Friday, September 29, 2023
spot_img
- Advertisement -spot_img

‘ಭಾರತ’ ಎಂಬ ಹೆಸರು ಬಂದಿದ್ದು ಹೇಗೆ? ಇಲ್ಲಿದೆ ನೋಡಿ ಅಸಲಿ ಕಥೆ

ಡಿಜಿಟಲ್ ಡೆಸ್ಕ್: ಸದ್ಯ ದೇಶದಲ್ಲಿ ಹೊಸ ಚರ್ಚೆಯೊಂದು ಆರಂಭವಾಗಿದೆ. ‘ಇಂಡಿಯಾ’ದ ಬದಲಿಗೆ ‘ಭಾರತ್’ ಎಂದು ಮಾತ್ರ ಅಧಿಕೃತವಾಗಿ ಬಳಕೆ ಮಾಡುವ ಪ್ರಸ್ತಾಪವನ್ನು ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ಸೆಪ್ಟೆಂಬರ್ 18ರಿಂದ 22 ರ ತನಕ ನಡೆಯುವ ವಿಶೇಷ ಸಂಸತ್ತ ಅಧಿವೇಶನದಲ್ಲಿ ಮಂಡಿಸಬಹುದು ಎಂಬ ಮಾಹಿತಿ ತಿಳಿದು ಬಂದಿದ್ದು, ಈ ಬಗ್ಗೆ ಪರ-ವಿರೋಧ ಚರ್ಚೆಗಳು ಜೋರಾಗಿ ನಡೆಯುತ್ತಿದೆ. ಸಾಮಾನ್ಯವಾಗಿ ಎಲ್ಲ ದೇಶಗಳಿಗೂ ಒಂದೇ ಹೆಸರಿದೆ. ಆದರೆ ನಮ್ಮ ದೇಶಕ್ಕೆ ಇಂಡಿಯಾ ಮತ್ತೆ ಭಾರತ ಎನ್ನುವ ಇನ್ನೊಂದು ಹೆಸರು ಸಹ ಇದೆ. ಹಾಗಿದ್ರೆ, ಭಾರತ ಎಂದರೇನು? ನಮ್ಮ ದೇಶಕ್ಕೆ ಭಾರತ ಎಂಬ ಹೆಸರು ಹೇಗೆ ಬಂದಿದ್ದು? ಈ ಬಗ್ಗೆ ಸಂಪೂರ್ಣವಾದ ಮಾಹಿತಿ ಇಲ್ಲಿದೆ ನೋಡಿ..

ಭಾರತ ಅಥವಾ ಇಂಡಿಯಾ ಎಂದು ಕರೆಯಲ್ಪಡುವ ದಕ್ಷಿಣ ಏಷ್ಯಾದ ಅತಿ ದೊಡ್ಡ ದೇಶ ನಮ್ಮದು. ಪ್ರಪಂಚದ ಮೊದಲು ಅತಿ ಹೆಚ್ಚು ಜನಸಂಖ್ಯೆ ಹೊಂದಿದ ಹಾಗೂ ಪ್ರಪಂಚದ ಅತಿ ದೊಡ್ಡ ಪ್ರಜಾಪ್ರಭುತ್ವವಿರುವ ರಾಷ್ಟ್ರ ಎಂಬ ಹೆಗ್ಗಳಿಕೆ ಸಹ ನಮಗಿದೆ. ಭಾರತ ದೇಶವು ಪ್ರಾಚೀನ ಸಿಂಧೂತಟದ ನಾಗರೀಕತೆಯ ತವರು ಮನೆ ಎಂದು ಕರೆಸಿಕೊಳ್ಳುತ್ತದೆ. ಅನೇಕ ಐತಿಹಾಸಿಕ ವಾಣಿಜ್ಯ ಮಾರ್ಗಗಳು ಹಾಗೂ ಪ್ರಾಚೀನ ಸಾಮ್ರಾಜ್ಯಗಳು ಭಾರತ ದೇಶದಲ್ಲಿ ಹುಟ್ಟಿದ್ದು, ನಾಲ್ಕು ಪ್ರಮುಖ ಧರ್ಮಗಳಾದ ಹಿಂದೂ, ಬೌದ್ಧ, ಜೈನ ಮತ್ತು ಸಿಖ್ ಗಳು ಭಾರತದಲ್ಲಿ ಆರಂಭವಾಗಿದ್ದು ಎನ್ನಲಾಗುತ್ತದೆ.

ಇದನ್ನೂ ಓದಿ : ‘ಭಾರತ್’ ಮರುನಾಮಕರಣ : ಬಿಜೆಪಿ ನಾಯಕರು ಸೇರಿದಂತೆ ಹಲವರಿಂದ ಸ್ವಾಗತ

ಭಾರತ ಎಂಬ ಹೆಸರು ಬಂದದ್ದು ಹೇಗೆ?

