ಹೆಸರು : ಜಗದೀಶ ಗುಡಗುಂಟಿ
ಸ್ಥಾನ : ವಿಧಾನಸಭಾ ಸದಸ್ಯರು (ಬಿಜೆಪಿ)
ತಂದೆ : ಶಿವಯ್ಯ ಗುಡಗುಂಟಿ
ತಾಯಿ : ಪುಷ್ಪಾವತಿ ಶಿವಯ್ಯ ಗುಡಗುಂಟಿ
ಜನ್ಮ ದಿನಾಂಕ : 06-07-1954
ಜನ್ಮ ಸ್ಥಳ : ಹೊನ್ನವಾಡ, ತಾ|| ಜಿ|| ವಿಜಯಪುರ
ಶಿಕ್ಷಣ : ಡಿಪ್ಲೊಮಾ ಇನ್ ಮೆಕ್ಯಾನಿಕಲ್ ಎಂಜಿನಿಯರಿಂಗ್ ಎಎಂಐಇ, ಬಿಓಇ
ಪಕ್ಷ : ಬಿಜೆಪಿ
ಕ್ಷೇತ್ರ : ಜಮಖಂಡಿ
ಬಾಲ್ಯ ಹಾಗೂ ಶಿಕ್ಷಣ :
ವಿಜಯಪುರ ತಾಲ್ಲೂಕಿನ ಹೊನವಾಡದಲ್ಲಿ 1954 ಜುಲೈ 6ರಂದು ಜನಿಸಿದರು. ಇವರ ತಂದೆ ಶಿವಯ್ಯ, ತಾಯಿ ಪುಷ್ಪಾವತಿ. ವೀರಶೈವ ಲಿಂಗಾಯತ (ಜಂಗಮ) ಸಮುದಾಯದ ಕುಟುಂಬದಲ್ಲಿ ಜನಿಸಿದ ಇವರು ಪ್ರಾಥಮಿಕ-ಪ್ರೌಢ ಶಿಕ್ಷಣ ತಮ್ಮ ಊರಿನಲ್ಲೇ ಪೂರ್ಣಗೊಳಿಸಿ, 1972ರಲ್ಲಿ ಬಾಗಲಕೋಟೆಯಲ್ಲಿರುವ ಬಿವಿವಿ ಸಂಘದ ಪಾಲಿಟೆಕ್ನಿಕ್ ಡಿಪ್ಲೋಮಾ ಇನ್ ಮೆಕ್ಯಾನಿಕಲ್ ಇಂಜಿನಿಯರಿಂಗ್ ವಿದ್ಯಾಭ್ಯಾಸ ಮುಗಿಸಿದರು. ನಂತರ 1982 ನವೆಂಬರ್ 9ರಂದು ಮಹಾರಾಷ್ಟ್ರದ ಅಹಮದ್‌ನಗರ ಜಿಲ್ಲೆಯ ರಹುರಿಯಲ್ಲಿರುವ ರಹುರಿ ಸಕ್ಕರೆ ಕಾರ್ಖಾನೆಯಲ್ಲಿ ಪ್ಲಾನಿಂಗ್, ಡಿಸೈನ್ ಮತ್ತು ಡೆವಲಪ್‌ಮೆಂಟ್ ಇಂಜಿನಿಯರಿಂಗ್ ಆಗಿ ಸೇವೆ ಸಲ್ಲಿಸಿದರು.
