Tuesday, March 28, 2023
spot_img
- Advertisement -spot_img

ಮನೆಯಲ್ಲಿ ತಲ್ವಾರ್ ಇಟ್ಟರೆ ಯಾರು ನಮ್ಮ ಹೆಣ್ಣು ಮಕ್ಕಳ ಮೇಲೆ ಕಣ್ಣು ಹಾಕೋದಿಲ್ಲ : ಶ್ರೀರಾಮಸೇನೆ ಅಧ್ಯಕ್ಷ ಪ್ರಮೋದ್ ಮುತಾಲಿಕ್

ಕಲಬುರಗಿ: ಇನ್ಮುಂದೆ ಪ್ರತಿಯೊಬ್ಬ ಹಿಂದೂ ತನ್ನ ಮನೆಯಲ್ಲಿ ತಲ್ವಾರ್ ಇಡಬೇಕು, ತಲ್ವಾರ್ ಇಟ್ಟರೆ ಯಾರು ನಮ್ಮ ಹೆಣ್ಣು ಮಕ್ಕಳ ಮೇಲೆ ಕಣ್ಣು ಹಾಕೋದಿಲ್ಲ ಎಂದು ಶ್ರೀರಾಮಸೇನೆ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಪ್ರಚೋದನಕಾರಿ ಹೇಳಿಕೆ ನೀಡಿದ್ದಾರೆ.

ಯಡ್ರಾಮಿ ಪಟ್ಟಣದಲ್ಲಿ ನಡೆದ ಹಿಂದೂ ಸಮಾವೇಶದಲ್ಲಿ ಮಾತನಾಡಿ, ಮನೆಯಲ್ಲಿ ಎಲ್ಲರಿಗೂ ಕಾಣೋ ರೀತಿಯಲ್ಲಿ ತಲ್ವಾರ್ ಇಡಬೇಕು , ಹಿಂದೂಗಳು ಮನೆ ಮನೆಯಲ್ಲಿ ತಲ್ವಾರ್ ಇಡಬೇಕು. ಮನೆಯಲ್ಲಿ ಕಾಣೋ ರೀತಿಯಲ್ಲಿ ಇಡಬೇಕು. ತಲ್ವಾರ್ ಇಡೋದು ಯಾರನ್ನಾದರೂ ಹೊಡೆಯೋಕೆ ಮಾತ್ರವಲ್ಲ, ಧರ್ಮದ ರಕ್ಷಣೆ ಹಾಗೂ ದೇಶ ರಕ್ಷಣೆಗಾಗಿ ತಲ್ವಾರ್ ಇಡಬೇಕು ಎಂದು ಹೇಳಿದ್ದಾರೆ.

ಮೊದಲು ನಾವೆಲ್ಲಾ ಆಯುಧಗಳ ಪೂಜೆ ಮಾಡ್ತಿದ್ದೀವಿ, ಪುಸ್ತಕ, ಪೆನ್ನು, ವಾಹನಗಳ ಪೂಜೆ ಮಾಡ್ತಿದ್ದೇವೆ. ಆದ್ರೆ ಇನ್ಮುಂದೆ ತಲ್ವಾರ್, ಚಾಕು, ಕೊಡಲಿ ಇಟ್ಟು ಪೂಜೆ ಮಾಡ್ಬೇಕು ಎಂದು ಕರೆ ನೀಡಿದ್ದಾರೆ.

ಪೊಲೀಸರು ಠಾಣೆಯಲ್ಲಿ ಬಂದೂಕಿಗೆ ಪೂಜೆ ಮಾಡ್ತಾರೆ ಹೊರತು ಎಫ್‌ಐಆರ್‌ಗೆ ಪೂಜೆ ಮಾಡಲ್ಲ. ಮನೆಯಲ್ಲಿ ಒಂದು ತಲ್ವಾರ್ ಇಡೋದು ಅಪರಾಧವಲ್ಲ. ಪೊಲೀಸರು ಬಂದು ಕೇಸ್ ಹಾಕ್ತೀವಿ ಅಂತಾ ಹೆದರಿಸಿದ್ರೆ, ಮೊದಲು ಶಸ್ತ್ರ ಹಿಡಿದು ನಿಂತಿರೋ ಕಾಳಿ, ದುರ್ಗೆ, ಹನುಮಂತ, ರಾಮನ ಮೇಲೆ ಕೇಸ್ ಹಾಕಿ ಅಂತಾ ಹೇಳಿ ಎಂದಿದ್ದಾರೆ.

ಆಯುಧ ಪೂಜೆಯಂದು ಟ್ರ್ಯಾಕ್ಟರ್, ಸ್ಕೂಟರ್ ಮೊದಲಾದವುಗಳಿಗೆ ಪೂಜೆ ಮಾಡುವ ಬದಲು ತಲ್ವಾರ್, ಕೊಡಲಿಗಳಿಗೆ ಪೂಜೆ ಮಾಡಬೇಕು ಅಂತ ಹೇಳಿದ ಮುತಾಲಿಕ್ ಮನೆಯಲ್ಲಿ ಅಂಥ ಆಯುಧಗಳನ್ನು ಇಡೋದು ಅಪರಾಧವಲ್ಲ, ಪೊಲೀಸರು ಅದನ್ನು ಪ್ರಶ್ನಿಸಲಾಗದು ಎಂದರು.

Related Articles

- Advertisement -

Latest Articles