Sunday, September 24, 2023
spot_img
- Advertisement -spot_img

ಬಂದ್‌ ವೇಳೆ ಕಾನೂನು ಕೈಗೆತ್ತಿಕೊಂಡ್ರೆ ಕಠಿಣ ಕ್ರಮ : ಗೃಹ ಸಚಿವರ ಎಚ್ಚರಿಕೆ

ಬೆಂಗಳೂರು : ಖಾಸಗಿ ಸಾರಿಗೆ ಮಾಲೀಕರು ಬೆಂಗಳೂರು ಬಂದ್ ಮಾಡಬೇಕು ಎಂಬ ಮಾಹಿತಿ ಬಂದ ಬಳಿಕ ಸ್ವಾಭಾವಿಕವಾಗಿ ಪೊಲೀಸ್ ಇಲಾಖೆ ಅಲರ್ಟ್ ಆಗಲೇ ಬೇಕು. ಯಾವುದೇ ಅಹಿತಕರ ಘಟನೆಗಳು ನಡೆಯಬಾರದು. ಕಾನೂನಿಗೆ ವಿರುದ್ಧವಾಗಿ ಸಾರ್ವಜನಿಕ ಆಸ್ತಿ, ಸರ್ಕಾರಿ ಆಸ್ತಿಗಳಿಗೆ ಹಾನಿಯುಂಟು ಮಾಡುವವರ ವಿರುದ್ಧ ಕ್ರಮ ಕೈಗೊಳ್ಳಲಾಗವುದು ಎಂದು ಗೃಹ ಸಚಿವ ಡಾ. ಜಿ. ಪರಮೇಶ್ವರ್ ಎಚ್ಚರಿಸಿದ್ದಾರೆ.

ನಗರದಲ್ಲಿಂದು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನಿನ್ನೆ ಇವತ್ತು ಎಲ್ಲ ಅಧಿಕಾರಿಗಳಿಗೆ ಕ್ರಮ ತೆಗೆದುಕೊಳ್ಳಬೇಕು ಎಂಬ ಸೂಚನೆ ಕೊಟ್ಟಿದ್ದೇನೆ. ಇಲಾಖೆಯ ಎಸ್‌ಪಿಗಳು ಅಲರ್ಟ್ ಆಗಿ ಕ್ರಮ ತೆಗೆದುಕೊಂಡಿದ್ದಾರೆ ಎಂದು ಹೇಳಿದ್ದಾರೆ.

ಇದನ್ನೂ ಓದಿ : ಊಬರ್‌, ಆಟೋ ಚಾಲಕರ ಪ್ರತಿಭಟನೆ ರಾಜಕೀಯ ಪ್ರೇರಿತ : ಡಿಕೆಶಿ ಕಿಡಿ

ಎಲ್ಲಿಯೂ ದೊಡ್ಡ ಗಲಾಟೆ ಆಗಿಲ್ಲ. ಒಂದೆರಡು ಕಡೆ ಬಲವಂತವಾಗಿ ಬಂದ್ ಮಾಡುವ ವಿಚಾರದಲ್ಲಿ ಗಲಾಟೆಗಳಾಗಿವೆ. ಅವರಲ್ಲಿಯೇ ಎರಡು ಗುಂಪುಗಳಾಗಿ ಗಲಾಟೆಗಳು ಆಗಿವೆ. ಬಂದ್‌ಗೆ ಸಂಬಂಧಪಟ್ಟ ಮಾಹಿತಿಯನ್ನು ನಿರಂತರವಾಗಿ ಪೊಲೀಸ್ ಅಧಿಕಾರಿಗಳು ನೀಡುತ್ತಿದ್ದಾರೆ. ದೊಡ್ಡ ಗಲಾಟೆಗಳು ನಡೆದ ಸಂದರ್ಭದಲ್ಲಿ ನನ್ನ ಗಮನಕ್ಕೆ ತರಲು ಅಧಿಕಾರಿಗಳಿಗೆ ಸೂಚಿಸಿದ್ದೇನೆ ಎಂದು ತಿಳಿಸಿದ್ದಾರೆ.

