Monday, December 11, 2023
spot_img
- Advertisement -spot_img

Hindi Diwas; ಹಿಂದಿ ಎಂದಿಗೂ ಭಾರತೀಯ ಭಾಷೆಗಳೊಂದಿಗೆ ಸ್ಪರ್ಧಿಸುವುದಿಲ್ಲ; ಅಮಿತ್ ಶಾ

ನವದೆಹಲಿ: ಹಿಂದಿಯು ಭಾರತದ ಭಾಷೆಗಳ ವೈವಿಧ್ಯತೆಯನ್ನು ಒಗ್ಗೂಡಿಸುತ್ತದೆ ಮತ್ತು ವಿವಿಧ ಭಾರತೀಯ, ಜಾಗತಿಕ ಭಾಷೆಗಳು ಮತ್ತು ಉಪಭಾಷೆಗಳನ್ನು ಹಿಂದಿ ಗೌರವಿಸುತ್ತದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ.

ಹಿಂದಿ ದಿವಸ ಆಚರಣೆ ಸಂಬಂಧ ಮಾತನಾಡಿರುವ ಅವರು, ಹಿಂದಿ ಎಂದಿಗೂ ಯಾವುದೇ ಭಾರತೀಯ ಭಾಷೆಯೊಂದಿಗೆ ಸ್ಪರ್ಧಿಸುವುದಿಲ್ಲ, ಎಲ್ಲಾ ಭಾಷೆಗಳನ್ನು ಬಲಪಡಿಸುವ ಮೂಲಕ ಮಾತ್ರ ಸದೃಢವಾದ ದೇಶವು ಹೊರಹೊಮ್ಮುತ್ತದೆ ಎಂದರು.

ಇದನ್ನೂ ಓದಿ: Narendra Modi : ಇಂಡಿಯಾ ಒಕ್ಕೂಟವನ್ನು ‘ಘಮಾಂಡಿಯಾ’ ಎಂದು ಪಿಎಂ ಮೋದಿ ವಾಗ್ದಾಳಿ

ಎಲ್ಲಾ ಸ್ಥಳೀಯ ಭಾಷೆಗಳನ್ನು ಸಶಕ್ತಗೊಳಿಸಲು ಹಿಂದಿ ಮಾಧ್ಯಮವಾಗಲಿದೆ. ಭಾರತವು ವೈವಿಧ್ಯಮಯ ಭಾಷೆಗಳ ದೇಶವಾಗಿದೆ. ಹಿಂದಿ ಪ್ರಪಂಚದ ಅತಿದೊಡ್ಡ ಪ್ರಜಾಪ್ರಭುತ್ವದಲ್ಲಿ ಭಾಷೆಗಳ ವೈವಿಧ್ಯತೆಯನ್ನು ಒಂದುಗೂಡಿಸುತ್ತದೆ ಎಂದು ಶಾ ಹೇಳಿದರು.

ಸ್ವಾತಂತ್ರ್ಯ ಹೋರಾಟದ ಕಷ್ಟದ ದಿನಗಳಲ್ಲಿ ದೇಶವನ್ನು ಒಗ್ಗೂಡಿಸುವಲ್ಲಿ ಹಿಂದಿ ಭಾಷೆ ಅಭೂತಪೂರ್ವ ಪಾತ್ರವನ್ನು ವಹಿಸಿದೆ ಮತ್ತು ಹಲವಾರು ಭಾಷೆಗಳು ಮತ್ತು ಉಪಭಾಷೆಗಳನ್ನು ಹೊಂದಿರುವ ದೇಶದಲ್ಲಿ ಏಕತೆಯ ಭಾವನೆಯನ್ನು ತುಂಬಿದೆ. ಹಿಂದಿ, ಸಂವಹನ ಭಾಷೆಯಾಗಿ, ಸ್ವಾತಂತ್ರ್ಯ ಹೋರಾಟವನ್ನು ಪೂರ್ವದಿಂದ ಪಶ್ಚಿಮಕ್ಕೆ ಮತ್ತು ಉತ್ತರದಿಂದ ದಕ್ಷಿಣಕ್ಕೆ ಮುನ್ನಡೆಸುವಲ್ಲಿ ಪ್ರಮುಖ ಪಾತ್ರ ವಹಿಸಿದೆ ಎಂದಿದ್ದಾರೆ.

ಇದನ್ನೂ ಓದಿ: Parliament’s Special Session Agenda : ಸಂಸತ್‌ ವಿಶೇಷ ಅಧಿವೇಶನದ ಕಾರ್ಯಸೂಚಿ ಬಿಡುಗಡೆ ಮಾಡಿದ ಸರ್ಕಾರ

ಸ್ವಾತಂತ್ರ್ಯ ಚಳವಳಿಯಲ್ಲಿ ಹಿಂದಿಯ ಪಾತ್ರವನ್ನು ಪರಿಗಣಿಸಿ ಮತ್ತು ಸ್ವಾತಂತ್ರ್ಯದ ನಂತರ ಸಂವಿಧಾನದ ಶಿಲ್ಪಿಗಳು ಸೆಪ್ಟೆಂಬರ್ 14, 1949 ರಂದು ಹಿಂದಿಯನ್ನು ‘ಅಧಿಕೃತ ಭಾಷೆ’ಯಾಗಿ ಸ್ವೀಕರಿಸಿದರು. ಎಲ್ಲಾ ಭಾರತೀಯ ಭಾಷೆಗಳು ಮತ್ತು ಉಪಭಾಷೆಗಳು ದೇಶದ ಸಾಂಸ್ಕೃತಿಕ ಪರಂಪರೆಯಾಗಿದ್ದು, ಅದನ್ನು ಮುಂದುವರಿಸಬೇಕಾಗಿದೆ ಎಂದರು.

ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ TwitterFacebook YoutubeInstagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Related Articles

- Advertisement -spot_img

Latest Articles