ಚಿಕ್ಕಬಳ್ಳಾಪುರ : 2013 ರಲ್ಲಿ ಕಾಂಗ್ರೆಸ್ ನಲ್ಲಿ ಗೆದ್ದಾಗ ಸುಧಾಕರ್ ಕತ್ತೆಯಾಗಿದ್ರಾ? ಅಲ್ಲಿ ಬಿ ಫಾರಂ ಪಡೆದು ಗೆದ್ದು ಶಾಸಕನಾಗಿರಲಿಲ್ಲವಾ? ನಾಲಿಗೆ ಮೇಲೆ ಹಿಡಿತ ಇಟ್ಟುಕೊಂಡು, ಯೋಚನೆ ಮಾಡಿ ಮಾತನಾಡಬೇಕು. ಒಬ್ಬರ ಕಡೆ ಬೆರಳು ತೋರಿಸಿದಾಗ ಉಳಿದ ನಾಲ್ಕು ಬೆರಳುಗಳು ನಮ್ಮ ಕಡೆಗೆ ಇರುತ್ತವೆ ಎಂದು ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ ಸುಧಾಕರ್ ಅವರು ಮಾಜಿ ಆರೋಗ್ಯ ಮಂತ್ರಿ ಡಾ.ಕೆ. ಸುಧಾಕರ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ನಗರದಲ್ಲಿಂದು ಸುದ್ದಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸುಧಾಕರ್ ಸೋಲಿನಿಂದ ಹತಾಶರಾಗಿ ಏನೇನೋ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಬಹಳ ವೇಗವಾಗಿ ಅವರು ಉನ್ನತ ಮಟ್ಟಕ್ಕೆ ಹೋಗಬೇಕು ಎಂಬ ಆಸೆ ಹೊಂದಿದ್ದರು. ಗೆಲ್ಲಿಸಿದ ಮುಖಂಡರನ್ನೆ ನಿರ್ಲಕ್ಷ್ಯ ಮಾಡಿ ಉನ್ನತ ಸ್ಥಾನಕ್ಕೆ ಏರಲು ಹೋಗಿದ್ದರು. ಆ ಮನೋಭಾವನೆಯೇ ಅವರ ಇಂದಿನ ಈ ಪರಿಸ್ಥಿತಿಗೆ ಕಾರಣ ಎಂದು ಹರಿಹಾಯ್ದರು.
ಇದನ್ನೂ ಓದಿ : ‘ಬಿಜೆಪಿ ಕಚೇರಿ ಇರೋದು ಪಕ್ಷ ಸಂಘಟನೆಗೆ; ಅಲ್ಯಾಕೆ ಹೋಗಿ ಗಾಸಿಪ್ ಮಾಡಬೇಕು’
ರಾಜಕಾರಣದಲ್ಲಿ ಕೇವಲ ಹಣ, ಆಸ್ತಿ ಗಳಿಕೆ ಮಾಡುವುದರಿಂದ ಸಾದ್ಯವಿಲ್ಲ. ಯಾರು ನಮ್ಮನ್ನು ನಾಯಕರನ್ನಾಗಿ ಮಾಡಿ ಉನ್ನತ ಸ್ಥಾನದಲ್ಲಿ ಕೂರಿಸಬೇಕು ಅಂದುಕೊಂಡಿದ್ದಾರೋ, ಯಾರು ತನು ಮನ ಧನಗಳನ್ನೆಲ್ಲ ನಮಗಾಗಿ ಅರ್ಪಿಸಿರುತ್ತಾರೋ ಅಂತಹವರನ್ನು ನಿರ್ಲಕ್ಷ್ಯ ಮಾಡಿದ್ದರ ಪ್ರತೀಕವೇ ಸುಧಾಕರ್ ಸದ್ಯದ ಸ್ಥಿತಿಯಾಗಿದೆ ಎಂದು ಲೇವಡಿಮಾಡಿದರು.
ಪರೋಕ್ಷವಾಗಿ ಶಾಸಕ ಪ್ರದೀಪ್ ಈಶ್ವರನ್ನು ಕತ್ತೆಗೆ ಹೋಲಿಸಿದ್ದ ಮಾಜಿ ಸಚಿವ ಡಾ ಕೆ ಸುಧಾಕರ್, ಕಾಂಗ್ರೆಸ್ ನಲ್ಲಿ ಒಂದು ಕತ್ತೆ ನಿಲ್ಲಿಸಿದರೂ ಗೆಲ್ಲುತಿತ್ತು ಎಂದು ವ್ಯಂಗ್ಯವಾಡಿದ್ದರು ಮಾಜಿ ಸುಧಾಕರ್ ಗೆ ಈ ಮೂಲಕ ಹಾಲಿ ಸುಧಾಕರ್ ಟಾಂಗ್ ನೀಡಿದ್ದಾರೆ.
ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ Twitter, Facebook , Youtube, Instagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.