Wednesday, November 29, 2023
spot_img
- Advertisement -spot_img

ಕರೆಂಟ್‌ ಕಳ್ಳ ಪೋಸ್ಟರ್‌; ನಾನು ಅದರ ಬಗ್ಗೆ ಮಾತನಾಡಲ್ಲ: ಡಿಕೆಶಿ

ಬೆಂಗಳೂರು: ಜೆಡಿಎಸ್‌ ಕಚೇರಿ ಬಳಿ ಕರೆಂಟ್‌ ಕಳ್ಳ ಪೋಸ್ಟರ್‌ ವಿಚಾರವಾಗಿ ನಾನು ಕಾಮೆಂಟ್‌ ಮಾಡಲು ಹೋಗುವುದಿಲ್ಲ. ಅದು ಯಾರೇ ಮಾಡಿದ್ರೂ ಸರಿ ಅಲ್ಲ. ಕುಮಾರಸ್ವಾಮಿ ಅವರೇ ಮಾಡಿದ್ದಾರೆ ಅಂತ ನಾನು ಹೇಳಲು ತಯಾರಿಲ್ಲ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್‌ ಹೇಳಿದರು.

ಕರೆಂಟ್‌ ಕಳ್ಳ ಎಂಬ ಆರೋಪದ ಹಿನ್ನೆಲೆ ಮಾಜಿ ಸಿಎಂ ಕುಮಾರಸ್ವಾಮಿ ವಿರುದ್ಧ ಎಫ್‌ಐಆರ್ ದಾಖಲು ವಿಚಾರ ಬಗ್ಗೆ ಪ್ರತಿಕ್ರಿಯಿಸಿದ ಅವರು, ಅವರು ಹೇಳಿದಂತೆ ಯಾರೋ ಸಿಬ್ಬಂದಿ ಮಾಡಿರಬಹುದು, ಅದನ್ನ ಅವರು ಒಪ್ಪಿಕೊಂಡಿದ್ದಾರೆ, ಅದು ಅವರ ದೊಡ್ಡತನ. ಯಾರೋ ತಪ್ಪು ಮಾಡಿದ್ದಾರೆ ಅದನ್ನ ಅವರು ಒಪ್ಪಿಕೊಂಡಿದ್ದಾರೆ ಎಂದರು.

ಹತಾಶರಾಗಿ ಕೆಲವೊಂದು ವಿಚಾರ ಮಾತನಾಡ್ತಾರೆ. ಅದಕ್ಕೆಲ್ಲ ನಾನು ತಲೆಕೆಡಿಸಿಕೊಳ್ಳಲ್ಲ . ಎಫ್‌ಐಆರ್ ಆಗಿರುವ ಬಗ್ಗೆ ನನಗೆ ಗೊತ್ತಿಲ್ಲ, ಅವರೇ ಫೈನ್ ಕಟ್ಟುತ್ತೇನೆ ಅಂತ ಹೇಳಿದ್ದನ್ನ ನಾನು ಟಿವಿಯಲ್ಲಿ ನೋಡಿದೆ ಎಂದು ಹೇಳಿದರು.

ಇದನ್ನೂ ಓದಿ: ₹353 ಕೋಟಿ ಭ್ರಷ್ಟಾಚಾರ ಪ್ರಕರಣ: ಲೆಫ್ಟಿನೆಂಟ್ ಗವರ್ನರ್‌ಗೆ 670 ಪುಟಗಳ ವರದಿ ಸಲ್ಲಿಸಿದ ಕೇಜ್ರಿವಾಲ್

ಮಾಜಿ ಸಿಎಂ ಎಚ್​.ಡಿ. ಕುಮಾರಸ್ವಾಮಿ ವಿರುದ್ಧ ದೀಪಾವಳಿ ಹಬ್ಬದಂದು ಮನೆಗೆ ದೀಪಾಲಂಕಾರ ಮಾಡಲು ನೇರವಾಗಿ ವಿದ್ಯುತ್​ ಕಂಬದಿಂದ ಸಂಪರ್ಕ ಮಾಡಿ ವಿದ್ಯುತ್​ ಕಳ್ಳತನ ಮಾಡಿರುವ ವಿಚಾರದ ಚರ್ಚೆ ನಡೆಯುತ್ತಿದ್ದು, ಜೆಡಿಎಸ್​ ಕಚೇರಿಯ ಗೋಡೆಯ ಮೇಲೆ 7 ಪೋಸ್ಟರ್​ಗಳನ್ನು ಅಂಟಿಸಲಾಗಿದ್ದು ಕುಮಾರಸ್ವಾಮಿಯವರನ್ನು ವಿದ್ಯುತ್​ ಕಳ್ಳ, ಕರೆಂಟ್ ಕಳ್ಳ ಎಂದು ಕಿಡಿಗೇಡಿಗಳು ಪೋಸ್ಟರ್​ ಅಂಟಿಸಿ ಪರಾರಿಯಾಗಿದ್ದಾರೆ.

ಕುಮಾರಸ್ವಾಮಿಯವರೇ 200 ಯೂನಿಟ್​ ಉಚಿತವಾಗಿದೆ, ನೆನಪಿಟ್ಟುಕೊಳ್ಳಿ, ಹೆಚ್ಚು ಕದಿಯಬೇಡಿ ಎಂದು ಪೋಸ್ಟರ್​ ಅಂಟಿಸಲಾಗಿದೆ. ಈ ಘಟನೆ ನಡೆದಾಗ ನಾನು ಬಿಡದಿಯ ತೋಟದಲ್ಲಿದ್ದೆ. ನಿನ್ನೆ ರಾತ್ರಿ ಮನೆಗೆ ವಾಪಸ್ ಬಂದಾಗ ಈ ವಿಷಯ ನನ್ನ ಗಮನಕ್ಕೆ ಬಂತು. ತಕ್ಷಣ ಅದನ್ನು ತೆಗೆಸಿ, ಮನೆಯ ಮೀಟರ್ ಬೋರ್ಡ್‌ನಿಂದಲೇ ವಿದ್ಯುತ್ ಸಂಪರ್ಕ ಕಲ್ಪಿಸುವಂತೆ ಮಾಡಿದ್ದೇನೆ. ಇದು ವಾಸ್ತವ ಸ್ಥಿತಿ. ಬೆಸ್ಕಾಂ ಅಧಿಕಾರಿಗಳು ಬಂದು ಪರೀಕ್ಷೆ ಮಾಡಿ ನೋಟಿಸ್ ನೀಡಲಿ. ದಂಡ ಕಟ್ಟುತ್ತೇನೆ ಎಂದು ಹೆಚ್‌ಡಿಕೆ ಟ್ವೀಟ್ ಮಾಡಿದ್ದರು.

ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ TwitterFacebook YoutubeInstagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Related Articles

- Advertisement -spot_img

Latest Articles