Monday, March 27, 2023
spot_img
- Advertisement -spot_img

ಸಿದ್ದು ವಿರುದ್ಧ ತೊಡೆ ತಟ್ಟಿದ ರಾಮುಲು; ಪಕ್ಷ ಅವಕಾಶ ಕೊಟ್ರೆ ಬದಾಮಿಯಿಂದ ಸ್ಪರ್ಧೆ..!

ಬಾಗಲಕೋಟೆ: ಅಧಿವೇಶನದಲ್ಲಿ ನಡೆಯಬೇಕಿದ್ದ ಚರ್ಚೆಗಳನ್ನು ಮೊಟಕುಗೊಳಿಸಿ, ಸ್ವಾರ್ಥ ರಾಜಕಾರಣಕ್ಕಾಗಿ ಸದನವನ್ನೇ ಸಂಪೂರ್ಣ ದಿಕ್ಕು ತಪ್ಪಿಸುವ ಕೆಲಸ ಮಾಡಿದ್ದಾರೆ ಎಂದು ಸಚಿವ ಬಿ. ಶ್ರೀರಾಮಲು ಕಾಂಗ್ರೆಸ್‌ ನಾಯಕರ ವಿರುದ್ಧ ಹರಿಹಾಯ್ದಿದ್ದಾರೆ.

ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್​ನವರು ಆಲಿಬಾಬಾ ಚಾಲೀಸ್ ಫರ್ ಚಾರ್ ಚೋರ್​ಗಳಿದ್ದಂತೆ. ಸದನ ನಡೆದರೆ ರಾಜ್ಯದಲ್ಲಿರುವ ಗಂಭೀರ ವಿಷಯಗಳು ಚರ್ಚೆ ಆಗುತ್ತವೆ. ಆದರೆ ಕಾಂಗ್ರೆಸ್​ನವರು ರಾಜಕೀಯ ಅಜೆಂಡಾ ಇಟ್ಟುಕೊಂಡು, ಸ್ವಾರ್ಥ ರಾಜಕಾರಣಕ್ಕಾಗಿ ಸದನವನ್ನೇ ದಿಕ್ಕು ತಪ್ಪಿಸುವ ಕೆಲಸ ಮಾಡಿದ್ದಾರೆ. ಸಿದ್ದರಾಮಯ್ಯ ಅವರೇ ವಿಚಾರಗಳನ್ನು ಮೈಮೇಲೆ ಎಳೆದುಕೊಂಡು ಸಮಸ್ಯೆ ಮಾಡಿಕೊಳ್ಳುತ್ತಿದ್ದಾರೆ. ಮಡಿಕೇರಿಗೆ ಹೋಗುವ ಪ್ರಯತ್ನ ಮಾಡಿದ್ದರು. ಅಲ್ಲಿ ಏನಾಯ್ತು ಎಂಬುದು ಗೊತ್ತಾಯ್ತು. ತಾಳ್ಮೆ ಇದ್ದರೆ ಆತನಿಗೆ ರಾಜಕಾರಣದಲ್ಲಿ ಭವಿಷ್ಯ ಇದೆ. ತಾಳ್ಮೆ ಕಳೆದುಕೊಂಡರೆ ಏನು ಮಾಡೋಕ್ಕಾಗುತ್ತೆ. ನಾನು ಏಳು ಚುನಾವಣೆಯಲ್ಲಿ ಆರು ಸಲ ಗೆದ್ದಿರುವುದು ಜನರು ನನ್ನ ಮೇಲಿಟ್ಟಿರುವ ಪ್ರೀತಿ ವಿಶ್ವಾಸದಿಂದ. ಬಹುಶಃ ನಾನು ಮತ್ತೆ ಬಾದಾಮಿಗೆ ಬಂದರೂ ಬರಬಹುದೇನೋ, ಇಲ್ಲೇ ಚುನಾವಣೆಗೆ ನಿಲ್ಲಬೇಕು ಎಂದು ಇನ್ನೂ ನಿರ್ಧಾರ ಮಾಡಿಲ್ಲ ಎಂದು ಪರೋಕ್ಷವಾಗಿ ಸಿದ್ದರಾಮಯ್ಯಗೆ ಟಾಂಗ್‌ ನೀಡಿದ್ರು.

ನಾನು ಬಾದಾಮಿಯಲ್ಲಿ ಸ್ಪರ್ಧಿಸುವ ಬಗ್ಗೆ ಪಕ್ಷ ತೀರ್ಮಾನ ತೆಗೆದುಕೊಳ್ಳುತ್ತದೆ. 2018ರಲ್ಲಿ ಬಾದಾಮಿ, ಮೊಳಕಾಲ್ಮೂರಲ್ಲಿ ಸ್ಪರ್ಧಿಸಲು ಅವಕಾಶ ನೀಡಿತ್ತು. ಪಾರ್ಟಿ ಅವಕಾಶ ಮಾಡಿಕೊಟ್ಟರೆ ಖಂಡಿತ ಬಾದಾಮಿಯಿಂದ ಸ್ಪರ್ಧೆ ಮಾಡುತ್ತೇನೆ. ಇದರಲ್ಲಿ ನನ್ನ ಒತ್ತಡ ಏನೂ ಇಲ್ಲ. ಪಕ್ಷ ಅಧಿಕಾರಕ್ಕೆ ಬರಬೇಕು. ಈ ಹಿನ್ನೆಲೆಯಲ್ಲಿ ಎಲ್ಲರೂ ಪ್ರಯತ್ನಿಸುತ್ತಿದ್ದೇವೆ ಎಂದು ಹೇಳಿದರು.

Related Articles

- Advertisement -

Latest Articles