Monday, March 27, 2023
spot_img
- Advertisement -spot_img

ಗೋಕಾಕ ಮತಕ್ಷೇತ್ರದಿಂದ ಸ್ಪರ್ಧಿಸಲು ಹೇಳಿದ್ರೆ ಸ್ಫರ್ಧಿಸುವೆ : ಶಾಸಕಿ ಲಕ್ಷ್ಮಿ ಹೆಬ್ಬಾಳಕರ್

ಬೆಳಗಾವಿ: ಕಾಂಗ್ರೆಸ್‌ ಹೈಕಮಾಂಡ್‌ ಗೋಕಾಕ ಮತಕ್ಷೇತ್ರದಿಂದ ಕಾಂಗ್ರೆಸ್‌ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡು ಎಂದರೆ ಕಣ್ಣು ಮುಚ್ಚಿಕೊಂಡು ಹೋಗಿ ಸ್ಪರ್ಧೆ ಮಾಡುತ್ತೇನೆ ಎಂದು ಶಾಸಕಿ ಲಕ್ಷ್ಮಿ ಹೆಬ್ಬಾಳಕರ್ ಹೇಳಿದರು.

ಸುದ್ದಿಗಾರರೊಂದಿಗೆ ಮಾತನಾಡಿ, ನಾನು ಪ್ರಾಕ್ಟಿಕಲ್ … ಪೊಲಿಟಿಷಿಯನ್‌. ನಾನು ಸುಮ್ಮನೆ ಗಾಳಿಯಲ್ಲಿ ಗುಂಡು ಹೊಡಿಯೋದಿಲ್ಲ. ಅದರ ಬಗ್ಗೆ ಅಭ್ಯಾಸ ಮಾಡಿ, ಹೋಮ್‌ ವರ್ಕ್ ಮಾಡುತ್ತೇನೆ. ಬೆಳಗಾವಿ ಜಿಲ್ಲೆಯಲ್ಲಿ ಸಾಕಷ್ಟುಕ್ಷೇತ್ರಗಳನ್ನು ಸೂಕ್ಷ್ಮವಾಗಿ ನೋಡುತ್ತಿದ್ದೇವೆ. 18 ವಿಧಾನಸಭಾ ಕ್ಷೇತ್ರಗಳಲ್ಲಿ ನಾವು ಗೆಲವು ಸಾಧಿಸುತ್ತೇವೆ ಎನ್ನುವುದು ಅತಿಶಯೋಕ್ತಿಯಾಗುತ್ತಿದೆ.

ಕಳೆದ 10, 15 ವರ್ಷದ ಲಕ್ಷ್ಮಿ ಹೆಬ್ಬಾಳಕರಗೂ, ಇವತ್ತಿನ ಲಕ್ಷ್ಮಿ ಹೆಬ್ಬಾಳಕರಗೂ ಬಹಳಷ್ಟುವ್ಯತ್ಯಾಸ ಇದೆ ಎಂದರು.
ಗೋಕಾಕನಲ್ಲಿ ಕೇವಲ ಕೆಲಸವಲ್ಲ ನಾನು ಕರದಂಟು ಏಕೆ ತಿನ್ನಬಾರದು? ಕಾಂಗ್ರೆಸ್‌ ಹೈಕಮಾಂಡ್‌, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ, ವಿಪಕ್ಷ ನಾಯಕ ಸಿದ್ದರಾಮಯ್ಯ, ಜಿಲ್ಲೆಯ ನಾಯಕರು ಒಪ್ಪಿಕೊಂಡರೆ ಗೋಕಾಕ ಚುನಾವಣೆಯಲ್ಲಿ ನಿಲ್ಲಲು ಸಿದ್ಧಳಿದ್ದೇನೆ.

ಎಕ್ಸಪಿರಿಯನ್ಸ್‌ ಮ್ಯಾನ್‌ ಪರ್ಫೆಕ್ಟ್ ಮ್ಯಾನ್‌ ಅಂತ ಹೇಳುತ್ತಾರೆ. ಆ ಹೊಡೆತ, ಅವಮಾನ, ಸನ್ಮಾನಗಳು ಸೋಲು, ಲಕ್ಷ್ಮಿ ಹೆಬ್ಬಾಳಕರ ಹಿಂದಿನ, ಇವತ್ತಿನ ಹೆಬ್ಬಾಳಕರಗೂ ಬಹಳ ವ್ಯತ್ಯಾಸ ಇದೆ. ನನಗೆ ಗೊತ್ತು ಗೋಕಾಕ ಜನತೆ ಏನು ಅಂತ. ನನಗೇನು ಹೊಸತೇನಲ್ಲ. ರಾಜಕೀಯ ದಾಳಗಳು, ಹೈಕಮಾಂಡ್‌ ಇಷ್ಟಪಟ್ಟರೆ, ಜನ ಸೂಚಿಸಿದರೇ ನಾನು ಗೋಕಾಕನಿಂದ ಸ್ಪರ್ಧೆ ಮಾಡುತ್ತೇನೆ ಎಂದರು.

Related Articles

- Advertisement -

Latest Articles