ಬೆಂಗಳೂರು : ಸಚಿವ ಸ್ಥಾನ ಯಾವಾಗ ಕೊಡುತ್ತಾರೆ ಎಂಬ ಬಗ್ಗೆ ನನಗೆ ಮಾಹಿತಿ ಇಲ್ಲ, ತಲೆ ಕೆಡಿಸಿಕೊಳ್ಳಲ್ಲ ಎಂದು ಮಾಜಿ ಸಚಿವ ಕೆ ಎಸ್ ಈಶ್ವರಪ್ಪ ತಿಳಿಸಿದ್ದಾರೆ.
ಶಿವಮೊಗ್ಗದಲ್ಲಿ ಮಾತನಾಡಿ, ಮಂತ್ರಿ ಆಯ್ತು, ಇಲ್ಲದಿದ್ರೆ ಇಲ್ಲ, ಎಲ್ಲ ಶಾಸಕರೂ ಸಚಿವರಾಗಬೇಕೆಂದೇನೂ ಇಲ್ಲವಲ್ಲ, ಸರ್ಕಾರವಂತೂ ಚೆನ್ನಾಗಿಯೇ ನಡೆಯುತ್ತಿದೆ, ನನ್ನನ್ನು ಸಚಿವನನ್ನಾಗಿ ಮಾಡಬೇಕು ಎಂದು ಸಿಎಂ ಬಳಿ ಅಪೇಕ್ಷೆ ಪಟ್ಟಿದ್ದೆ.ಈ ಬಗ್ಗೆ ಎಲ್ಲ ಪ್ರಯತ್ನ ಮಾಡೋದಾಗಿಯೂ ಸಿಎಂ ಬೊಮ್ಮಾಯಿ ಹೇಳಿದ್ದರು. ಆದರೆ ಈಗ ನಾನು ಸಚಿವ ಸ್ಥಾನದ ಆಸೆಯನ್ನೇ ಬಿಟ್ಟಿದ್ದೇನೆ ಎಂದರು.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತಮ್ಮನ್ನು ಶೀಘ್ರದಲ್ಲಿಯೇ ಸಚಿವರನ್ನಾಗಿ ಮಾಡುವುದಾಗಿ ಭರವಸೆ ನೀಡಿದ್ದರು. ಆದರೆ ಸಚಿವ ಸ್ಥಾನದ ಬಗ್ಗೆ ಸದ್ಯ ಮಾಹಿತಿ ಇಲ್ಲ ಎಂದಿದ್ದಾರೆ.
ಅವರಾಗಿಯೇ ಸಚಿವನನ್ನಾಗಿ ಮಾಡಿದರೆ ಸಂತೋಷ, ಇಲ್ಲವಾದರೆ ಇಲ್ಲ, ಮಂತ್ರಿಯಾಗಬೇಕು ಎಂಬ ಕಾರಣಕ್ಕೆ ಸರ್ಕಾರದಲ್ಲಿ ನಾನೇ ಒಂದು ಸಮಸ್ಯೆಯಾಗಲು ಇಷ್ಟಪಡಲ್ಲ, ಸಚಿವ ಸ್ಥಾನದ ಬಗ್ಗೆ ತಲೆಕೆಡಿಸಿಕೊಳ್ಳುವುದನ್ನೇ ಬಿಟ್ಟಿದ್ದೇನೆ ಎಂದು ತಿಳಿಸಿದ್ದಾರೆ.