ಬೀದರ್ : ರಾಜಕೀಯದಿಂದ ದೂರ ಉಳಿಬೇಕು ಎಂದು ನಾನು ನಿರ್ಣಯಿಸಿದ್ದೇನೆ ಎಂದು ಮಾಜಿ ಸಿಎಂ ಹೆಚ್.ಡಿಕೆ ಪುತ್ರ ನಿಖಿಲ್ ಕುಮಾರಸ್ವಾಮಿ ಹೇಳಿದ್ದಾರೆ.
ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಈಗಾಗಲೇ ನಾನು ಸಿನಿಮಾ ಶೂಟ್ ಪ್ರಾರಂಭ ಮಾಡಿ ಒಂದು ವಾರವಾಗಿದೆ, ನಾವು ಲೋಕಸಭಾ ಚುನಾವಣೆಗೆ ಎಲ್ಲೆಲ್ಲಿ ಸ್ಪರ್ಧೆ ಮಾಡಬೇಕು ಎಂದು ನಿರ್ಧರಿಸ್ತೇವೆ, ನಾನು ಮುಂದಿನ ಲೋಕಸಭಾ ಚುನಾವಣೆಯಲ್ಲಿ ಕಾರ್ಯಕರ್ತನಾಗಿ ಓಡಾಡುತ್ತೇನೆ ಎಂದು ತಿಳಿಸಿದರು.
ಲೋಕ ಸಮರಕ್ಕೆ ಬಿಜೆಪಿ ಹಾಗೂ ಜೆಡಿಎಸ್ ಮೈತ್ರಿ ವಿಚಾರವಾಗಿ ಮಾತನಾಡಿದ ಅವರು, ಈ ಎಲ್ಲಾ ನಿಮ್ಮ ಕುತೂಹಲಕ್ಕೆ ನಮ್ಮ ಪಕ್ಷ ತೆರೆ ಎಳೆಯುತ್ತಾರೆ, ದೇವೇಗೌಡ್ರು ಹಾಗೂ ಕುಮಾರಸ್ವಾಮಿ ಈ ವಿಚಾರಕ್ಕೆ ಅತಿ ಶೀಘ್ರದಲ್ಲೇ ತೆರೆ ಎಳೆಯುತ್ತಾರೆ ಎಂದರು.
ಇದನ್ನೂ ಓದಿ: ವಿಶೇಷ ಅಧಿವೇಶನದಲ್ಲಿ ಮಹಿಳಾ ಮೀಸಲಾತಿ ಮಸೂದೆ ಅಂಗೀಕರಿಸಲು ಕಾಂಗ್ರೆಸ್ ಆಗ್ರಹ
ಒಂದು ಪ್ರಾದೇಶಿಕ ಪಕ್ಷ ಕಟ್ಟೋದು ಬಹಳ ಕಷ್ಟ, ದೇವೇಗೌಡ್ರ ಹೋರಾಟದ ಶ್ರಮದಿಂದ ಹಾಗೂ ಉತ್ಸಾಹಿ ಕಾರ್ಯಕರ್ತರಿಂದ ಪಕ್ಷ ಕಟ್ಟಲಾಗಿದೆ, ಕುಮಾರಸ್ವಾಮಿ ಬಹಳ ಯಶಸ್ವಿಯಾಗಿ 25 ವರ್ಷ ಮುನ್ನಡೆಸಿಕೊಂಡು ಹೋಗಿದ್ದಾರೆ, ಬಹಳಷ್ಟು ಹಿರಿಯ ನಾಯಕರ ಕೊಡುಗೆ ಈ ಪಕ್ಷಕ್ಕಿದೆ ಎಂದು ವಿವರಿಸಿದರು.
ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ Twitter, Facebook , Youtube, Instagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.