ಬೆಂಗಳೂರು: ‘ಸಿದ್ದರಾಮಯ್ಯ ಬಣದ ಆಪ್ತರಿಂದ ಡಿ.ಕೆ. ಶಿವಕುಮಾರ್ ವಿರುದ್ದ ‘ಡಿಸಿಎಂ’ ಕಾರ್ಡ್ ಪ್ಲೇ ಮಾಡ್ತಿದ್ದಾರೆ’ ಎಂಬ ವಿಚಾರಕ್ಕೆ ಪ್ರತಿಕ್ರಿಯಿಸಿದ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಮಾಧ್ಯಮ ಪ್ರತಿನಿಧಿಗಳ ಮೇಲೆ ಕಿಡಿಕಾರಿದರು.
‘ನಿಮ್ಮ ಹತ್ತಿರ (ಮಾಧ್ಯಮ) ಬಣ ಇರಬೇಕು; ನಿಮಗೆ ತಲೆ ಕೆಟ್ಟಿರಬೇಕು. ಅದಕ್ಕೇ ಬಣ ಅಂತ ಹೇಳ್ತಿದ್ದೀರಾ. ನನ್ನ ರಾಜಕೀಯ ಜೀವನದಲ್ಲಿ ನಾನು ಯಾವತ್ತೂ ಬಣ ರಾಜಕೀಯ ಮಾಡಿಲ್ಲ. ನಾನು ಬೆಂಬಲವನ್ನೂ ಕೊಟ್ಟಿಲ್ಲ, ಅದರ ಅವಶ್ಯಕತೆ ಇಲ್ಲ. ಕಷ್ಟ ಕಾಲದಲ್ಲೇ ನಾನು ಬಣ ರಾಜಕೀಯ ಮಾಡಿಲ್ಲ. ಮಾಡುವುದಿದ್ದರೆ ನಾನು ಬಂಗಾರಪ್ಪ ಕಾಲದಲ್ಲೇ ಬಣ ರಾಜಕೀಯ ಮಾಡ್ತಿದ್ದೆ’ ಎಂದರು.
ಇದನ್ನೂ ಓದಿ; ಸಿರಾಜ್ ಟೀಂ ಇಂಡಿಯಾದ ಬೆಂಕಿ ಚೆಂಡು ಎಂದ ಡಿ.ಕೆ. ಶಿವಕುಮಾರ್!
‘ನನ್ನದು ಒಂದೇ ಒಂದು ಬಣ; ಅದು ಕಾಂಗ್ರೆಸ್ ಬಣ. ಬಣದ ಬಗ್ಗೆ ಮತ್ತೆ ಮಾತಾಡಿದ್ರೆ ನಾನು ಮಾಧ್ಯಮಗಳಿಗೆ ಉತ್ತರ ಕೊಡುವುದಿಲ್ಲ’ ಎಂದು ಹೇಳಿದರು.
ಹಬ್ಬಕ್ಕೆ ಶುಭಕೋರಿದ ಡಿಕೆಶಿ:
ನಾಡಿನ ಜನರಿಗೆ ಗೌರಿ-ಗಣೇಶ್ ಹಬ್ಬಕ್ಕೆ ಶುಭ ಕೋರಿದ ಡಿಸಿಎಂ ಡಿಕೆ ಶಿವಕುಮಾರ್, ‘ರಾಜ್ಯದಲ್ಲಿ ಇರುವ ಎಲ್ಲ ವಿಘ್ಞಗಳು ವಿನಾಶವಾಗಲಿ. ಸಂಸತ್ ನಡೆಯುವ ಸಮಯದಲ್ಲಿ ರಾಜ್ಯದ ಎಲ್ಲ ಸಂಸದರನ್ನು ಭೇಟಿ ಮಾಡುವ ಚಿಂತನೆ ಇದೆ. ಸರ್ವಪಕ್ಷ ನಿಯೋಗ ಕರೆದುಕೊಂಡು ಹೋಗ್ಬೇಕು. ಆದರೆ, ಪ್ರಧಾನಮಂತ್ರಿಗಳು ಇನ್ನೂ ಅವಕಾಶ ಕೊಟ್ಟಿಲ್ಲ. ಕಾವೇರಿ ನೀರಿನ ಬಗ್ಗೆ ಸುಪ್ರೀಂಕೋರ್ಟಿಗೆ ಹೋಗ್ತಿದ್ದೀವಿ. ಕೋರ್ಟ್ ಎರಡೂ ಕಡೆಯಲ್ಲಿ ವಾಸ್ತವಾಂಶ ನೋಡಲಿ’ ಎಂದರು.
ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ Twitter, Facebook , Youtube, Instagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.