ನವದೆಹಲಿ: ಭಾರತ್ ಜೋಡೋ ಯಾತ್ರೆಯುದ್ದಕ್ಕೂ ಜನರ ಧ್ವನಿ ಆಲಿಸಲು ಸಾಧ್ಯವಾಗಿರುವುದಕ್ಕೆ ಬಿಜೆಪಿ ಮತ್ತು ಆರ್‌ಎಸ್‌ಎಸ್‌ನ ಜನರಿಗೆ ನಾನು ಧನ್ಯವಾದ ಹೇಳಲು ಬಯಸುತ್ತೇನೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿದರು.
ಮಾಧ್ಯಮಗೋಷ್ಟಿಯಲ್ಲಿ ಮಾತನಾಡಿ, ಭಾರತೀಯ ಜನತಾ ಪಕ್ಷವನ್ನು ನಾನು ನನ್ನ ಗುರು ಎಂದು ಪರಿಗಣಿಸಿದ್ದೇನೆ. ಏಕೆಂದರೆ, ಬಿಜೆಪಿ ನನಗೆ ಮಾರ್ಗಸೂಚಿಯನ್ನು ತೋರಿಸುತ್ತದೆ ಮತ್ತು ಯಾವತ್ತೂ ಏನು ಮಾಡಬಾರದು ಎಂಬುವುದು ಕೂಡ ನನಗೆ ಬಿಜೆಪಿಗೆ ಕಲಿಸುತ್ತದೆ ಎಂದರು.
ಪ್ರತಿಪಕ್ಷಗಳು ದೂರದೃಷ್ಟಿಯೊಂದಿಗೆ ಸಮರ್ಥವಾಗಿ ನಿಂತರೆ, ಚುನಾವಣೆಯಲ್ಲಿ ಗೆಲ್ಲುವುದು ಬಿಜೆಪಿಗೆ ತುಂಬಾ ಕಷ್ಟಕರವಾಗುತ್ತದೆ. ಆದರೆ ಪ್ರತಿಪಕ್ಷಗಳು ಸರಿಯಾಗಿ ಸಮನ್ವಯ ಸಾಧಿಸಬೇಕು ಮತ್ತು ಪ್ರತಿಪಕ್ಷಗಳು ಪರ್ಯಾಯ ದೃಷ್ಟಿಯೊಂದಿಗೆ ಜನರ ಬಳಿಗೆ ಹೋಗಬೇಕಿದೆ ಎಂದೂ ರಾಹುಲ್ ಗಾಂಧಿ ಅಭಿಪ್ರಾಯಪಟ್ಟರು.
ಬಿಜೆಪಿ ನಮ್ಮ ಮೇಲೆ ಆಕ್ರಮಣಕಾರಿಯಾಗಿ ದಾಳಿ ಮಾಡಬೇಕೆಂದು ನಾನು ಬಯಸುತ್ತೇನೆ. ಇದು ಕಾಂಗ್ರೆಸ್ ಪಕ್ಷದ ಸಿದ್ಧಾಂತವನ್ನು ಅರ್ಥಮಾಡಿಕೊಳ್ಳಲು ಸಹಾಯ ಮಾಡುತ್ತದೆ. ನಾನು ಅವರನ್ನು ಬಿಜೆಪಿ ನನ್ನ ಗುರು ಎಂದು ಪರಿಗಣಿಸುತ್ತೇನೆ. ಅವರು ನನಗೆ ದಾರಿ ತೋರಿಸುತ್ತಿದ್ದಾರೆ ಮತ್ತು ಏನು ಮಾಡಬಾರದು ಎಂದು ನನಗೆ ತರಬೇತಿ ನೀಡುತ್ತಿದ್ದಾರೆ ಎಂದೂ ಹೇಳಿದರು.
ಭಾರತ್ ಜೋಡೋ ಯಾತ್ರೆಯು ಡಿ.24ರಂದು ನವದೆಹಲಿಯನ್ನು ಪ್ರವೇಶಿಸಿದ ನಂತರ, ಒಂಬತ್ತು ದಿನಗಳ ಕಾಲ ವಿರಾಮ ತೆಗೆದುಕೊಳ್ಳಲಾಗಿದೆ. ಈ ಯಾತ್ರೆ ಬಗ್ಗೆ ಮಾತನಾಡಿದ ಅವರು, ನಾನು ಇದನ್ನು ಪ್ರಾರಂಭಿಸಿದಾಗ ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ಅದನ್ನು ಸಾಮಾನ್ಯ ಯಾತ್ರೆಯಾಗಿ ತೆಗೆದುಕೊಂಡೆ ಎಂದು ತಿಳಿಸಿದರು.