೀರ್ ಗೈರಾಗಿದ್ದಾರೆ. ಜಮೀರ್ ಈ ನಡೆ ಕುತೂಹಲ ಕೆರಳಿಸಿದೆ.

Related Articles

- Advertisement -

Latest Articles