ಹವ್ಯಾಸಗಳು : ಜಗದೀಶ ಗುಡಗುಂಟಿ ಅವರು ಬಡತನದ ಕುಟುಂಬದಲ್ಲಿ ಹುಟ್ಟಿ ಬೆಳೆದರೂ ಶಿಕ್ಷಣ ಪಡೆದು ದೊಡ್ಡ ಉದ್ಯಮಿಯಗಿ ಬೆಳೆದಿದ್ದಾರೆ. ಗುಡಗುಂಟಿ ಅವರು ಪುಸ್ತಕ ಓದುವುದು, ಹೊಸ ಹೊಸ ವಿಚಾರ ತಿಳಿದುಕೊಳ್ಳುವುದು, ಬಡವರ ಸೇವೆ ಮಾಡುವುದು ತಮ್ಮ ಹವ್ಯಾಸವನ್ನಾಗಿ ಮಾಡಿಕೊಂಡು ತಮ್ಮ ಉದ್ಯಮದೊಂದಿಗೆ ಜಮಖಂಡಿ ಕ್ಷೇತ್ರದ ಶಾಸಕರಾಗಿ ಕ್ಷೇತ್ರದ ಜನರ ಸಮಸ್ಯೆಗೆ ಸ್ಪಂದಿಸುವ ಕೆಲಸ ಮಾಡುತ್ತಿದ್ದಾರೆ.
ಜಗದೀಶ ಶಿವಯ್ಯ ಗುಡಗುಂಟಿ ಅವರ ಜೀವನ:
• 1999ರಲ್ಲಿ ಪ್ರಭುಲಿಂಗೇಶ್ವರ ಶುಗರ್ ವರ್ಕ್ಸ್ ಲಿಮಿಟೆಡ್ ಮತ್ತು ಕೋ-ಜೈನ್ ಪವರ್ 3500 ಟಿಸಿಡಿ +18 ಮೆಗಾವ್ಯಾಟ್ ಸಾಮರ್ಥ್ಯದಲ್ಲಿ ತೆರೆದು ಡಿಸೆಂಬರ್ 1999ರಲ್ಲಿ ಪರೀಕ್ಷಾರ್ಥವಾಗಿ ಚಾಲನೆ ನೀಡಿದರು.
• 2000ರಲ್ಲಿ ವಾಣಿಜ್ಯಾತ್ಮಕವಾಗಿ ಉತ್ಪಾದನೆ ಆರಂಭಿಸಿದ್ದು, ಮೊದಲ ವರ್ಷವೇ 4,85,000 ಮೆಟ್ರಿಕ್ ಟನ್ ಕಬ್ಬನ್ನು ಅರೆಯಲಾಯಿತು. ಈ ಮೂಲಕ ತಮ್ಮ ಸ್ವಂತ ಉದ್ಯಮ ಆರಂಭಿಸಿದ್ದರು.
• ಶ್ರೀ ಪ್ರಭುಲಿಂಗೇಶ್ವರ ಶುಗರ್ ಅಂಡ್ ಕೆಮಿಕಲ್ಸ್ ಲಿಮಿಟೆಡ್, ಸಿದ್ದಾಪುರ ತಾ|| ಜಮಖಂಡಿ ಜಿ|| ಬಾಗಲಕೋಟೆ
• ಸಿದ್ದಾಪುರ ಡಿಸ್ಟಲರೀಸ್ ಲಿ, ಸಿದ್ದಾಪುರ, ತಾ|| ಜಮಖಂಡಿ, ಜಿ|| ಬಾಗಲಕೋಟೆ
• ಶ್ರೀ ಪ್ರಭುಲಿಂಗೇಶ್ವರ ಸೌಹಾರ್ದ ಕ್ರೆಡಿಟ್ ಕೋ-ಆಪರೇಟಿವ್ ಲಿ, ಸಿದ್ದಾಪುರ, ತಾ|| ಜಮಖಂಡಿ, ಜಿ|| ಬಾಗಲಕೋಟೆ
• ಶ್ರೀ ಪ್ರಭುಲಿಂಗೇಶ್ವರ ಶಿಕ್ಷಣ ಸಂಸ್ಥೆ ಸಿದ್ದಾಪುರ, ತಾ|| ಜಮಖಂಡಿ, ಜಿ|| ಬಾಗಲಕೋಟೆ
ಪ್ರಸ್ತುತವಾಗಿ ಜಮಖಂಡಿ ಕ್ಷೇತ್ರದ ಶಾಸಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ Twitter, Facebook , Youtube, Instagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.