ತುಮಕೂರು : ಮೂರು ಡಿಸಿಎಂ ಸ್ಥಾನಗಳನ್ನು ಸೃಷ್ಟಿ ಮಾಡಿದ್ರೆ, ಎಲ್ಲ ಸಮುದಾಯಗಳು ನಮಗೆ ಬೆಂಬಲ ನೀಡಲು ಅನುಕೂಲ ಆಗುತ್ತದೆ, ಪರಿಶಿಷ್ಟ ಜಾತಿ-ಪಂಗಡ, ಅಲ್ಪಸಂಖ್ಯಾತರಿಗೆ, ವೀರಶೈವ ಸಮುದಾಯಗಳಿಗೆ ಉಪಮುಖ್ಯಮಂತ್ರಿಗಳು ಅವಕಾಶ ಸೃಷ್ಟಿ ಮಾಡಬೇಕು ಎಂದು ಕೆ.ಎನ್. ರಾಜಣ್ಣ ಹೇಳಿದರು.
ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಇದು ನನ್ನ ವೈಯಕ್ತಿಕ ಅಭಿಪ್ರಾಯ, ಕಾಂಗ್ರೆಸ್ ಹೈಕಮಾಂಡ್ ಪತ್ರ ಬರೆಯಲು ಇಚ್ಛಿಸಿದ್ದೇನೆ, ಇವತ್ತು ಪತ್ರ ಬರೆಯುತ್ತೇನೆ, ಮುಂದಿನ ತಿಂಗಳ ಮೊದಲ ವಾರದಲ್ಲಿ ಹೈಕಮಾಂಡ್ ಮುಖಂಡರನ್ನು ಭೇಟಿ ಮಾಡುತ್ತೇನೆ, ಯಾರಿಗೆ ಆಯ್ಕೆ ಮಾಡುತ್ತಾರೆ ಅಂತ ಹೈ ಕಮಾಂಡ್ ನಿರ್ಣಯ ಮಾಡಬೇಕು, ಹೈ ಕಮಾಂಡ್ ತೀರ್ಮಾನವೇ ನಮ್ಮೆಲ್ಲರ ತೀರ್ಮಾನ, ಪಕ್ಷದ ಹಿತ ದೃಷ್ಟಿ ಒಳ್ಳೆಯದು, ಈ ಹೇಳಿಕೆಗೆ ಸಹಮತ ನೀಡುತ್ತಾರೋ ಅವರೆಲ್ಲರನ್ನು ಕರೆದುಕೊಂಡು ಹೋಗ್ತೀನಿ ಎಂದು ಹೇಳಿದರು.
ಡಿಕೆ ಶಿವಕುಮಾರ್ ಕೂಡ ಉಪಮುಖ್ಯಮಂತ್ರಿ ಇದ್ದಾರೆ ಸಂತೋಷ, ಡಿಕೆ.ಶಿವಕುಮಾರ್ ಗೆ ಅಸಮಾಧಾನವೇನಿಲ್ಲ, ನಾನು ಡಿಕೆ ಬ್ರದರ್ಸ್ ವಿರುದ್ಧ ಹೇಳಿಲ್ಲ ಎಂದು ಪ್ರತಿಕ್ರಿಯಿಸಿದರು. ಅವರು ನಮ್ಮ ಪಕ್ಷದ ಅಧ್ಯಕ್ಷರಾಗಿದ್ದಾರೆ, ಪಕ್ಷ ಸಂಘಟನೆಯ ಚಾಣಾಕ್ಷ್ಯರಿದ್ದಾರೆ, ಅವರು ಅಸಮಾಧಾನಗೊಳ್ಳುವ ಪರಿಸ್ಥಿತಿ ಸಂದರ್ಭ ಸೃಷ್ಟಿಯಾಗಿಲ್ಲ ಎಂದರು.
ಐದು ಗ್ಯಾರಂಟಿಗಳ ಪೈಕಿ ನಾಲ್ಕು ಗ್ಯಾರಂಟಿಗಳನ್ನು ಈಗಾಗಲೇ ಪೂರೈಸಿದ್ದೇವೆ, ನಿರುದ್ಯೋಗಿಗಳಿಗೆ 3 ಸಾವಿರ ಭತ್ಯೆ ನೀಡಲು ಇರುವ ಗ್ಯಾರಂಟಿ ಮಾತ್ರ ಬಾಕಿಯಿದೆ , ಅದನ್ನು ಆದಷ್ಟು ಬೇಗ ಈಡೇರಿಸ್ತೇವೆ ಎಂದು ವಿವರಿಸಿದರು.
