ಮೈಸೂರು : ಏನಪ್ಪಾ ಪ್ರತಾಪ್ ಸಿಂಹ ಎಷ್ಟು ಕೋಟಿಗೆ ಮನೆ ಕಟ್ಟುತ್ತಿದ್ದೀಯಾ ?ಬೆಕ್ಕು ಕಣ್ಣು ಮುಚ್ಚಿ ಹಾಲು ಕುಡಿದ್ರೆ ಗೊತ್ತಾಗಲ್ವಾ? ಬೆಂಗಳೂರು ಮೈಸೂರು ಹೈವೇಯಲ್ಲಿ ಎಸ್ಟ್ ಬಂತು ? ಎಂದು ವಿಧಾನ ಪರಿಷತ್ ಸದಸ್ಯ ಹೆಚ್ ವಿಶ್ವನಾಥ್ ಪ್ರಶ್ನಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಬೆಂಗಳೂರು ಮೈಸೂರು ದಶಪಥ ರಸ್ತೆ ನಿರ್ಮಾಣದ ಬಗ್ಗೆ ಮಾತನಾಡಿ, ದಶಪಥ ರಸ್ತೆ ಬಗ್ಗೆ ಸಾಮಾನ್ಯ ಜನರಿಗೆ ಗೊತ್ತಿಲ್ಲ, ನಿಮ್ಮ ಮೂಲಕ ತಿಳಿಸುವ ಪ್ರಯತ್ನವಾಗಬೇಕು, ಒಂದು ಕಡೆ ಪ್ರತಾಪ್ ಸಿಂಹ ನಾನೇ ಇದರ ರುವಾರಿ ಅಂತಾರೆ, ಮೊದಲು ಇದು 4 ಪಥದ ರಸ್ತೆಯನ್ನು ಎಸ್ ಎಂ ಕೃಷ್ಣ ಅವರ ಕಾಲಾವಧಿಯಲ್ಲಿ ಅನುಮೋದನೆ ಸಿಕ್ಕಿತ್ತು, ನಂತರ ಎಚ್.ಸಿ ಮಹಾದೇವಪ್ಪ ಪಿಡಿಡಬ್ಲೂ ಸಚಿವರಾಗಿದ್ದಾಗ ಈ ರಸ್ತೆ ರಾಷ್ಟ್ರೀಯ ಹೆದ್ದಾರಿಯಾಗಿ ಮೇಲ್ದರ್ಜೆಗೆ ಏರಿಸಲಾಯಿತು ಎಂದು ತಿಳಿಸಿದರು.
ಯುಪಿಎ ಸರ್ಕಾರದ ಮನಮೋಹನ್ ಸಿಂಗ್ ಈ ರಸ್ತೆ ಅಭಿವೃದ್ಧಿಗೆ ಅನುಮೋದನೆ ಕೊಟ್ಟಿದ್ದರು, ಈಗ ಇವರು ನಾವು ಮಾಡಿಸಿದ್ದು ಅಂತ ಬೊಗಳೆ ಹೊಡೆಯುತ್ತಿದ್ದಾರೆ, ಯಾರಪ್ಪನ ದುಡ್ಡು ತಂದು ಕೊಟ್ಟಿದ್ದೀರೀ.? ಜನರ ಬೆವರಿನ ದುಡ್ಡಿನಿಂದ ಮಾಡಿಸಿದ್ದು ಇದು ನಿಮ್ಮ ಮನೆಯಿಂದ ತಂದಿದ್ದ ದುಡ್ಡಲ್ಲ ಎಂದು ಕಿಡಿಕಾರಿದರು.
ಇದು ಅರ್ಧ ಉದ್ಘಾಟನೆ ಅಷ್ಟೇ ಆಗಿರೋದು, ಇನ್ನೂ ಸಂಪೂರ್ಣವಾಗಿ ಕಾಮಗಾರಿ ಪೂರ್ಣವಾಗಿಯೇ ಇಲ್ಲ, ಇನ್ನೆಷ್ಟು ದಿನ ರಾಮನ ಹೆಸರಿನಲ್ಲಿ ವೋಟ್ ಕೇಳ್ತೀರಾ ಎಂದು ಪ್ರಶ್ನಿಸಿದರು.
ನಮ್ಮನ್ನಗಲಿದ ಧ್ರುವನಾರಾಯಣ್, ನಾನು ಒಟ್ಟಿಗೆ ಸಂಸತ್ ಪ್ರವೇಶ ಮಾಡಿದೆವು, ಬಹಳ ಕ್ರಿಯಾಶೀಲ ವ್ಯಕ್ತಿ ಎಂದು ಸಂಸದರಾಗಿ ಉತ್ತಮ ಕೆಲಸ ಮಾಡಿದ್ದವರು ಎಂದರು. ಕಳೆದ ಚುನಾವಣೆಯಲ್ಲಿ ಅಲ್ಪ ಮತಗಳ ಅಂತರದಲ್ಲಿ ಸೋತರೂ ಛಲಬಿಡದ ನಾಯಕನಾಗಿ ಜನರ ಜೊತೆ ನಿರಂತರ ಸಂಪರ್ಕದಲ್ಲಿದ್ದರು, ಈಗ ಅವರ ನಿಧನದ ಬಳಿಕ ಅವರ ಮಗನಿಗೆ ಟಿಕೆಟ್ ಕೊಡಬೇಕು ಎಂಬ ಕೂಗು ಕೇಳಿಬರುತ್ತಿದೆ. ನಂಜನಗೂಡಿನಿಂದ ಟಿಕೇಟ್ ಗೆ ಒತ್ತಾಯ ಕೇಳಿ ಬಂದಿದೆ, ಇದನ್ನ ಪಕ್ಷದ ವರಿಷ್ಠರು ಮಾನ್ಯ ಮಾಡಬೇಕು ಎಂದು ಒತ್ತಾಯಿಸಿದರು.
ಮಂಡ್ಯಕ್ಕೆ ಬಂದಾಗ ಇಲ್ಲಿ ಧ್ರುವನಾರಾಯಣ್ ಸಾವಾಗಿದ್ದರೂ ಸೌಜನ್ಯಕ್ಕಾದರೂ ಅವರ ಹೆಸರು ಪ್ರಸ್ತಾಪ ಮಾಡಲಿಲ್ಲ.ಅದ್ಯಾವುದೋ ಉರಿಗೌಡ,ನಂಜೇಗೌಡರ ಹೆಸರು ಹೇಳ್ಕೊಂಡು ಭಾವನಾತ್ಮಕ ವಿಚಾರ ತಂದು ಮತಬೇಟೆ ಕೆಲಸ ಮಾಡುತ್ತಿದೆ ಥೂ ನಿಮ್ಮ ಯೋಗ್ಯತೆಗೆ, ಛೀ… ಥೂ…ಎಂದು ಬಿಜೆಪಿ ಸರ್ಕಾರ ಎಂದು ವಾಗ್ದಾಳಿ ನಡೆಸಿದರು.