Sunday, October 1, 2023
spot_img
- Advertisement -spot_img

ಚಂದ್ರಯಾನ-3ರ ಬಜೆಟ್ ಎಷ್ಟು ಗೊತ್ತಾ?

ಬೆಂಗಳೂರು : ಆಂಧ್ರ ಪ್ರದೇಶದಲ್ಲಿನ ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಕಳೆದ ಜುಲೈ ತಿಂಗಳ 14ರಂದು ಉಡಾವಣೆ ಮಾಡಲಾಗಿದ್ದ ಚಂದ್ರಯಾನ-3ರ ನೌಕೆಯು ಇಂದು ಸಂಜೆ ಚಂದ್ರನ ಮೇಲ್ಮೈಯನ್ನು ತಲುಪಲಿದೆ.

ಅವತಾರ್-2 ಸಿನೆಮಾಗಿಂತಲೂ ಕಡಿಮೆ ವೆಚ್ಚದಲ್ಲಿ ಸಿದ್ದವಾಗಿರುವ ಚಂದ್ರಯಾನ-3 ಲೂನಾ 25ರ ಒಟ್ಟಾರೆ ವೆಚ್ಚ 160 ಮಿಲಿಯನ್ ಗಳಷ್ಟಾಗಿದೆ. ಐತಿಹಾಸಿಕ ಚಂದ್ರಯಾನ-3 ವಿಕ್ರಮ್ ಹಾಗೂ ಪ್ರಗ್ಯಾನ್ ಲ್ಯಾಂಡರ್‌ಗಳು ಚಂದ್ರನ ಬಳಿ ತಲುಪಲು ಇಸ್ರೋ ಮಾಡಿದ ಖರ್ಚುವೆಚ್ಚದ ಸಂಪೂರ್ಣ ಮಾಹಿತಿ ಇಲ್ಲಿದೆ.

ಇದನ್ನೂ ಓದಿ : ಚಂದ್ರಯಾನ-3: ರಾಜ್ಯಾದ್ಯಂತ ದೇವಾಲಯಗಳಲ್ಲಿ ವಿಶೇಷ ಪೂಜೆ; ಸೇಫ್ ಲ್ಯಾಂಡಿಂಗ್‌ಗಾಗಿ ಪ್ರಾರ್ಥನೆ

615 ಕೋಟಿ ರೂ.ಗಳ ಯೋಜನೆ ಚಂದ್ರಯಾನ-3..

ಒಟ್ಟು 615 ಕೋಟಿ ರೂ.ಗಳ ಯೋಜನೆಯಾಗಿರುವ ಚಂದ್ರಯಾನ್-3ರ ಒಟ್ಟಾರೆ ತೂಕ – 3,900 ಕೆಜಿಯಾಗಿದೆ. ಚಂದ್ರನಲ್ಲಿರುವ ಮಣ್ಣು ಹಾಗೂ ಅಲ್ಲಿನ ಮೇಲ್ಮೈಯ ಕುರಿತು ಅಧ್ಯಯನ ಮಾಡುವುದು ಈ ಯೋಜನೆಯ ಪ್ರಮುಖ ಉದ್ದೇಶವಾಗಿದೆ.

3,84,400 ಕಿ.ಮೀ. ಗಳಷ್ಟು ದೂರ ಕ್ರಮಿಸಲಿರುವ ಲ್ಯಾಂಡರ್‌ಗಳು, 8 ಹಂತಗಳಲ್ಲಿ ಚಂದ್ರನ ಕಕ್ಷೆಗೆ ಸೇರ್ಪಡೆಯಾಗಲಿವೆ. ಅಲ್ಲದೆ ಒಟ್ಟು 40 ದಿನಗಳ ಕಾಲ ಪ್ರಯಾಣದ ಅವಧಿಯನ್ನು ಹೊಂದಿರುವ ಚಂದ್ರಯಾನ-3ರ ನಿರ್ವಹಣೆಯು ನಗರದ ಪೀಣ್ಯದ ಇಸ್ರೋ ಕೇಂದ್ರದಿಂದ ನಡೆಯುತ್ತಿದೆ.

ನಿರೀಕ್ಷಿತವಾಗಿ ಲ್ಯಾಂಡರ್‌ಗಳು ಇಂದು ಸಂಜೆ 6.04 ನಿಮಿಷಕ್ಕೆ ಚಂದ್ರನ ಕಕ್ಷೆಯನ್ನು ಸೇರಲಿವೆ. ಈ ಕ್ಷಣವನ್ನು ಕಣ್ತುಂಬಿಕೊಳ್ಳಲು ಭಾರತವಲ್ಲದೆ ಜಗತ್ತಿನ ನಾನಾ ದೇಶಗಳು ತುದಿಗಾಲ ಮೇಲೆ ನಿಂತಿವೆ.

ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ TwitterFacebook YoutubeInstagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Related Articles

- Advertisement -spot_img

Latest Articles