ಬೆಂಗಳೂರು : ಜನತೆ ಆಶೀರ್ವಾದ ಮಾಡಿದ್ರಿಂದ 5 ವರ್ಷ ಸಿಎಂ ಆಗಿದ್ದೆಎಂದು ಮಂಡ್ಯದಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ಮಾಧ್ಯಮದವರೊಂದಿಗೆ ಮಾತನಾಡಿ, ನಾವು ಯಾರಿಂದಲೂ ಛೀ ಥೂ ಅನಿಸಿಕೊಂಡು ಅಧಿಕಾರ ಮಾಡಲಿಲ್ಲ. ನುಡಿದಂತೆ ನಡೆದಿದ್ದೇವೆ. ಚುನಾವಣಾ ಪ್ರಣಾಳಿಕೆಯಲ್ಲಿ ನೀಡಿದ್ದ ಭರವಸೆಗಳ ಪೈಕಿ 158 ಭರವಸೆಗಳನ್ನ ಈಡೇರಿಸಿದ್ದೇವೆ. ಅದನ್ನು ಮೀರಿ 30ಕ್ಕೂ ಕಾರ್ಯಕ್ರಮ ಜಾರಿ ಮಾಡಿದ್ದೇವೆ ಎಂದರು.
ದೇವರು ಎಲ್ಲಾ ಕಡೆ ಇದ್ದಾನೆ ಅನ್ನೋದನ್ನ ತಿಳ್ಕೊಂಡಿದ್ದೇವೆ.
ಬರೀ ಗುಡಿಯಲ್ಲಿ ಅಷ್ಟೇ ಅಲ್ಲ. ದೇವರು ನಮ್ಮಲ್ಲೂ ಇದ್ದಾನೆ. ನಾವು ನಿತ್ಯ ಮಾಡುವ ಕೆಲಸವನ್ನ ದೇವರು ನೋಡ್ತಿರ್ತಾನೆ. ದೇಗುಲ ಕಟ್ಟೆದರೆ, ಪ್ರತಿಮೆ ಸ್ಥಾಪಿಸಿದರೆ ಸಾಲದು ಸತ್ಯವಂತರಾಗಿ ನಡೆದುಕೊಳ್ಳಬೇಕು ಎಂದಿದ್ದಾರೆ.ನಿಜ ಗುಣ ಅಳವಡಿಸಿಕೊಳ್ಳುವುದೇ ದೇವರಿಗೆ ಪ್ರೀತಿ. ನಮಗೋಷ್ಕರ ಅಲ್ಲ, ಎಲ್ಲರಿಗೋಷ್ಕರ ಒಳ್ಳೆಯದನ್ನೇ ಬಯಸಬೇಕು ಆಗ ಮಾತ್ರ ದೇವರು ಮೆಚ್ಚಲು ಸಾಧ್ಯ ಎಂದು ಹೇಳಿದ್ದಾರೆ.
ಎಲ್ಲಾ ಜಾತಿ ಬಡವರಿಗೆ ಕಾರ್ಯಕ್ರಮ ಕೊಟ್ಟಿದ್ದೇವೆ. ಕೆಲವೇ ಜಾತಿಗಳಿಗೆ ಸೀಮಿತವಾದ ಅಧಿಕಾರ ಮಾಡಲಿಲ್ಲ. ಅಕ್ಕಿ, ಹಾಲು, ಶೂ, ಸಮವಸ್ತ್ರ ಎಲ್ಲಾ ಧರ್ಮ, ಜಾತಿವರಿಗೂ ಉಪಯೋಗ ಆಗಿತ್ತು. ಈವತ್ತು ಎಲ್ಲವನ್ನೂ ಹಾಳು ಮಾಡ್ತಿದ್ದಾರೆ. ರಾಜ್ಯದಲ್ಲಿ 2 ವರ್ಷದಿಂದ ಸ್ಕಾಲರ್ ಶಿಪ್ ಕೊಟ್ಟಿಲ್ಲ. SC, ST ಮಕ್ಕಳು ನನ್ನ ಮುಂದೆ ದೂರುತ್ತಿದ್ದಾರೆ. ವಿದ್ಯಾಸಿರಿ ಕಾರ್ಯಕ್ರಮ ನಿಲ್ಲಿಸಿದ್ದಾರೆ. ಆದರೂ SC, STಗಳ ಬಗ್ಗೆ ಮಾತನಾಡಲಿಕ್ಕೆ ಇವರಿಗೆ ಯಾವ ನೈತಿಕತೆ ಇದೆ. ಕೃಷಿ ಭಾಗ್ಯ ಕಾರ್ಯಕ್ರಮ ಕೂಡ ನಿಲ್ಲಿಸಿದ್ದಾರೆ. ಇವರು ಅಧಿಕಾರಕ್ಕೆ ಬಂದಿರೋದೇ ಹಿಂಬಾಗಿಲಿನಿಂದ.ಹಿಂಬಾಗಿಲಿಂದ ಬಂದವರನ್ನು ಮುಂಬಾಗಲಿಂದಲೇ ಓಡಿಸೋಣ ಎಂದು ಕರೆ ನೀಡಿದ್ದಾರೆ.
ಇಂತಹವರು ಮತ್ತೆ ಅಧಿಕಾರಕ್ಕೆ ಬರಬೇಕೆ ನಾವು ಅಧಿಕಾರಕ್ಕೆ ಬಂದ್ರೆ ಜನೋಪಯೋಗಿ ಕೆಲಸ ಮಾಡ್ತೇವೆ. ಮೈಶುಗರ್ ಕಾರ್ಖಾನೆಗೆ ಘೋಷಿಸಿದ ಅನುದಾನ ಕೊಡಲಿಲ್ಲ. ನಮ್ಮ ಸರ್ಕಾರ ಬಂದ್ರೆ ಫ್ಯಾಕ್ಟರಿ ಓಪನ್ ಮಾಡ್ತೀವಿ ಎಂದು ಭರವಸೆ ನೀಡಿದ್ದಾರೆ.