Sunday, March 26, 2023
spot_img
- Advertisement -spot_img

ನಟೋರಿಯಸ್ ಖೈದಿಗಳನ್ನ ಹೇಗಿಟ್ಟಿದ್ದಾರೆ ಅಂತಾ ಪರಿಶೀಲನೆ ಮಾಡಿರುವೆ : ಗೃಹ ಸಚಿವ ಆರಗ ಜ್ಞಾನೇಂದ್ರ

ಬೆಳಗಾವಿ: ಖೈದಿಗಳು ಹೇಗಿದ್ದಾರೆ, ನಟೋರಿಯಸ್ ಖೈದಿಗಳನ್ನ ಹೇಗಿಟ್ಟಿದ್ದಾರೆ ಎನ್ನುವುದನ್ನ ಪರಿಶೀಲನೆ ಮಾಡಿರುವೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದರು. ಸಚಿವ ಆರಗ ಜ್ಞಾನೇಂದ್ರ ಹಿಂಡಲಗಾ ಜೈಲಿ ಗೆ ಧಿಡೀರ್ ಭೇಟಿ ನೀಡಿ ಪರಿಶೀಲನೆ ಮಾಡಿದ ನಂತರ ಮಾಧ್ಯಮದವರ ಜೊತೆಗೆ ಮಾತನಾಡಿದರು.

ಇವತ್ತು ಜೈಲಿನಲ್ಲಿ ಮೊಬೈಲ್, ಅಫೀಮು, ಅಮಲು ಪದಾರ್ಥಗಳನ್ನ ಇಟ್ಟುಕೊಳ್ಳಲಾಗುತ್ತದೆ, ಜೈಲಿನಲ್ಲಿ ರಾಯಲ್ ಟ್ರಿಟಿಮೆಂಟ್ ಪಡೆಯುವುದು ಆಗ್ತಾಯಿತ್ತು. ಹೀಗಾಗಿ ಈಗ ಬಂದೋಬಸ್ತ್ ಮಾಡಿದ್ದೇವೆ, ಜೊತೆಗೆ ಆಹಾರ, ಸ್ವಚ್ಛತೆ, ಆಸ್ಪತ್ರೆ ಹೇಗಿದೆ ಅಂತಾ ಮಾಹಿತಿ ಪಡೆದಿದ್ದೇನೆ ಎಂದು ಮಾಹಿತಿ ನೀಡಿದರು.

ಪರಪ್ಪನ ಅಗ್ರಹಾರದಲ್ಲಿ 30 ಜನ ವರ್ಗಾವಣೆ ಮಾಡಿದ್ದೇವೆ. 15 ಜನರನ್ನು ಅಮಾನತ್ತು ಮಾಡಲಾಗಿದೆ. ಇನ್ನೂ ತನಿಖೆ ಮುಂದುವರೆದಿದ್ದು, ಯಾವುದೇ ಪ್ರಮೋಷನ್ ಸಿಗುವುದಿಲ್ಲ. ಅಫೀಮು, ಅಮಲು ಪದಾರ್ಥ, ಮೊಬೈಲ್ ಒಳಗಡೆ ಬಿಟ್ಟವರಿಗೆ 5 ವರ್ಷ ಶಿಕ್ಷೆ ಆಗುತ್ತದೆ. ಒಳಗಡೆ ಶಿಕ್ಷೆಯಾದವರು ಈ ಕಾರಣಕ್ಕಾಗಿ ಅವರ ಶಿಕ್ಷೆ ಮತ್ತೆ ಐದು ವರ್ಷ ಹೆಚ್ಚಾಗುತ್ತೆ. ಅಪರಾಧ ಮಾಡಿದವರಿಗೆ ಜೈಲಿಗೆ ಹಾಕಲಾಗುವುದು. ಜೈಲಿನಲ್ಲಿ ಇದ್ದವರಿಗೂ ಶಿಕ್ಷೆ ಆಗುವಂತೆ ಮಾಡಿದ್ದೇವೆ ಎಂದು ತಿಳಿಸಿದರು.

Related Articles

- Advertisement -

Latest Articles