ಬೆಂಗಳೂರು : ನನಗೆ 2 ಬಾರಿ ಹೃದಯ ಚಿಕಿತ್ಸೆ ಆಗಿದೆ, ಎಷ್ಟು ದಿನ ಬದುಕ್ತಿನೋ ಗೊತ್ತಿಲ್ಲ. ನಿಮ್ಮ ಬದುಕು ಸರಿಪಡಿಸೋದೆ ನನ್ನ ಗುರಿಯಾಗಿದೆ ಎಂದು ಮಾಜಿ ಸಿಎಂ ಕುಮಾರಸ್ವಾಮಿ ಹೇಳಿದ್ದಾರೆ.
ಕೊಪ್ಪಳ ಜಿಲ್ಲೆಯ ಕುಷ್ಟಗಿಯಲ್ಲಿ ನಡೆಯುತ್ತಿರುವ ಪಂಚರತ್ನ ರಥಯಾತ್ರೆ ಸಮಾವೇಶದಲ್ಲಿ ಮಾತನಾಡಿ, ನನ್ನ ಪರ ಜೈಕಾರ ಹಾಕುತ್ತೀರಿ ಕೂಗುತ್ತೀರಿ, ಆದ್ರೆ ಓಟು ಹಾಕುವುದಿಲ್ಲ.ಇದರಲ್ಲಿ ನಮ್ಮದು ತಪ್ಪಿದೆ, ಅಭ್ಯರ್ಥಿ ಹಾಕುವುದರಲ್ಲಿ ಎಡವಿದ್ದೇವೆ. ಕುಷ್ಟಗಿಯ ತುಕಾರಾಂ ಒಳ್ಳೆಯ ಕೆಲಸ ಮಾಡಿದ್ದಾರೆ. ಆದರೆ ಕನಕಗಿರಿಯ ಅಶೋಕ್ ಕೆಲಸ ನಮಗೆ ಸಮಾಧಾನ ತಂದಿಲ್ಲ ಎಂದರು.
ಜೆಡಿಎಸ್ ಅಧಿಕಾರಕ್ಕೆ ಬಂದ 24 ಗಂಟೆಯಲ್ಲಿ ‘ಸ್ತ್ರೀ ಶಕ್ತಿ’ ಸಂಘದ ಸಾಲಮನ್ನಾ ಮಾಡಲಾಗುತ್ತದೆ. ವಿಧವಾ ವೇತನ ಮಾಸಿಕ 2500 ರೂಗೆ ಹೆಚ್ಚಳ ಮಾಡಲಾಗುತ್ತದೆ ಎಂದು ಘೋಷಿಸಿದ್ದಾರೆ.ಸರ್ಕಾರದ ಖಜಾನೆಯನ್ನು ಕೆಲವರು ದೋಚುತ್ತಿದ್ದಾರೆ. 40-50 % ಕಮಿಷನ್ ಮೂಲಕ ಭ್ರಷ್ಟಾಚಾರ ನಡೆಸುತ್ತಿದ್ದಾರೆ ಎಂದು ಬಿಜೆಪಿ ಸರ್ಕಾರದ ವಿರುದ್ಧ ವಾಗ್ಧಾಳಿ ನಡೆಸಿದರು.
ಕುಷ್ಟಗಿ ತಾಲ್ಲೂಕಿನ ಜೆಡಿಎಸ್‌ದಲ್ಲಿ ಯಾವುದೇ ಭಿನಾಭಿಪ್ರಾಯ, ಅಸಮಾಧಾನ ಇಲ್ಲ. ಎಲ್ಲವನ್ನೂ ಬಗೆಹರಿಸಿ ಎಲ್ಲರೂ ಸೇರಿ ಜನವರಿ 30ರಂದು ನಡೆಯುವ ಪಂಚರತ್ನ ಸಮಾವೇಶ ಯಶಸ್ವಿಗೊಳಿಸುತ್ತೇವೆ’ ಎಂದು ಜೆಡಿಎಸ್ ನಿಯೋಜಿತ ಅಭ್ಯರ್ಥಿ ತುಕಾರಾಮ ಸೂರ್ವೆ ತಿಳಿಸಿದ್ದರು.
‘ಪಕ್ಷದಲ್ಲಿ ನಿಷ್ಠೆಯಿಂದ ಕೆಲಸ ಮಾಡಿದ್ದಕ್ಕೆ ಟಿಕೆಟ್ ಸಿಕ್ಕಿದೆಯೇ ಹೊರತು ಅದರಲ್ಲಿ ಯಾರ ಪ್ರಯತ್ನವೂ ಇಲ್ಲ. ಐದು ವರ್ಷಗಳಿಂದ ತಾಲ್ಲೂಕಿನಲ್ಲಿ ನಿಷ್ಕ್ರಿಯಗೊಂಡಿರುವ ಸಂಘಟನೆ ಬಲಪಡಿಸಲಿದ್ದೇವೆ ಎಂದಿದ್ದರು.