ನಮ್ಮ ದೇಶ ಇಂಡಿಯಾ ಎಂದು ಎಷ್ಟು ಪ್ರಸಿದ್ಧವೋ ಭಾರತ ಎಂದು ಅದಕ್ಕಿಂತ ಹೆಚ್ಚು ಪ್ರಸಿದ್ಧವಾಗಿದೆ. ಭಾರತ ಎಂಬ ಪದ ಕೇಳಿದರೆ ಸಾಕು ಎಲ್ಲರ ಮೈ ರೋಮಾಂಚನಗೊಳ್ಳುತ್ತದೆ. ಇನ್ನು ಈ ಭಾರತ ಎನ್ನುವ ಹೆಸರು ಹೇಗೆ ಬಂತು ಎಂದು ಹುಡುಕುತ್ತಾ ಹೋದರೆ ಪುರಾತನ ಕಾಲಕ್ಕೆ ಹೋಗಬೇಕಾಗುತ್ತದೆ. ಅನೇಕರಲ್ಲಿ ರಾಮಾಯಣದ ದಶರಥನ ಮಗ ಭರತದಿಂದ ಇದಕ್ಕೆ ಭಾರತ ಎಂಬ ಹೆಸರು ಬಂತು ಎನ್ನುವ ತಪ್ಪು ಕಲ್ಪನೆ ಇದೆ. ಆದರೆ ಭಾರತ ಎಂಬ ಹೆಸರು ‘ಭರತವರ್ಷ’ ಎಂಬ ಹೆಸರಿನಿಂದ ಬಂದಿದ್ದು ಎನ್ನಲಾಗುತ್ತದೆ. ಪೌರಾಣಿಕ ಹಿನ್ನೆಲೆಯಿಂದ ಈ ಹೆಸರು ಬಂದಿದೆ ಎನ್ನುವ ಮಾಹಿತಿ ಸಹ ಇದೆ.

ವೃಷಭದೇವನ ಮಗ ಭರತ ಚಕ್ರವರ್ತಿಯಿಂದ ಅಥವಾ ಮಹಾರಾಜ ದುಶ್ಯಂತನ ಪುತ್ರನಾದ ಭರತ ಮಹಾರಾಜನ ಹೆಸರಿನಿಂದ ಬಂದದ್ದು ಈ ಭಾರತ ಎನ್ನುವ ಹೆಸರು ಹಾಗೆಯೇ, ಇದಕ್ಕೆ ಇಂಡಿಯಾ ಎಂಬ ಹೆಸರು ಸಿಂಧೂ ನದಿಯ ಪರ್ಷಿಯನ್ ರೂಪಾಂತರ ಇಂಡಸ್ ನಿಂದ ಬಂದಿದೆ.

ಭರತ ಮಹಾರಾಜ ಯಾರು?

ಐತಿಹಾಸಿಕ ಅಂಶಗಳ ಪ್ರಕಾರ, ರಾಜ ಭರತ ಪಾಂಡವರು ಮತ್ತು ಕೌರವರ ಪೂರ್ವಜ ಎನ್ನಲಾಗುತ್ತದೆ. ಈ ಭರತ ಇಡೀ ಭಾರತ ಉಪಖಂಡವನ್ನು ಗೆದ್ದು ಆಳಿದ ಮಹಾನ್ ಚಕ್ರವರ್ತಿ ಎಂಬ ಬಿರುದನ್ನ ಪಡೆದುಕೊಂಡಿದ್ದು, ಭರತ ಚಕ್ರವರ್ತಿಯ ಸಾಮ್ರಾಜ್ಯವನ್ನು ಭರತವರ್ಷ ಎಂದು ಕರೆಯಲಾಗುತ್ತಿತ್ತು. ಆ ಸಮಯದಲ್ಲಿ ಈ ಸಾಮ್ರಾಜ್ಯ ಹಿಮಾಲಯದಿಂದ ಆಂಭವಾಗಿ ಅರಬ್ಬಿ ಸಮುದ್ರದ ವರೆಗೂ ಇತ್ತು ಎನ್ನುವ ಮಾಹಿತಿ ಇದೆ.

ಇದನ್ನೂ ಓದಿ : ದೇಶದ ಹೆಸರು ಬದಲಾಯಿಸುವ ಹಕ್ಕು ಯಾರಿಗೂ ಇಲ್ಲ: ಶರದ್ ಪವಾರ್

ಈ ಭರತನ ಸಾಮ್ರಾಜ್ಯ ಅಂದರೆ ಭಾರತವರ್ಷ ಅಥವಾ ಆಗಿನ ಭಾರತವು ಇಂದಿನ ಪಾಕಿಸ್ತಾನ, ಅಫ್ಘಾನಿಸ್ತಾನ, ಇರಾನ್, ತಜಕಿಸ್ತಾನ್, ಉಜ್ಬೇಕಿಸ್ತಾನ್, ಕಿರ್ಗಿಸ್ತಾನ್, ತುರ್ಕಮೆನಿಸ್ತಾನ್, ವಾಯುವ್ಯ ಟಿಬೆಟ್, ನೇಪಾಳ ಮತ್ತು ಬಾಂಗ್ಲಾದೇಶವನ್ನು ಒಳಗೊಂಡಿತ್ತು.

ಸದ್ಯ ವಿವಿಧ ಕಾರಣಗಳಿಂದ ಕೇಂದ್ರ ಸರ್ಕಾರ ಇಂಡಿಯಾ ಹೆಸರಿನ ಬದಲುಗೆ ಭಾರತ ಎಂದು ಮರುನಾಮಕರಣ ಮಾಡಲು ನಿರ್ಧಾರ ಮಾಡಿದ್ದು, ಇದು ಮುಂದಿನ ದಿನಗಳಲ್ಲಿ ಯಾವ ತಿರುವನ್ನ ಪಡೆದುಕೊಳ್ಳಲಿದೆ ಎಂಬುದು ಮಾತ್ರ ಕುತೂಹಲ ಮೂಡಿಸಿದೆ.

ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ TwitterFacebook YoutubeInstagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Related Articles

- Advertisement -spot_img

Latest Articles