ಚಿಕ್ಕ ಗಲಾಟೆಗಳು ಆದರೆ ಪೊಲೀಸ್ ಅಧಿಕಾರಿಗಳೇ ಹ್ಯಾಂಡಲ್ ಮಾಡುತ್ತಾರೆ. ಆಸ್ತಿ ನಷ್ಟ ಸಂಬಂಧ, ಬೆಂಕಿ ಹಚ್ಚಿರುವ ಪ್ರಕರಣದಲ್ಲಿ ಈಗಾಗಲೇ ಮೂರ್ನಾಲ್ಕು ಜನರ ಬಂಧನ ಮಾಡಲಾಗಿದೆ. ನಿನ್ನೆ ರಾತ್ರಿ ಟೌನ್ ಹಾಲ್ ಸರ್ಕಲ್‌ ನಲ್ಲಿ ಆಟೋ ಮೇಲೆ ದಾಳಿ ಮಾಡಿದವರನ್ನು ಬಂಧಿಸಲಾಗಿದೆ ಎಂದು ಗೃಹ ಸಚಿವರು ಮಾಹಿತಿ ನೀಡಿದ್ದಾರೆ.

ದಲಿತ ಸಿಎಂ ಚರ್ಚೆನೇ ಬೇಡ..

ಹಿಂದುಳಿದವರನ್ನು ಬಳಸಿಕೊಂಡು ಬಳಿಕ ಗುರುತಿಸಲ್ಲವೆಂಬ ಬಿ.ಕೆ.ಹರಿಪ್ರಸಾದ್ ಆರೋಪಕ್ಕೆ ಪ್ರತಿಕ್ರಿಯಿಸಿದ ಅವರು, ಮುಖ್ಯಮಂತ್ರಿ ಬದಲಾವಣೆ ವಿಚಾರದಲ್ಲಿ ಹೈಕಮಾಂಡ್ ನಾಯಕರು ಸಾಂದರ್ಭಿಕವಾಗಿ ತೀರ್ಮಾನ ಮಾಡುತ್ತಾರೆ. ಹರಿಪ್ರಸಾದ್ ಹೇಳಿರುವುದು ಅವರ ವೈಯಕ್ತಿಕ ಅಭಿಪ್ರಾಯವಾಗಿದೆ. ಅದರೆ ಈ ಬಾರಿ ಹೈಕಮಾಂಡ್‌ನವರು ಎಲ್ಲವೂ ಗಮನದಲ್ಲೆ ಇಟ್ಟುಕೊಂಡು ಮಾಡಿದ್ದಾರೆ ಎಂದು ತಿಳಿಸಿದರು.

ಇದನ್ನೂ ಓದಿ : ಗ್ಯಾರಂಟಿಗಳ ‘ಅಡ್ಡ ಪರಿಣಾಮ’ದ ತೀವ್ರತೆ ಜನರಿಗೆ ತಟ್ಟುತ್ತಿದೆ: ಕುಮಾರಸ್ವಾಮಿ

ಸಿದ್ದರಾಮಯ್ಯ ಹಿಂದುಳಿದ ವರ್ಗಕ್ಕೆ ಸೇರಿದವರು. ಲಿಂಗಾಯತ, ಒಕ್ಕಲಿಗರು ನಮಗೆ ಸಹಾಯ ಮಾಡಿದ್ದಾರೆ. ಡಿಕೆ ಶಿವಕುಮಾರ್ ಅಧ್ಯಕ್ಷರು ಇದ್ದಾರೆ. ನಾವು ಎಲ್ಲರನ್ನು ಒಟ್ಟಿಗೆ ಜೊತೆಗೆ ತೆಗೆದುಕೊಂಡು ಹೋಗುವುದೇ ಕಾಂಗ್ರೆಸ್ ನ ಶಕ್ತಿಯಾಗಿದೆ. ಹಾಗಾಗಿ ಈ ಪರಿಸ್ಥಿತಿಯಲ್ಲಿ ಯಾವುದೇ ಆತಂಕ ಇಲ್ಲ. ದಲಿತ ಸಿಎಂ ಚರ್ಚೆನೇ ಬೇಡ. ಈಗ ಸಿಎಂ ಸಿದ್ದರಾಮಯ್ಯ ಇದ್ದಾರೆ, ಅದರ ಬಗ್ಗೆ ಚರ್ಚೆ ಮಾಡಿ ಏನು ಪ್ರಯೋಜನವೆಂದರು.

