Sunday, September 24, 2023
spot_img
- Advertisement -spot_img

ಹಿಂದುತ್ವ ಸರ್ವರ ಧರ್ಮ, ಅದರ ಬೆಂಬಲಿಗರೆಲ್ಲಾ ಬಿಜೆಪಿಯವರಲ್ಲ : ಛಲವಾದಿ ನಾರಾಯಣಸ್ವಾಮಿ

ಯಾದಗಿರಿ : ಹಿಂದುತ್ವದ ಹೋರಾಟಗಾರರು ಎಲ್ಲಾ ಬಿಜೆಪಿ ಕಾರ್ಯಕರ್ತರಲ್ಲ,
ಹಿಂದುತ್ವ ಎನ್ನುವದು ಸರ್ವರ ಧರ್ಮ ಎಂದು ಬಿಜೆಪಿ ಎಂಎಲ್ ಸಿ ಛಲವಾದಿ ನಾರಾಯಣಸ್ವಾಮಿ ಹೇಳಿದ್ದಾರೆ.

ಬಿಜೆಪಿ ಟಿಕೆಟ್ ಕೋಡಿಸುವ ನೆಪದಲ್ಲಿ ಕೋಟಿ ಕೋಟಿ ಡೀಲ್ ನಡೆಸಿ ಚೈತ್ರಾ ಕುಂದಾಪುರ ಬಂಧನ ಆಗಿರುವ ಬಗ್ಗೆ ನಗರದ ಸುದ್ಧಿ ಮಾಧ್ಯಮದೊಂದಿಗೆ ಮಾತನಾಡಿದ ಛಲವಾದಿ ನಾರಾಯಣಸ್ವಾಮಿ, ಹಿಂದುತ್ವದ ಹೋರಾಟಗಾರರು ಎಲ್ಲಾ ಬಿಜೆಪಿ ಕಾರ್ಯಕರ್ತರಲ್ಲ, ಹಿಂದುತ್ವ ಎನ್ನುವದು ಸರ್ವರ ಧರ್ಮವಾಗಿದೆ. ಹಾಗೆಯೆ ಬಿಜೆಪಿಗೆ ಸಪೋರ್ಟ್ ಮಾಡಿದವರು ಎಲ್ಲಾ ಬಿಜೆಪಿ ಪಕ್ಷದ ಕಾರ್ಯಕರ್ತರು ಅಲ್ಲ. ಬಿಜೆಪಿ ಪಕ್ಷ ಟಿಕೆಟ್ ಗಾಗಿ ಹಣ ಪಡೆಯುವುದಿಲ್ಲ ಇದೊಂದು ಸುಳ್ಳು ಮಾಹಿತಿ ಎಂದಿದ್ದಾರೆ.

ಇದನ್ನೂ ಓದಿ : ಚೈತ್ರಾಗೆ ಸೇರಿದ ಕಾರು, ಹಣ, ಚಿನ್ನಾಭರಣ ವಶಕ್ಕೆ ಪಡೆದ ಸಿಸಿಬಿ

ಹಣ ಪಡೆಯುವುದು ಅತಿ ಸುಳ್ಳಿನ ಸಂಗತಿ ಎಂದ ಅವರು, ನಮ್ಮ ಪಕ್ಷದಲ್ಲಿ ಒಂದು ಅರ್ಜಿಗೂ ಕೂಡ ಹಣ ಪಡೆಯುವದಿಲ್ಲ. ಹಾಗಿರುವಾಗ ಪಕ್ಷದ ಚೌಕಟ್ಟನ್ನು ಬಿಟ್ಟು ಹೊರಗಡೆ ಯಾರೋ ಹಣ ಪಡೆದು ಮೋಸ ಮಾಡಿದ್ದಾರೆ ಎಂದು ಅದು ಪಕ್ಷಕ್ಕೆ ಸೇರಿದ ವಿಚಾರವಲ್ಲ.ಯಾರೆ ಕಾನೂನು ಬಾಹಿರ ಕೆಲಸ ಮಾಡಿದ್ರು, ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸಬೇಕು. ಸಿಕ್ಕಿ ಹಾಕಿಕೊಂಡವರ ಮೇಲೆ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಬೇಕೆಂಬುದು ಪಕ್ಷದ ಸಿದ್ಧಾಂತವಾಗಿದೆ ಎಂದು ಸ್ಪಷ್ಟನೆ ನೀಡಿದರು.

ಇದನ್ನೂ ಓದಿ : ತಮಿಳುನಾಡಿಗೆ ನೀರು ಬಿಡಲ್ಲ : ಖಾಲಿ ಬಿಂದಿಗೆ ಹಿಡಿದು ವಾಟಾಳ್‌ ಪ್ರತಿಭಟನೆ

ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ TwitterFacebook YoutubeInstagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Related Articles

- Advertisement -spot_img

Latest Articles