ಇದನ್ನೂ ಓದಿ: ‘ಕಾಂಗ್ರೆಸ್‌ನವರು ರಾಜ್ಯದ ರೈತರ ಹಿತ ಬಲಿ ಕೊಡುತ್ತಿದ್ದಾರೆ’
ನಮ್ಮ ಸರ್ಕಾರ ಯಶಸ್ವಿಯಾಗಿ 100 ದಿನ ಪೂರೈಸಿದೆ , ನುಡಿದಂತೆ ನಡೆದಿದ್ದೇವೆ, ಜನರು ಕೂಡ ಸಂತೃಪ್ತಿಯಿಂದ ಇದ್ದಾರೆ. ಲೋಕಸಭೆ ಚುನಾವಣೆ ನಮ್ಮ ಮನೆ ಹೊಸ್ತಿಲಿನಲ್ಲಿ ಬಂದು ನಿಂತಿದ್ದು, ಎಲ್ಲ ಪಕ್ಷಗಳು ಚುನಾವಣೆಗೆ ಸಜ್ಜಾಗುತ್ತಿವೆ, ಕಾಂಗ್ರೆಸ್ ರಾಜ್ಯದಲ್ಲಿ ಅತಿ ಲೋಕಸಭೆ ಕ್ಷೇತ್ರಗಳನ್ನು ಗೆಲ್ಲಬೇಕು, ನಾವು ಗೆಲ್ಲುತ್ತೇವೆ ಅನ್ನೋ ವಿಶ್ವಾಸವಿದೆ ಎಂದು ತಿಳಿಸಿದರು.
ಲೋಕಸಭೆ ಚುನಾವಣೆ ಅಭ್ಯರ್ಥಿಗಳ ಬಗ್ಗೆ ಚರ್ಚೆ ಬಂದಿಲ್ಲ, ಹಾಸನದಲ್ಲಿ ಯಾರನ್ನ ಅಭ್ಯರ್ಥಿ ಹಾಕಿದ್ರೆ ಒಳ್ಳೇದು ಅಂತ ವೈಯಕ್ತಿಕವಾಗಿ ಎಲ್ಲರ ಜೊತೆಗೆ ಚರ್ಚೆ ಮಾಡ್ತಿದ್ದೀನಿ, ಅವರ ಅಭಿಪ್ರಾಯ ಪಡೆಯುತ್ತಿದ್ದೇನೆ, ಎಲ್ಲರ ಸಲಹೆ ಪಕ್ಷಕ್ಕೆ ನೀಡುತ್ತೇವೆ, ಅದರ ಮೇಲೆ ಹೈ ಕಮಾಂಡ್ ನಿರ್ಧಾರ ತೆಗೆದುಕೊಳ್ಳುತ್ತಾರೆ.
ಬಿಜೆಪಿ ಪ್ರೀತಂ ಗೌಡ ಜೆಡಿಎಸ್- ಬಿಜೆಪಿ ಮೈತ್ರಿಗೆ ವಿರೋಧ ಮಾಡಿದ್ದಾರಂತ ಭಾವಿಸಿದ್ದೇನೆ, ಅದು ಅಂತಿಮ ಆದ ಮೇಲೆ ತಾನೇ ನಿರ್ಧಾರ ಆಗೋದು, ಮೈತ್ರಿ ಅಂತಿಮವಾಗಿಲ್ಲ ಅಂತ ನಿನ್ನೆ ಯಡಿಯೂರಪ್ಪ ಹೇಳಿದ್ದಾರೆ, ಇನ್ನು ಒಂದು ಸೀಟಿನ ಬಗ್ಗೆ ಚರ್ಚೆ ನಡೆಯುತ್ತಿದೆ ಅಂತ ಹೇಳಿದ್ದಾರೆ.
ರಾಜಕಾರಣದಲ್ಲಿ ಯಾವುದೇ ನಿರ್ಣಯ ತೀರ್ಮಾನ ಅಂತಿಮವಲ್ಲ, ಜೆಡಿಎಸ್ ಮಾಜಿ ಶಾಸಕ ಗೌರಿಶಂಕರ್ ಕಾಂಗ್ರೆಸ್ ಬರುವ ಬಗ್ಗೆ ನನಗೆ ಮಾಹಿತಿಯಿಲ್ಲ, ಎಸ್.ಟಿ ಸೋಮಶೇಖರ್, ಹೆಬ್ಬಾರ್ ಕಾಂಗ್ರೆಸ್ ಗೆ ಬರ್ತಾರೆ ಅಂತ ಮಾಹಿತಿಯಿದೆ ಎಂದು ತಿಳಿಸಿದರು.
ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ Twitter, Facebook , Youtube, Instagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.