ಬಿಜೆಪಿಯವರು ವೀಕ್ ಆಗಿದ್ದಾರೆ ಅದಕ್ಕೆ ಮೈತ್ರಿ ಬಗ್ಗೆ ಮಾತನಾಡ್ತಿದ್ದಾರೆ..

ಲೋಕಸಭೆಗೆ ಜೆಡಿಎಸ್ ಹಾಗೂ ಬಿಜೆಪಿ ಮೈತ್ರಿ ವಿಚಾರದ ಬಗ್ಗೆ ಮಾತನಾಡಿದ ಗೃಹ ಸಚಿವ ಪರಮೇಶ್ವರ್ ಅವರು, ಬಿಜೆಪಿಯವರು ಮೈತ್ರಿ ಮಾಡಿಕೊಳ್ಳುವುದಾಗಿ ಹೇಳುತ್ತಿದ್ದಾರೆ ಯಾಕಂದ್ರೆ ಅವರು ವೀಕ್ ಆಗಿದ್ದಾರೆ. ಅವರು ಸ್ಟ್ರಾಂಗ್ ಆಗಿದ್ದಾಗ ಮೈತ್ರಿ ವಿಚಾರ ಬರಲಿಲ್ಲ. ಕಳೆದ ಬಾರಿ ಮೈತ್ರಿ ಬಗ್ಗೆ ಮಾತಾಡಿಲ್ಲ, ಅವರೇ ಚುನಾವಣೆಯಲ್ಲಿ 25 ಕ್ಷೇತ್ರ ಗೆದ್ದರು. ಈ ಬಾರಿ ಬಿಜೆಪಿಗೆ ಹೆಚ್ಚು ಕಾನ್ಫಿಡೆನ್ಸ್ ಇಲ್ಲ ಎಂದು ವ್ಯಂಗ್ಯವಾಡಿದ್ದಾರೆ.

ಬಲಹೀನವಾಗಿರುವ ಕಾರಣಕ್ಕೆ ಜೆಡಿಎಸ್ ಜೊತೆ ಮೈತ್ರಿ ಮಾಡಿಕೊಂಡು ಹೆಚ್ಚು ಸೀಟು ಗೆಲ್ಲಬೇಕು ಎಂದು ಯೋಚಿಸುತ್ತಿದ್ದಾರೆ. ಇನ್ನೂ ಸೀಟ್ ಶೇರಿಂಗ್ ಆಗಿಲ್ಲ, ಮೈತ್ರಿ ಫೈನಲ್ ಆಗಿಲ್ಲ, ಅವರು ಮೊದಲು ಘೋಷಣೆ ಮಾಡಲಿ. ಅಲ್ಲಿಯವರೆಗೆ ನಾವು ವಾಚ್ ಮಾಡುತ್ತೇವೆ ಎಂದು ಹೇಳಿದ್ದಾರೆ.

ಕಾಂಗ್ರೆಸ್ ಗೆ ಫಿಕ್ಸ್ ವೋಟರ್ಸ್‌ ಇದ್ದಾರೆ. ದಲಿತರು, ಮುಸ್ಲಿಮರು, ಹಿಂದುಳಿದವರೆಲ್ಲ ಮತದಾರರಿದ್ದಾರೆ. ಆ ವೋಟ್‌ ಬ್ಯಾಂಕ್‌ನ್ನು ನಾವು ಮೇಂಟೇನ್ ಮಾಡುತ್ತೇವೆ, ಯಾರೂ ಆತಂಕ ಪಡುವ ಅಗತ್ಯವಿಲ್ಲ ಎಂದು ಪರಮೇಶ್ವರ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ TwitterFacebook YoutubeInstagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Related Articles

- Advertisement -spot_img

Latest Articles