ಬೆಂಗಳೂರು: ಮೂರು ಉಪ ಮುಖ್ಯಮಂತ್ರಿ ಸ್ಥಾನಗಳನ್ನು ಸೃಷ್ಠಿಸಬೇಕು ಎಂಬ ಸಚಿವ ಕೆ.ಎನ್. ರಾಜಣ್ಣ ಹೇಳಿಕೆಗೆ ಪ್ರತಿಕ್ರಿಯಿಸಿರುವ ಉಪ ಮುಖ್ಯಮಂತ್ರಿ ಸಿದ್ದರಾಮಯ್ಯ, ‘ಯಾರೇ ಮಾತಾಡಿದ್ರು ಅದಕ್ಕೆ ಒಂದು ಸ್ಟೇಟಸ್ ಇದೆ. ಸಚಿವ ಕೆ.ಎನ್. ರಾಜಣ್ಣ ಮಾತಾಡಿರೋ ಬಗ್ಗೆ ಉತ್ತರ ಕೇಳಬೇಕಿರೋರು ಮುಖ್ಯಮಂತ್ರಿಗಳು ಹಾಗೂ ಹೈಕಮಾಂಡ್’ ಎಂದು ಹೇಳಿದರು.
ಸದಾಶಿವನಗರದ ತಮ್ಮ ನಿವಾಸದ ಬಳಿ ಮಾತನಾಡಿದ ಅವರು, ‘ಹರಿಪ್ರಸಾದ್ ಏನೇ ಮಾತಾಡಿದ್ರೂ ಅವರು ವರ್ಕಿಂಗ್ ಕಮಿಟಿ ಸದಸ್ಯರು, ಅವರಿಗೆ ಹೈಕಮಾಂಡ್ ಇದೆ. ನನ್ನ ಲೆವಲ್‌ನಲ್ಲಿ ಯಾರ ಬಳಿ ಮಾತಾಡಬೇಕೋ ಅವರಲ್ಲಿ ಮಾತನಾಡುತ್ತೇನೆ. ನಾನು ಯಾರ ಬಳಿ ಕೇಳಬೇಕೋ ಅವರನ್ನು ಮುಲಾಜಿಲ್ಲದೆ ಕೇಳ್ತೀನಿ’ ಎಂದರು.
ಇದನ್ನೂ ಓದಿ; ಸರ್ಕಾರ ಕ್ಷಮೆ ಕೇಳದಿದ್ದರೆ ಮಾನನಷ್ಟ ಮೊಕದ್ದಮೆ ಹಾಕ್ತಿನಿ: ಪುನೀತ್ ಕೆರೆಹಳ್ಳಿ
‘ಮೂರು ಡಿಸಿಎಂ ಸ್ಥಾನ ಆಗ್ರಹ ಬಹಳ ಸಂತೋಷದ ವಿಚಾರ. ಎಲ್ಲರ ಮನಸ್ಸಿಗೂ ಸಂತೋಷವಾಗಬೇಕು. ಮುಖ್ಯಮಂತ್ರಿಗಳೇ ಇದಕ್ಕೆ ಉತ್ತರ ಕೊಡ್ತಾರೆ, ನಾವು ಅವರ ಕೈಕೆಳಗೆ ಕೆಲಸ ಮಾಡ್ತಿದ್ದೀವಿ. ಅವರೇ ಉತ್ತರ ಕೊಡಬೇಕು. 3 ಡಿಸಿಎಂ ಸ್ಥಾನಗಳ ಬಗ್ಗೆ ಅವರನ್ನೇ ಕೇಳಬೇಕು’ ಎಂದು ಹೇಳಿದರು.
‘ನಾನು ಸಿಡಬ್ಲ್ಯೂಸಿ ನೋಡ್ಕೊಂಡು ಬರ್ತಿದ್ದೀನಿ, ಹಿರಿಯ ನಾಯಕರೆಲ್ಲಾ ಬಂದಿದ್ರು. ಬಿಕೆ.ಹರಿಪ್ರಸಾದ್, ವೀರಪ್ಪ ಮೋಯ್ಲಿ ಕೂಡ ಬಂದಿದ್ರು. ಹೈದರಾಬಾದ್ ನಲ್ಲಿ ವೇಸ್ಟ್ ಮ್ಯಾನೇಜ್ಮೆಂಟ್ ನೋಡೋಕೆ ಹೋಗಿದ್ದೆ. ಬೆಂಗಳೂರಲ್ಲಿ ಹಿಂದಿನಿಂದಲೂ ಬಹಳ ಸಮಸ್ಯೆ ಬಹಳ ಇದೆ. ಸಮಸ್ಯೆ ಬಗ್ಗೆ ಯಾರನ್ನೂ ದೂಷಿಸಲ್ಲ, ಕಸದ ಸಮಸ್ಯೆಗೆ ಪರಿಹಾರ ಬೇಕಿದೆ. ಯಶವಂತಪುರ ಮಧ್ಯ ಭಾಗದಲ್ಲಿ ಈಗ ಕಸದ ಸಮಸ್ಯೆ ಹೆಚ್ಚಿದೆ. ಬ್ಯಾಟರಾಯನಪುರ ಹಾಗೂ ಮಹದೇವಪುರದಲ್ಲೂ ಸಮಸ್ಯೆ ಇದೆ. ಅದಕ್ಕೆ ಪರಿಹಾರ ತರಲು ಮಾನಸಿಕವಾಗಿ ತಯಾರಾಗಿ ಬಂದಿದ್ದೀನಿ’ ಎಂದರು.
ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ Twitter, Facebook , Youtube, Instagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.