ಬೆಂಗಳೂರು: ಹಳೆಯ ವಾಹನಗಳಿಗೆ ಭದ್ರತಾ ನೊಂದಣಿ ಫಲಕಗಳನ್ನು ಅಳವಡಿಸಲು ಈಗಾಗಲೇ ನೀಡಲಾದ ಅವಧಿಯನ್ನು ಸಾರಿಗೆ ಇಲಾಖೆ ಮೂರು ತಿಂಗಳುಗಳ ಕಾಲ ವಿಸ್ತರಿಸಿದೆ. ನೊಂದಣಿ ಪ್ರಮಾಣ ಪತ್ರ (ಆರ್ ಸಿ) ಕಾರ್ಯಕ್ಷಮತೆ ಪ್ರಮಾಣ ಪತ್ರ (ಎಫ್ ಸಿ) ಪಡೆಯಲು ಹೆಚ್ಎಸ್ಆರ್ಪಿ ಕಡ್ಡಾಯಗೊಳಿಸಲಾಗಿದೆ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಹೇಳಿದ್ದಾರೆ.
ಏಪ್ರಿಲ್ 1, 2019 ರ ನಂತರ ನೊಂದಣಿ ಆಗಿರುವ ಎಲ್ಲಾ ವಾಹನಗಳಿಗೆ ಸುರಕ್ಷಿತ ನೋಂದಣಿ ಪಲಕ (ಎಚ್ ಎಸ್ ಆರ್ ಪಿ) ಪಲಕಗಳಿವೆ. ಆದರೆ ಅದರ ಹಿಂದಿನ ವಾಹನಗಳಲ್ಲಿ ಇದನ್ನೂ ಅಳವಡಿಸುದು ಕಡ್ಡಾಯವಾಗಿದೆ. ಏಕೆಂದರೆ ಹಳೆಯ ವಾಹನಗಳಿಂದ ಉಂಟಾಗುವ ಪರಿಸರ ಮಾಲಿನ್ಯವನ್ನು ತಡೆಯಲು ಭದ್ರತಾ ನೊಂದಣಿ ಫಲಕಗಳನ್ನು ಅಳವಡಿಸುವುದು ಕಡ್ಡಾಯವಾಗಿದೆ.
ಇದನ್ನೂ ಓದಿ: ‘ಎಲ್ಲರೂ ಟ್ರೋಲ್ ಮಾಡಿದಾಗ ರಾಹುಲ್ ಗಾಂಧಿ ಮಾತ್ರ ಶಮಿ ಜೊತೆ ನಿಂತಿದ್ದರು’
ಈ ಕಾರಣದಿಂದ ಅತಿ ಸುರಕ್ಷಿತ ನೊಂದಣಿ ಫಲಕಗಳನ್ನು ಅಳವಡಿಸುವುದನ್ನು ನಾಲ್ಕು ತಿಂಗಳು ಮುಂದೂಡಬೇಕೆಂದು ಸಾರಿಗೆ ಮತ್ತು ರಸ್ತೆ ಸುರಕ್ಷತೆ ಆಯುಕ್ತರು ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಿದ್ದರು. ಆದರೆ ಸರ್ಕಾರ ನಾಲ್ಕು ತಿಂಗಳ ಬದಲು ಮೂರೂ ತಿಂಗಳ ಅವಕಾಶ ನೀಡಲು ನಿರ್ಧರಿಸಿದೆ.
ಇದಕ್ಕಾಗಿ ಸರ್ಕಾರ ಆನ್ಲೈನ್ ಮೂಲಕವೂ ಅವಕಾಶ ಕಲ್ಪಿಸಿದೆ. https://transport.karnataka.gov.in/ ಅಥವಾ https://www.siam.in/ ಈ ಎರಡು ವೆಬ್ ಸೈಟ್ ಮೂಲಕ ಎಚ್ ಎಸ್ ಆರ್ ಪಿ ಗಾಗಿ ನೊಂದಣಿ ಮಾಡಬಹುದು.
ಇದನ್ನೂ ಓದಿ: ಲೋಕಸಮರಕ್ಕೆ ಆಪ್ತರನ್ನೇ ಕಣಕ್ಕಿಳಿಸಲು ಸತೀಶ್ ಜಾರಕಿಹೊಳಿ ಭರ್ಜರಿ ಪ್ಲಾನ್.. !
ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ Twitter, Facebook , Youtube, Instagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.