ಚಿಕ್ಕಬಳ್ಳಾಪುರ: ಕಾಂಗ್ರೆಸ್‍ನವರಿಗೆ ಪ್ರತಿದಿನ ಹಿಂದೂಗಳನ್ನು ಬೈಯಲಿಲ್ಲ ಅಂದ್ರೆ ಅವರಿಗೆ ನಿದ್ದೆ ಬರಲ್ಲ ಎಂದು
ಕಂದಾಯ ಸಚಿವ ಆರ್.ಅಶೋಕ್ ಕಿಡಿಕಾರಿದ್ದಾರೆ.
ಮಾಧ್ಯಮದವರೊಂದಿಗೆ ಮಾತನಾಡಿ, ಕಾಂಗ್ರೆಸ್‍ನವರ ರಕ್ತದಲ್ಲಿ ಅವರ ಡಿಎನ್‍ಎನಲ್ಲೇ ಹಿಂದೂ ವಿರೋಧಿ ಭಾವನೆ ಬಂದಿದೆ , ನೆಹರು ಕಾಲದಿಂದಲೂ ಕಾಂಗ್ರೆಸ್ ಹಿಂದೂ ವಿರೋಧಿ. ಗುಜರಾತ್‍ನಲ್ಲಿ ಸರ್ದಾರ್ ವಲ್ಲಭಭಾಯಿ ಪಟೇಲ್ ಕಟ್ಟಿಸಿದ್ದ ದೇವಸ್ಥಾನ ಒಡೆದಾಗಲೂ ನೆಹರು ಬೆಂಬಲ ನೀಡಲಿಲ್ಲ. ಅವರಿಗೆ ಧಮ್ ಇದ್ರೆ ತಾಕತ್ ಇದ್ರೆ ಸತೀಶ್ ಜಾರಕಿಹೊಳಿ ಮೇಲೆ ಕ್ರಮ ಕೈಗೊಳ್ಳಿ ಎಂದು ಸವಾಲು ಹಾಕಿದ್ದಾರೆ.
ಸುರ್ಜೇವಾಲ ತಪ್ಪು ಅಂತ ಹೇಳಿದ್ದಾರೆ. ಅವರ ಮೇಲೆ ಕ್ರಮ ಕೈಗೊಳ್ಳಲಿ. ನೋಟಿಸ್ ಕೊಡುವ ಧಮ್, ತಾಕತ್ ಇಲ್ಲ. ಸುಮ್ಮನೆ ಹೇಳಿಕೆ ಕೊಟ್ರೆ ಪ್ರಯೋಜನವಿಲ್ಲ. ಭಾರತೀಯ ಪರಂಪರೆ ಹಿಂದೂ ಧರ್ಮದ ಜೀವನ ಪದ್ಧತಿ ಅಂತ ಸುಪ್ರೀಂಕೋರ್ಟ್ ಸಹ ವ್ಯಾಖ್ಯಾನ ಮಾಡಿದೆ ಎಂದರು.
ಮುಸ್ಲಿಮರು ಪ್ರಪಂಚಕ್ಕೆ ಒಬ್ಬರೆ ದೇವರು ಅಂತೆಲ್ಲ ಹೇಳ್ತಾರೆ. ನಮ್ಮ ಧರ್ಮ ಯಾವತ್ತು ಆ ರೀತಿ ಹೇಳಿಲ್ಲ. ನೀವು ಯಾಕೆ ಅವರ ಬಗ್ಗೆ ಎಲ್ಲೂ ಮಾತನಾಡಲ್ಲ. ಸ್ಮಶಾನದಲ್ಲಿ ಹಿಂದೂಗಳನ್ನು ಕರೆದುಕೊಂಡು ಹೋಗಿ ಮದುವೆ ಮಾಡ್ತಿರಲ್ಲ. ಮುಂದಿನ ದಿನಗಳಲ್ಲಿ ಕರ್ನಾಟಕ ಮುಕ್ತ ಕಾಂಗ್ರೆಸ್ ಆಗಿ ಜನ ಮಾಡ್ತಾರೆ ಅಂತ ಆಕ್ರೋಶ ಹೊರಹಾಕಿದ್ದಾರೆ.